ಕಲ್ಪತರು ಕೈಕೊಟ್ಟಾಗ, ಕಾಮಧೇನು ಕೈಹಿಡಿಯಿತು : ಕೆ.ಷಡಕ್ಷರಿ

ತಿಪಟೂರು
     ಕಲ್ಪತರು ನಾಡು ಎಂದು ಹೆಸರಾಗಿರುವ ನಮ್ಮ ತಿಪಟೂರಿನಲ್ಲಿ ರೈತರಿಗೆ ಕಲ್ಪತರು ಕೈಕೊಟ್ಟ ಸಂದರ್ಭದಲ್ಲಿ ನಮ್ಮ ರೈತರ ಕೈಹಿಡಿದು ಪೋಷಿಸುತ್ತಿರುವುದೇ ಈ ಕಾಮಧೇನು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಅಧ್ಯಕ್ಷ ಕೆ.ಷಡಕ್ಷರಿ ತಿಳಿಸಿದರು.
     ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಮೊದಲು 100 ಗಿಡ ತೆಂಗು ಇದ್ದರೆ ಅವನನ್ನು ಶ್ರೀಮಂತನೆಂದು ಕರೆಯುತ್ತಿದ್ದರು, ಈಗ ಕಾಲ ಬದಲಾಗಿದೆ. ಹೆಸರಿಗೆ 4000 ಗಿಡ ತೆಂಗು ಆದರೆ ಚಟ್ನಿಗೆ ತೆಂಗಿನಕಾಯಿ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ 1970ರಲ್ಲಿ ಗುಜರಾತ್ ರಾಜ್ಯದಲ್ಲಿ ಕ್ಷೀರಕ್ರಾಂತಿಯನ್ನು ಮಾಡಿದರು. ಅದರ ಪರಿಣಾಮವಾಗಿಯೇ ನಾವಿಂದು ಕಲ್ಪತರು ಕೈಬಿಟ್ಟ ಸಂದರ್ಭದಲ್ಲಿ ನಮ್ಮ ಸಹೋದರಿಯರು ಇಂದು ಸಂಸಾರವನ್ನು ಮಾಡುವ ಮಟ್ಟಿಗೆ ಕಾಮಧೇನುಗಳು ತಂದು ನಿಲ್ಲಿಸಿವೆ.
      ಹಿಂದಿನ ಕಾಲದಲ್ಲಿ ಜನರ ಆರೋಗ್ಯವನ್ನು ಕಾಪಾಡುವಂತಿದ್ದ ಗೋವುಗಳನ್ನು ಇಂದು ನಾವು ಮನೆಯಿಂದ ಹೊರಗೆ ಹಾಕಿದ್ದೇವೆ. ಆದರೆ ಅಂದು ಗೋವುಗಳನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿ ಪೂಜಿಸುತ್ತಿದ್ದ ನಮ್ಮ ಹಿರಿಯರಿಗೆ ಯಾವುದೇ ರೋಗಗಳು ಬರುತ್ತಿರಲಿಲ್ಲ. ಕಾರಣ ಅವರು ಸಹ ಮನೆಯಲ್ಲಿಯೇ ಒಂದು ಬದಿಯಲ್ಲಿ ಗೋವುಗಳನ್ನು ಕಟ್ಟಿಕೊಂಡು ಇನ್ನೊಂದು ಬದಿಯಲ್ಲಿ ಮಲಗುತ್ತಿದ್ದರು. ಗೋವುಗಳು ಇರುವಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ ಮತ್ತು ಗೋಮೂತ್ರದಲ್ಲಿ ಕ್ಯಾನ್ಸರ್‍ಕೊಲ್ಲುವ ಅಂಶಗಳಿವೆ ಎಂದು ತಿಳಿಸಿದರು. 
       ರೈತರಿಗಾಗಿ ನಬಾರ್ಡ್, ಪಿ.ಎಲ್.ಡಿ ಬ್ಯಾಂಕ್‍ಗಳಿಮದ ಹಲವಾರು ಯೋಜನೆಗಳಿದ್ದು ಶೇಕಡ 25 ರಿಂದ 30 ಅನುದಾನದಲ್ಲಿ ದೊರೆಯುತ್ತಿರುವ ಸಾಲಗಳನ್ನು ಬಳಸಿಕೊಂಡು ನೀವು ಉನ್ನತಿಯಾಗುವುದರ ಜೊತೆಗೆ ಸಂಘವನ್ನು ಬೆಳೆಸಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಂ.ಕೆ.ಪ್ರಕಾಶ್ ಮಾತನಾಡಿ ಹಾಲಿಗೆ ಯಾವುದೇ ವಸ್ತುಗಳನ್ನು ಬೆರಸಬೇಡಿ ಇಂದು ಬೆಂಗಳೂರು ಮತ್ತು ಇನ್ನಿತರ ಕಡೆಗಳಲ್ಲಿ ಇರುವ ನಿಮ್ಮ ಮಕ್ಕಳೇ ಅದನ್ನು ಕುಡಿಯುತ್ತಾರೆ ಮತ್ತು ಕೇಂದ್ರಸರ್ಕಾರದ ನೀತಿಯಂತೆ ಆಹಾರಪದಾರ್ಥಗಳನ್ನು ಕಲಬೆರಕೆ ಮಾಡಿದರೆ 6ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇಂದು ನಮ್ಮ ಅಣ್ಣ ತಮ್ಮಂದಿರು, ಅವರ ಮಕ್ಕಳು ಹತ್ತಾರು ಎಕರೆ ಜಮೀನಿದ್ದರು ಇಲ್ಲಿ ಕೂಲಿಮಾಡಿದರೆ ಮರ್ಯಾದೆ ಹೋಗುತ್ತದೆಂದು ತಿಳಿದು ಕಾಣದ ಊರಿನಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳಾಗಿದ್ದಾರೆ. ಅವರೆಲ್ಲರಿಗೂ ಮಾದರಿಯಾಗಿ ನೀವುಗಳು ಹಸುಗಳನ್ನು ಸಾಕಿಕೊಂಡು ಸ್ವಾಭಿಮಾನದಿಂದ ಬಾಳುತ್ತಿರುವುದು ಸಂತಸದ ವಿಷಯ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ನಿಮ್ಮಂತಹವರನ್ನು ನೋಡಿ ಅವರು ಸಹ ಹಿಂದಿರುಗಿ ಸ್ವಾವಲಂಬಿಯಾಗಿ ಬಾಳಲಿ ಎಂದು ತಿಳಿಸಿದರು.
     
      ಇದೇ ಸಂದರ್ಭದಲ್ಲಿ ಎ.ಪಿ.ಎಂ.ಸಿ. ನಿರ್ದೇಶಕ ಹಾಗೂ ಮಾಜಿ ತಾ.ಪಂ ಅಧ್ಯಕ್ಷಪರಮಶಿವಯ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಮಮತಾ ಉಮಾಮಹೇಶ್, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಚಂದ್ರಶೇಖರ ಕೆದನೂರಿ, ವಿಸ್ತರಣಾಧಿಕಾರಿಗಳಾದ ಮೋಹನ್‍ಕುಮಾರ್, ಶಿವಕುಮಾರ್, ಶಶಿಕಲಾ ಸಂಘದ ಅಧ್ಯಕ್ಷ ಕೆ.ಎಸ್.ನಿರಂಜನಮೂರ್ತಿ, ಉಪಾಧ್ಯಕ್ಷ ಬಿ.ಷಡಕ್ಷರಯ್ಯ ಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap