ಗುಬ್ಬಿ
ಕೊರೋನಾ ವೈರಾಣು ನಿಯಂತ್ರಣಕ್ಕೆ ಭಾರತ ಲಾಕ್‍ಡೌನ್‍ನನ್ನು ಕೇಂದ್ರ ಸರ್ಕಾರ ಮೇ 3 ರವರೆಗೂ ಮುಂದುವರೆಸಿದೆ. ಈ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಮತ್ತಷ್ಟು ನಿರ್ಬಂಧ ಹೇರಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ತಾಲ್ಲೂಕು ಆಡÀಳಿತ ಮುಂದಾಗಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 6 ಹೋಬಳಿಗಳ ಪೈಕಿ ಎರಡು ಹೋಬಳಿಗೆ ಒಂದರಂತೆ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪಟ್ಟಣ ವ್ಯಾಪ್ತಿಗೆ ಒಂದು ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಈ ತಂಡಗಳು ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿ ಕೊರೋನಾ ರೋಗದ ಬಗ್ಗೆ ಸಮಗ್ರವಾದ ಮಾಹಿತಿ ಸಂಗ್ರಹಿಸಿ ತಾಲ್ಲೂಕು ಆಡÀಳಿತಕ್ಕೆ ಮಾಹಿತಿ ನೀಡಲಿವೆ ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಗುಂಪು ಕಟ್ಟುವುದು, ಸಾಮಾಜಿಕ ಅಂತರ ಕಾಪಾಡದಿರುವುದು ಮತ್ತು ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸುವುದು ಕಾನೂನು ಬಾಹಿರವಾಗಿದೆ. ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೆ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಈಗಾಗಲೆ ಅಗತ್ಯವಿರುವ ಪಡಿತರ ವಿತರಣೆ ಸೇರಿದಂತೆ ದಿನಬಳಕೆ ವಸ್ತುಗಳು ದೊರೆಯುವಂತೆ ನಿಗದಿತ ಅವಧಿಯಲ್ಲಿ ಅಂಗಡಿಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಪದೆ ಪದೆ ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬರುತ್ತಿದ್ದು, ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಕಸಬಾ ಮತ್ತು ನಿಟ್ಟೂರು ಹೋಬಳಿಯನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್ (9480835557) ಹಾಗೂ ಕೃಷಿ ಅಧಿಕಾರಿ ಶಿವಣ್ಣ (8277932871) ನಿರ್ವಹಿಸಲಿದ್ದಾರೆ. ಕಡಬ ಮತ್ತು ಸಿ.ಎಸ್.ಪುರ ಹೋಬಳಿಯ ಜಾಗೃತಿದಳವನ್ನು ಸಹಾಯಕ ಎಂಜಿನಿಯರ್ ಚಿದಾನಂದ (8277073400) ಹಾಗೂ ಸಹಾಯಕ ಎಂಜಿನಿಯರ್ ರಾಜಣ್ಣ (8884035450) ನಿರ್ವಹಿಸಲಿದ್ದಾರೆ.
ಚೇಳೂರು ಮತ್ತು ಹಾಗಲವಾಡಿ ಹೋಬಳಿಯ ತಂಡದ ನೇತೃತ್ವವನ್ನು ಸಹಾಯಕ ಎಂಜಿನಿಯರ್ ಬಿ.ಸಿ.ಸ್ವಾಮಿ (9844342544) ಹಾಗೂ ಸಹಾಯಕ ಕೃಷಿ ಅಧಿಕಾರಿ ಶ್ರೀಧರ್ (8277932870) ನಡೆಸಲಿದ್ದಾರೆ. ಗುಬ್ಬಿ ಪಟ್ಟಣ ವ್ಯಾಪ್ತಿಯನ್ನು ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ್ (8277932884) ಹಾಗೂ ರೇಷ್ಮೆ ಸಹಾಯಕ ನಿರ್ದೇಶಕ ಕೆ.ಎಂ.ರಂಗನಾಥ್ (9448708551) ನೋಡಿಕೊಳ್ಳಲಿದ್ದು, ಎರಡು ಶಿಫ್ಟ್‍ಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ಗ್ರಾಪಂ ವ್ಯಾಪ್ತಿಯಲ್ಲೂ ಟಾಸ್ಕ್‍ಫೋರ್ಸ್ ರಚನೆಗೊಂಡು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು. ಪಿಡಿಓಗಳು ಕೆಲಸ ನಿರ್ವಹಿಸಲಿದ್ದಾರೆ. ಯಾವುದೇ ವ್ಯಕ್ತಿಯಲ್ಲಿ ಜ್ವರ, ನೆಗಡಿ, ಕೆಮ್ಮು, ಗಂಟಲುನೋವು ಕಂಡಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಜತೆಗೆ, ಯಾವುದೇ ಹೊಸಬರು ಊರಿಗೆ ಬಂದಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. ಈ ಕಾರ್ಯಕ್ಕೆ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. 08131-222234 ಕರೆ ಮಾಡಬಹುದಾಗಿದೆ. ಜತೆಗೆ ಕೋವಿಡ್ 19 ಕೇರ್ ಸೆಂಟರ್‍ಗಳನ್ನು ದೇವರಾಜು ಅರಸ್ ವಸತಿಶಾಲೆ ಹಾಗೂ ಕಿತ್ತೂರು ರಾಣಿ ವಸತಿ ಶಾಲೆಯನ್ನು ಸಜ್ಜುಗೊಳಿಸಲಾಗಿದೆ. ಡೆಡಿಕೇಟ್ ಕೋವಿಡ್ 19 ಕೇರ್ ಸೆಂಟರ್ ಗುಬ್ಬಿ ಆಸ್ಪತ್ರೆಯಲ್ಲಿ ಸುಸಜ್ಜಿತ 20 ಹಾಸಿಗೆ ಜತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಪಡಿತರ ವಿತರಣೆಗೆ ಅಗತ್ಯಕ್ರಮ ವಹಿಸಲಾಗಿದೆ. ಅರ್ಜಿ ಸ್ವೀಕೃತಿಪತ್ರ ಸಂಖ್ಯೆಯೊಂದಿಗೆ ಆಧಾರ್‍ಕಾರ್ಡ್ ಸಂಖ್ಯೆ ನೀಡಿ ಪಡಿತರವನ್ನು ಪಡೆಯಬಹುದಾಗಿದೆ. ಬೇರೆ ಊರಿನಿಂದ ಬಂದು ಇಲ್ಲಿ ಸ್ಥಗಿತಗೊಂಡವರು ಕಾರ್ಡ್ ಇದ್ದಲ್ಲಿ ರೇಷನ್ ಪಡೆಯಲು ಅನುವು ಮಾಡಲಾಗಿದೆ ಎಂದ ಅವರು, ಪೊಲೀಸರು ಮತ್ತಷ್ಟು ಬಿಗಿಬಂದೋಬಸ್ತ್ ನಡೆಸಲಿದ್ದಾರೆ. ಸಾರ್ವಜನಿಕರು ಸಹಕರಿಸದಿದ್ದಲ್ಲಿ ಕಾನೂನು ಕ್ರಮವನ್ನು ಜರುಗಿಸಲಾಗುವುದು.
ಮೆಡಿಕಲ್‍ಶಾಪ್‍ಗಳ ಮಾಲೀಕರು ವೈದ್ಯರಚೀಟಿ ತಂದವರಿಗೆ ಮಾತ್ರ ಔಷಧಿ ನೀಡಬೇಕು. ಸುಮ್ಮನೆ ಅಲೆದಾಡಲು ಮಾತ್ರೆಗಳ ಕವರ್ ಹಿಡಿದು ಬರುತ್ತಿರುವವರ ಮೇಲೆ ಕ್ರಮ ವಹಿಸಲಾಗುವುದು. ಈ ಜತೆಗೆ ರೈತರಿಗೆ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮೂಲಕ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾಹನಗಳಲ್ಲಿ ತರುವ ಕೃಷಿ ಉತ್ಪನ್ನವನ್ನು ಎಪಿಎಂಸಿಯಲ್ಲಿ ರಸೀದಿ ಪಡೆದು ಮಾರಾಟ ಮಾಡಬೇಕು. ಇದೇ ಚೀಟಿ ಪೊಲೀಸರಿಗೆ ತೋರಿಸಬೇಕಿದೆ ಎಂದು ತಿಳಿಸಿದರು.
ರೈತರ ಪಂಪ್‍ಮೋಟಾರ್ ದುರಸ್ಥಿ ಕೆಲಸಗಳಿಗೆ ಪರವಾನಗಿ ಪಡೆದ ಅಂಗಡಿಗಳನ್ನು ಗುರುತಿಸಿ ರೈತರ ಕೆಲಸ ಮಾಡಿಕೊಡಲು ಅನುವು ಮಾಡಲಾಗಿದೆ. ರೈತರಿಗೆ ಅವಶ್ಯವಿರುವ ಪರಿಕರಗಳನ್ನು ಮಾರಾಟ ಮಾಡಿದ ಬಳಿಕ ಅಂಗಡಿಗಳನ್ನು ಮುಚ್ಚಬೇಕು. ಕೆಲ ಅಂಗಡಿಗಳಲ್ಲಿ ಹಾರ್ಡ್‍ವೇರ್ ಜತೆ ಪೇಂಟ್ಸ್ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ಇರುವ ಕಾರಣ ಅಂತಹ ಅಂಗಡಿಗೆ ಅವಕಾಶ ಕಲ್ಪಿಸಿಲ್ಲ.
ರೈತರಿಗೆ ಅನುಕೂಲವಾಗುವ 8 ಅಂಗಡಿಗಳನ್ನು ತಾಲ್ಲೂಕಿನಲ್ಲಿ ಗುರುತಿಸಿ ಅವರಿಗೆ ಮಾತ್ರ ರೈತರು ಸಂಪರ್ಕಿಸಿದ ಸಂದರ್ಭದಲ್ಲಿ ಮಾತ್ರ ಅಂಗಡಿ ತೆರೆಯಲು ಅನುವು ಮಾಡಲಾಗಿದೆ. ಗುಬ್ಬಿ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗ ದಿವ್ಯ ಎಂಜಿನಿಯರಿಂಗ್ ವಕ್ರ್ಸ್ (9481692999), ಕೆ.ಜಿ.ಟೆಂಪಲ್‍ನ ಶ್ರೀನಿವಾಸ ಎಲೆಕ್ಟ್ರಿಕಲ್ಸ್ (9449793276), ಚೇಳೂರಿನ ಶ್ರೀ ಮಲ್ಲೇಶ್ವರ ಎಂಜಿನಿಯರಿಂಗ್ ವಕ್ರ್ಸ್(7676573271), ಹಾಗಲವಾಡಿಯ ಶ್ರೀನಿವಾಸ ಎಲೆಕ್ಟ್ರಿಕಲ್ಸ್(8453370263), ನಿಟ್ಟೂರಿನ ಶ್ರೀ ಶಿವಶಂಕರ್ ಎಲೆಕ್ಟ್ರಿಕಲ್ಸ್ ಅಂಡ್ ಎಂಜಿನಿಯರಿಂಗ್ ವಕ್ರ್ಸ್(9986737596), ಕಡಬದ ಶ್ರೀ ಕಿರಣ್ ಎಂಜಿನಿಯರಿಂಗ್ ವಕ್ರ್ಸ್(9972077183), ಸಿ.ಎಸ್.ಪುರದ ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್ಸ್ (9972600204) ಹಾಗೂ ಕಲ್ಲೂರುಕ್ರಾಸ್‍ನ ಶ್ರೀ ಮಂಜುನಾಥ ಎಂಜಿನಿಯರಿಂಗ್ ವಕ್ರ್ಸ್(9400377846) ಈ ಅಂಗಡಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
