ತುರುವೇಕೆರೆ
ಕೊರೋನಾ ರೋಗವನ್ನು ಲೆಕ್ಕಿಸದೇ ತಾಲ್ಲೂಕಿನ ಜನರು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಸಲುವಾಗಿ ಪಟ್ಟಣದಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಗುರುವಾರ ಖರೀದಿಸಿದರು.
ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈ ಬಾರಿ ಕೊರೋನಾ ರೋಗದ ಹಿನ್ನೆಲೆ ಹಣ್ಣು, ಹೂ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಕಂಡಿದೆ. ಬಾಳೆಹಣ್ಣು ಕೆ.ಜಿ.ಗೆ 100 ರೂ. ನಿಂದ 120 ರೂ, ಹೂವು ಮಾರು 100 ರೂ, ಹಣ್ಣುಗಳು ಕೆಜಿ 180 ರೂ.ಗಳಿಗೇರಿದ್ದು, ಜನತೆ ಕೊಳ್ಳಲು ಹಿಂದು ಮುಂದು ಯೋಚಿಸುವಂತಾಗಿದೆ. ಹಬ್ಬ ಆಚರಿಸಲು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
