ದ್ವಿಶತಕದತ್ತ ಕೊರೊನಾ ಸೋಂಕಿತರ ಸಂಖ್ಯೆ..!

ತಿಪಟೂರು:

    ತಾಲ್ಲೂಕಿನಲ್ಲಿ ಇಂದು ಆಸ್ಫೋಟಿಸಿ ಮತ್ತೆ 17 ಜನರನ್ನುತನ್ನ ವಶಕ್ಕೆ ತೆಗೆದುಕೊಂಡಿದೆ. ಕೊರೊನಾ, ಒಟ್ಟು63 ಜನಕೊರೊನಾ ಸೋಂಕಿತರು ಸಕ್ರೀಯವಾಗಿದ್ದು, ಒಟ್ಟು183 ಸೋಂಕಿತರನ್ನು ಹೊದ್ದಿದ್ದುಜಿಲ್ಲೆಯಲ್ಲಿ 4ನೇ ಸ್ಥಾನಕ್ಕೇರುವುದರೊಂದಿಗೆ ಇಬ್ಬರನ್ನು ಆಹುತಿತೆಗೆದುಕೊಂಡಿದೆ.

    ನಗರದಲ್ಲಿಒಟ್ಟು 29 ಕಂಟೋನ್ಮೆಟ್ ಜೋನ್‍ಗಳಿದ್ದು, ಗ್ರಾಮಾಂತರ ಪ್ರದೇಶಗಳಿಗೂ ಕೊರೊನಾ ಕಾರ್ಮೋಡ ಆವರಿಸುತ್ತಿದೆ .ಇಂದು ತಾಲ್ಲೂಕು ಕಛೇರಿಯ ಸಿಬ್ಬಂದಿ ಒಬ್ಬರಿಗೆ ಸೋಂಕು ಧೃಡಪಟ್ಟಿದ್ದು ತಾಲ್ಲೂಕು ಕಛೇರಿಗೆ ಸ್ಯಾನಿಟೈಸೇಷನ್ ಮಾಡಲಾಗಿದೆ.ಪ್ರಕರಣಗಳು ಕಂಡು ಬಂದಿದ್ದು ಎಲ್ಲಾ ಕಡೆಯೂ ಸ್ಯಾನಿಟೀಷನ್‍ ಮಾಡಿ ಸೀಲ್‍ಡೌನ್ ಮಾಡಲಾಗಿದೆ.ಕೊರೊನಾ ಸೋಂಕಿತರು ದ್ವಿಶತಕದತ್ತ ಮುನ್ನುಗ್ಗುತ್ತಿದ್ದರು ಇಂದು 10ಜನರು ಬಿಡುಗಡೆಯಾಗಿದ್ದಾರೆ.ಈಗಲಾದರೂ ಸಾರ್ವಜನಿಕರು ತಮ್ಮ ಆರೋಗ್ಯ ತಮ್ಮದೇ ಎಂದು ತಿಳಿದು ಸರ್ಕಾರದ ಕೋವಿಡ್ ಆದೇಶಗಳನ್ನು ಪಾಲಿಸುತ್ತಾ ಜಾಗರೂಕರಾಗಿರದಿದ್ದರೆ ಅಪಾಯದ ಮಟ್ಟ ಮತ್ತಷ್ಟು ಬಿಗಡಾಯಿಸಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link