ಸಚಿವರಿಂದ ಮಂಗನ ಕಾಯಿಲೆ ಕೈಪಿಡಿ ಬಿಡುಗಡೆ..!

ಬೆಂಗಳೂರು

   ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಧಿಸುವ ಕ್ಯಾಸನೂರು ಕಾಡಿನ ಖಾಯಿಲೆ (ಮಂಗನ ಖಾಯಿಲೆ)ಯ ವಿವಿಧ ಅಂಶಗಳನ್ನು ಒಳಗೊಂಡ ಕಾರ್ಯಾಚರಣೆಯ ಕೈಪಿಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬಿಡುಗಡೆ ಮಾಡಿದರು.

    ಸದರಿ ಕೈಪಿಡಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದು, ಮಂಗನ ಖಾಯಿಲೆ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ದೇಶದಲ್ಲೇ ಪ್ರಥಮ ಕೈಪಿಡಿ ಇದಾಗಿದೆ. ಕೈಪಿಡಿಯು ರಾಜ್ಯದ ಮಂಗನ ಖಾಯಿಲೆ ಪೀಡಿತ ಜಿಲ್ಲೆಗಳಲ್ಲದೇ, ನೆರೆಯ ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೂ ಸಹ ಉಪಯುಕ್ತವಾಗಲಿದೆ.

     ಈ ಕೈಪಿಡಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಅನುಷ್ಠಾನಗೊಳಿಸುವ ಸರ್ವೇಕ್ಷಣೆ, ಚಿಕಿತ್ಸೆ, ನಿರ್ವಹಣೆ, ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳನ್ನು ಒಳಗೊಂಡ ಮೇಲ್ವಿಚಾರಣೆ ಹಾಗೂ ಉಸ್ತುವಾರಿಕುರಿತು ಮಾರ್ಗಸೂಚಿ ನೀಡಲಾಗಿದೆ. ಖಾಯಿಲೆ ನಿಯಂತ್ರಣಕ್ಕಾಗಿ ಅವಶ್ಯವಿರುವ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇದಲ್ಲದೇ ಮಂಗನ ಖಾಯಿಲೆ ನಿಯಂತ್ರಣದಲ್ಲಿಅಂತರ ಇಲಾಖಾ ಸಮನ್ವಯ ಸಾಧಿಸುವಿಕೆ, ಅನ್ಯ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಯನ್ನೂ ಸಹ ವಿಸ್ತೃತವಾಗಿ ವಿವರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap