ಪಕ್ಷ ಸಂಘಟನೆ : ನೂತನ ಪ್ರಯೋಗಕ್ಕೆ ಕೈಹಾಕಿದ ಡಿ ಕೆ ಶಿವಕುಮಾರ್

ಬೆಂಗಳೂರು

     ಪಕ್ಷಸಂಘಟನೆಯನ್ನು ಬಲಗೊಳಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನಿಂದ ದೂರ ಸರಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.ಈ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಿದ್ದು, ಮತ್ತೆ ಕಾಂಗ್ರೆಸ್ ನ ಗತ ವೈಭವವನ್ನು ಮರಳಿ ತರಲು ಕಾರ್ಯಯೋಜನೆ ರೂಪಿಸುತ್ತಿದ್ದಾರೆ.

     ವಿವಿಧ ಪಕ್ಷಗಳಿಗೆ ಸೇರಿರುವ, ಕಾಂಗ್ರೆಸ್ ಬಿಟ್ಟು ಹೋಗಿದ್ದ ಮತ್ತಿತರ ಆಸಕ್ತ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲು ಬಯಸಿದರೆ , ಅವರುಗಳನ್ನು ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ಪಡೆದು ಪಕ್ಷ ಸೇರ್ಪಡೆಗೊಳ್ಳುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಲುವಾಗಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದಾರೆ.

    ಕೆಪಿಸಿಸಿ ಸಂಚಾಲಕ ಅಲ್ಲಂ ವೀರಭದ್ರಪ್ಪ ಮುಖಂಡರಾದ ಬಿ.ಎ, ಹಸನಬ್ಬ, ವಿ.ಮುನಿಯಪ್ಪ , ಶಾಸಕ ಅಜಯ್ ಕುಮಾರ್ ಸರ್‍ನಾಯಕ್ , ಮಾಜಿ ಶಾಸಕ ಅಭಯಚಂದ್ರ ಜೈನ್ , ಮಾಜಿ ಸಂಸದ ಆರ್ . ಧ್ರುವನಾರಾಯಣ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ , ಮಾಜಿ ಸಂಸದ ವಿ . ವೈ . ಘೋರ್ಪಡೆ , ಮಾಜಿ ಪ್ರಧಾನ ಕಾರ್ಯದರ್ಶಿ, ಸಂಪತ್ ರಾಜ್ , ಮಾಜಿ ಮೇಯರ್ ಸತೀಶ್ ಶೆಲ್ , ಮಾಜಿ ಶಾಸಕಿ ಕೃಪಾ ಆಳ್ವ, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪ್ರಫುಲ್ಲಾ ಮಧುಕರ್ ಸಮಿತಿ ಸದಸ್ಯರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap