ಹೊರರಾಜ್ಯದಿಂದ ಬಂದವರಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯ : ಜೆ.ಸಿ.ಎಂ

ತಿಪಟೂರು :

      ಹೊರ ರಾಜ್ಯಗಳಿಂದ ಬಂದವರಿಗೆ ಕೋವಿಡ್-19 ಪರೀಕೆÉ್ಷ ಕಡ್ಡಾಯವಾಗಿದೆ ಮತ್ತು ಸರಕಾರ ಲಾಕ್‍ಡೌನ್ ಸಡಿಲಗೊಳಿಸಿದ್ದರು ಜಾಗ್ರತೆಇದ್ದು, ಸಿಲ್‍ಡೌನ್ ಆದ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ ತಿಳಿಸಿದರು

     ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು ಎ.ಪಿ.ಎಂ.ಸಿ ಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಸಬೇಕು ಹಾಗೇಯೇ ಬೇರೆಬೇರೆ ರಾಜ್ಯಗಳಿಗೆ ಟ್ರಕ್‍ಗಳಲ್ಲಿ ಹೋಗಿ ಬರುವ ಚಾಲಕ ಮತ್ತು ಸಿಬ್ಬಂದಿಯ ಮೇಲೆ ತೀವ್ರ ನಿಗವಹಿಸಿ ಕ್ವಾರಂಟೈನ್ ಇಡ ಬೇಕು ಎಂದ ಅವರು ಕೊರೊನಾ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗದಂತೆ ಪ್ರತಿ ತಾಲೂಕುಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹೊರ ರಾಜ್ಯಗಳಿಂದ ಬಂದವರ ಬಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು..

     ನಾಗರೀಕರು ಯಾವುದಾದರೂ ಮಾಹಿತಿಕೊಟ್ಟ ತಕ್ಷಣವೇ ಸ್ಥಳ ಪರೀಕ್ಷೆಮಾಡಬೇಕು. ಇದು ಕೇವಲ ಅಧಿಕಾರಿಗಳ ಕೆಲಸವನ್ನು ಕೊರೊನಾವಾರಿಯರ್ಸ್ ಅಲ್ಲದೇ ಪ್ರತಿಯೊಬ್ಬ ನಾಗರೀಕರು ಕೊರೊನಾ ವಾರಿಯರ್ರ್ಸ್ ಆಗಿ ಕಾರ್ಯನಿರ್ವಹಿಸಿಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು.

     ನಂತರ ನಗರದಲ್ಲಿ ಸಿಲ್‍ಡೌನ್ ಆಗಿರುವ ನಗರದ ಚಾಮುಂಡೇಶ್ವರಿ ಬಡವಾಣೆಗೆ ಶಾಸಕ ನಾಗೇಶ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಎಸ್.ಪಿ ವಂಶಿಕೃಷ್ಣ, ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಸೀಲ್ದಾರ್ ಆರತಿಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap