ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಮುಂದೆ ಬಂದ ಪೊಲೀಸ್ ಇಲಾಖೆ

ಬೆಂಗಳೂರು

      ನಗರದಲ್ಲಿ ಲಾಕ್‍ಡೌನ್ ನಡುವೆಯೇ ಅಗತ್ಯ ಸೌಲಭ್ಯ ದೊರಕುತ್ತಿದೆಯಾದರೂ ಇನ್ನೂ ಅನೇಕ ಸೇವೆಗಳು ಸಿಗದೇ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ನಗರ ಪೊಲೀಸರು ಸಹಾಯವಾಣಿ ಆರಂಭಿಸಿದ್ದು ತುರ್ತು ಅಗತ್ಯ ಇರುವವರಿಗೆ ಇದರಿಂದ ಅನುಕೂಲವಾಗಲಿದೆ.

     ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ಹೆಲ್ಪ್‍ಲೈನ್ ತೆರೆದಿದ್ದು, ಈ ಸಹಾಯವಾಣಿಯಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇನ್ನು ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಏಕಾಂಗಿ ಆಗಿರುವವರು, ಕೊರೊನಾ ಸೋಂಕು ಲಕ್ಷಣಗಳಿದ್ದವರು, ವೈದ್ಯರನ್ನು ಸಂಪರ್ಕಿಸಲು, ಮೆಡಿಕಲ್ ತುರ್ತು ಸೇವೆ, ಆ್ಯಂಬ್ಯುಲೆನ್ಸ್ ಸೇವೆ ಬೇಕಿರುವವರು, ವಿದ್ಯುತ್, ವಾಟರ್, ಗ್ಯಾಸ್ ಸಿಲಿಂಡರ್ ಸಿಗದೆ ತೊಂದರೆಗೀಡಾದವರು, ಪೆನ್ಷನ್, ಬ್ಯಾಂಕಿಂಗ್ ಮಾಹಿತಿ ಬೇಕಿರುವವರು, ದಿನಸಿ ವಸ್ತುಗಳು, ಮೆಡಿಸಿನ್ ಬೇಕಿರುವವರು ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದಾಗಿದೆ.

     ಸಹಾಯವಾಣಿ 1090/100 ಕರೆ ಮಾಡಿ ಈ ಮೇಲ್ಕಂಡ ಸೌಲಭ್ಯ ಪಡೆಯಬಹುದಾಗಿದೆ. ಇದರೊಂದಿಗೆ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಟೀಂ ರಚಿಸಿದ್ದು, ಈ ಸೇವೆ ಪಡೆಯಬಹುದು. ಇನ್ನುಳಿದಂತೆ ಕರ್ನಾಟಕ 104, 080-46848600, 1075, 080-22340676 ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸಹಾಯ ಪಡೆದುಕೊಳ್ಳಬಹುದು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap