ಮಂಗಳೂರು:
ರಾಜ್ಯದ ಕಡಲ ನಗರಿ ಮಂಗಳೂರಿನ ಹೊರವಲಯದ ಗುರುಪುರದ ಬಂಗ್ಲೆಗುಡ್ಡ ಕುಸಿದಿದ್ದು ಹಲವು ಮನೆಗಳು ನೆಲಸಮಕೊಂಡಿವೆ. ಇನ್ನು ಮಣ್ಣಿನಡಿಯಲ್ಲಿ ಇಬ್ಬರು ಮಕ್ಕಳು ಸಿಕ್ಕಿ ಹಾಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಸ್ಥಳೀಯರು ನಿರತರಾಗಿದ್ದಾರೆ.
ಬಂಗ್ಲೆಗುಡ್ಡ ಕುಸಿತದಿಂದಾಗಿ ನಾಲ್ಕು ಮನೆಗಳು ನೆಲಸಮಗೊಂಡಿದ್ದು ಕೂಡಲೇ ಪೊಲೀಸರು ಮತ್ತು ಸ್ಥಳೀಯರು ಮನೆಯಲ್ಲಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮನೆಯಿಂದ ಹೊರಬರುವ ವೇಳೆ ಮಕ್ಕಳನ್ನು ಪೋಷಕರು ಬಿಟ್ಟು ಬಂದಿದ್ದರಿಂದ ಮಕ್ಕಳಿಬ್ಬರು ನೆಲದಡಿ ಸಿಲುಕಿದ್ದಾರೆ.ಮಧ್ಯಾಹ್ನ 1 ಗಂಟೆ ಸುಮಾರಿಗೆ 30 ಅಡಿ ಕೆಳಕ್ಕೆ ಗುಡ್ಡ ಕುಸಿದಿದೆ. ಕೂಡಲೇ ಪೊಲೀಸರು ಕರ್ಯಾಚರಣೆಗೆ ಮುಂದಾಗಿದ್ದರು.