ಪಪಂಯಿಂದ ಅನಧಿಕೃತ ಕೋಳಿ ಅಂಗಡಿಗಳ ತೆರವು

ಕೊರಟಗೆರೆ

    ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದೆ ಕಾನೂನು ಬಾಹಿರವಾಗಿ ಹಂದಿ ಮತ್ತು ಕೋಳಿಯ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಮತ್ತು ಪಪಂ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅನಧಿಕೃತ ಅಂಗಡಿಗಳ ವಿರುದ್ದ ಮಂಗಳವಾರ ಕಾರ್ಯಾಚರಣೆ ನಡೆಸಿರುವ ಘಟನೆ ನಡೆದಿದೆ.

     ಪಟ್ಟಣದ ಅಂಚೆಕಚೇರಿ ಮತ್ತು ಪಶು ಇಲಾಖೆಯ ಮುಂಭಾಗ ಮಂಗಳವಾರ ಮುಂಜಾನೆಯೆ ರಾಜಾರೋಷವಾಗಿ ಹಂದಿ ಮತ್ತು ಕೋಳಿಯ ಮಾಂಸ ಮಾರುತ್ತಿದ್ದ ಐದು ಅನಧಿಕೃತ ಅಂಗಡಿಯನ್ನು ಕೊರಟಗೆರೆ ಸಿಪಿಐ ನದಾಫ್ ಮತ್ತು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ನೇತೃತ್ವದ ತಂಡ ತೆರವು ಗೊಳಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

     ಕೊರಟಗೆರೆ ಪಟ್ಟಣಕ್ಕೆ ಕಂಟಕವಾಗಿದ್ದ ಅಂಚೆ ಕಚೇರಿ ಮತ್ತು ಪಶು ಇಲಾಖೆಯ ಮುಂಭಾಗ ದುರ್ವಾಸನೆಯಿಂದ ಪಟ್ಟಣದ ಸಾವಿರಾರು ಜನತೆಗೆ ಅನಾರೋಗ್ಯಕ್ಕೆ ಕಾರಣವಾಗಿದ್ದ 20ಕ್ಕೂ ಅಧಿಕ ಅನಧಿಕೃತ ಚಿಕನ್ ಮತ್ತು ಮಟನ್ ಅಂಗಡಿಗಳನ್ನು ಪೊಲೀಸ್ ಇಲಾಖೆ ಮತ್ತು ಪಪಂ ಅಧಿಕಾರಿವರ್ಗ ಬುಧವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಮಾಲೀಕರ ವಿರೋಧದ ನಡುವೆಯು ತೆರವು ಗೊಳಿಸಿದ್ದಾರೆ.

     ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳಿಗೆ ರಾಜಕೀಯ ದುರೀಣರಿಂದ ಜಿಲ್ಲಾಧಿಕಾರಿಗಳ ಪರವಾನಗಿ ಪಡೆದು, ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸುವಂತೆ ಅನಾಮಿಕ ದೂರವಾಣಿ ಕರೆಗಳು ಸಹ ಬಂದಿವೆ. ಪಟ್ಟಣದ ನಾಗರಿಕರು, ಪರ್ತಕರ್ತರು, ಸಂಘಸಂಸ್ಥೆ, ಅಂಚೆ ಮತ್ತು ಪಶು ಇಲಾಖೆ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆಗೆ ಬೆಂಬಲ ವ್ಯಕ್ತವಾಗಿದೆ.ಕಾರ್ಯಚರಣೆಯಲ್ಲಿ ಪಿಎಸೈ ಮುತ್ತುರಾಜು, ಎಎಸೈ ಯೋಗೀಶ್, ಮಂಜುನಾಥ, ಪಪಂ ಆರೋಗ್ಯ ನಿರೀಕ್ಷಕ ರೈಸ್‍ಅಹಮ್ಮದ್ ಸೇರಿದಂತೆ ಪೊಲೀಸ್ ಇಲಾಖೆ ಮತ್ತು ಪಪಂಯ ಪೌರಕಾರ್ಮಿಕರು, ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap