ಸಂಪುಟ ಸೇರ್ಪಡೆಗೆ ರಾಜಕೀಯ ತಂತ್ರಗಾರಿಕೆಗೆ ಮೊರೆ ಹೋದ “ಹಳ್ಳಿಹಕ್ಕಿ”

ಬೆಂಗಳೂರು

    ರಾಷ್ಟ್ರದಾದ್ಯಂತ ಕುರುಬ ಸಮುದಾಯವನ್ನು ಒಂದೇ ಸೂರಿನಡಿ ತಂದು ಸಂಘಟನೆ ಮಾಡುವ ಮೂಲಕ ಮಾಜಿ ಸಚಿವ, ಬಿಜೆಪಿ ಮೇಲ್ಮನೆ ಸದಸ್ಯ ಎಚ್. ವಿಶ್ವನಾಥ್ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

   ಕರ್ನಾಟಕದಲ್ಲಿ ಕುರುಬ ಸಮುದಾಯವೆಂದರೆ ಕಾಳಿದಾಸ, ಕನಕದಾಸರಿಂದ ಹಿಡಿದು ಇತ್ತೀಚಿನ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ, ಹೆಚ್.ಎಂ.ರೇವಣ್ಣ ಅವರ ಪ್ರಾತಿನಿಧ್ಯಕ್ಕೆ ಮೀಸಲಾಗಿದ್ದ ಸಂಘಟನೆಯನ್ನು ಇದೀಗ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ಒತ್ತಡ ರಾಜಕೀಯ ತಂತ್ರಗಾರಿಕೆಗೆ ವಿಶ್ವನಾಥ್ ಮೊರೆ ಹೋಗಿದ್ದಾರೆ.

   ಸಂಪುಟ ವಿಸ್ತರಣೆಯ ಹೊತ್ತಿನಲ್ಲಿ ವಿಶ್ವನಾಥ್ ಇಂತಹ ಸಾಹಸಕ್ಕೆ ಕೈಹಾಕಿರುವುದು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ವಿಶ್ವನಾಥ್ ನಡೆ ಕುತೂಹಲಕ್ಕೂ ಕಾರಣವಾಗಿದೆ. ದೇಶಾದ್ಯಂತ 12 ಕೋಟಿಗೂ ಹೆಚ್ಚು ಮಂದಿ ಕುರುಬ ಸಮುದಾಯದವರಿದ್ದು, ಹರಿಯಾಣ, ದೆಹಲಿ, ಪಾಣಿಪಟ್, ರಾಜಸ್ತಾನ, ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆÉಡೆ ನೆಲೆಸಿದ್ದಾರೆ. ಬೇರೆಬೇರೆ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದಾರೆ.

    ಯಾದವರು 2ಕೋಟಿಯಷ್ಟೇ ಇದ್ದರೂ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯವಾಗಿ ಬೆಳೆದಿದ್ದಾರೆ. ಆದರೆ ರಾಷ್ಟ್ರ ಮಟ್ಟದಲ್ಲಿ ಕುರುಬರಿಗೆ ಅಷ್ಟೊಂದು ದೊಡ್ಡಮಟ್ಟದ ಸಂಘಟನೆಯಿಲ್ಲ. ಆದರೀಗ ಇಂತಹ ಪ್ರಯತ್ನವನ್ನು ಹೆಚ್.ವಿಶ್ವನಾಥ್ ಆರಂಭಿಸಿದ್ದಾರೆ.ಈ ಸಂಬಂಧ ಮಾತನಾಡಿದ ವಿಶ್ವನಾಥ್, ಕುರುಬ ಸಮುದಾಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆಯೊಂದನ್ನು ಕಲ್ಪಿಸಬೇಕೆಂಬ ಕನಸು ಬಹು ಹಿಂದಿನಿಂದಲೇ ಇತ್ತು. ಈ ಹಿಂದೆ ಸಂಸದನಾಗಿದ್ದಾಗಲೇ ಇಂತಹ ಕನಸು ಕಂಡಿದ್ದೆ. ಆಗ ಯುವ ಸಮುದಾಯದವರ ಜೊತೆಗೂ ಸೇರಿ ಅಭಿಪ್ರಾಯ ಸಂಗ್ರಹಿಸಿದ್ದೆ. ಸುಮಾರು ಒಂದು ವರ್ಷ ಕಾಲ ಇದಕ್ಕಾಗಿಯೇ ಸುತ್ತಾಡಿದ್ದೆ. ಆದರೀಗ ಮುಹೂರ್ತ ಕೂಡಿ ಬಂದಿದೆ ಎಂದರು.

     ಇತ್ತೀಚೆಗೆ ದೆಹಲಿ, ಪಾಣಿಪಠ್, ರಾಜಸ್ತಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಮೇಲ್ಮನೆ ಸದಸ್ಯ ಹೆಚ್.ಎಂ.ರೇವಣ್ಣ ಜೊತೆ ಅಲ್ಲಿನ ಕುರುಬ ನಾಯಕರುಗಳ ಜೊತೆ ಸಭೆ ನಡೆಸಿದ್ದೇನೆ. ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಬಗ್ಗೆ ಚರ್ಚಿಸಿದ್ದೆವು. ಹೀಗಾಗಿ ಅಕ್ಟೋಬರ್ ವಾರಾರಂಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಝೂಮ್ ಮೀಟಿಂಗ್ ಮಾಡುತ್ತೇವೆ ಎಂದರು.

     ರಾಷ್ಟ್ರೀಯಮಟ್ಟದ ಸಂಘಟನೆಗೂ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಹೆಚ್.ವಿಶ್ವನಾಥ್ ,ಕುರುಬ ಸಮುದಾಯದಿಂದ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ತಾವು ಇದ್ದು, ಯಡಿಯೂರಪ್ಪ ಸಂಪುಟ ಈ ಮೂವರಲ್ಲಿ ಯಾರು ಸೇರುತ್ತೀರಾ?ಎಂಬ ಪ್ರಶ್ನೆಗೆ ಮಂತ್ರಿ ಸ್ಥಾನಕ್ಕಾಗಿ ಬೀದಿಯಲ್ಲಿ ಬಾಯಿಬಡಿದುಕೊಳ್ಳಲಾದೀತೇ?. ಬಿಜೆಪಿ ವರಿಷ್ಠರಿಗೆ ಎಲ್ಲವೂ ಬಿಡಲಾಗಿದೆ. ಅವರೇ ಎಲ್ಲಾ ತೀರ್ಮಾನ ಕೈಗೊಳ್ಳಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

     “ಬಾಂಬೆ ಡೇಸ್” ಪುಸ್ತಕದ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಜೆಡಿಎಸ್‍ನಲ್ಲಿ ಆರಂಭವಾದ ಅಸಹನೆ, ಜೆಡಿಎಸ್ ನಾಯಕರು ನಮ್ಮನ್ನು ನಡೆಸಿಕೊಂಡ ರೀತಿ, ಬಳಸಿಕೊಂಡ ವಿಧಾನ, ನಮ್ಮನ್ನು ಕಂಡ ರೀತಿಯಿಂದಲೇ ಪುಸ್ತಕದ ಕತೆ ಆರಂಭವಾಗುತ್ತದೆ. ನಮ್ಮನ್ನು ನಡೆಸಿಕೊಂಡ ರೀತಿಗೂ ಕಾಂಗ್ರೆಸ್‍ನಲ್ಲಿ ಶಾಸಕರನ್ನು ಮೈತ್ರಿ ಸರ್ಕಾರದಲ್ಲಿ ನಡೆಸಿಕೊಂಡ ರೀತಿಗೂ ಯಾವುದೇ ವ್ಯತ್ಯಾಸವಿರಲಿಲ್ಲ ಎಂದರು.

    ಸೋಮವಾರದಿಂದ ಆರಂಭವಾಗುತ್ತಿರುವ ಅಧಿವೇಶನಕ್ಕೆ ಬೆಂಗಳೂರಿಗೆ ಮಳೆಯಲ್ಲಿಯೇ ಆಗಮಿಸುತ್ತಿದ್ದ ಅವರು, ಮಳೆಯಲ್ಲಿಯೇ ನಮ್ಮ ಪ್ರಯಾಣ ಎಂದು ಚಟಾಕಿ ಹಾರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap