ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸಲ್ಲ

ತಿಪಟೂರು

     ಸಮ್ಮಿಶ್ರ ಸರ್ಕಾರ ಪತನದ ನಂತರ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ ಸರ್ಕಾರ ಶೀಘ್ರದಲ್ಲೇ ಪತನಗೊಂಡು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಮುರಳಿಧರ ಹಾಲಪ್ಪ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ನಗರಸಭಾ ಸದಸ್ಯ ಮತ್ತು ಶಾಸಕರ ನಡುವೆ ಆಗಿದ್ದ ಘರ್ಷಣೆಯ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜೆ.ಪಿಯ ಜನಪ್ರತಿನಿಧಿಗಳು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇದನ್ನು ನೋಡಿದರೆ ತಿಳಿಯುತ್ತದೆ ದೀಪ ಆರುವ ಮೊದಲು ಪ್ರಜ್ವಲಿಸುತ್ತದೆ. ಹಾಗೆಯೇ ಬಿ.ಜೆ.ಪಿ ಸಚಿವರು ಮತ್ತು ಶಾಸಕರು ವರ್ತಿಸುತ್ತಿದ್ದಾರೆ. ಇನ್ನು ನೀನು ನಗರಸಭೆಯು ರಚನೆಯಾಗುವವರೆಗೂ ಸದಸ್ಯನೆ ಅಲ್ಲವೆಂದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ.

    ಇದುವರೆಗೂ ಚುನಾಯಿತರಾಗಿ ನಾನಾ ಕಾರಣದಿಂದ ಅಧಿಕಾರವಿಲ್ಲದೆ ಇರುವ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ ಸದಸ್ಯರುಗಳಿಗೆ ಮಾಡಿದ ಅವಮಾನವಾಗಿದೆ. ಇಲ್ಲಿ ನಡೆದ ಘಟನೆ ಅದರಲ್ಲೂ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಯೋಗೀಶ್ ಮೇಲೆ ಬಿ.ಜೆ.ಪಿ ಪಕ್ಷದ ಶಾಸಕ ನಾಗೇಶ್ ಆಪ್ತರ ಹಲ್ಲೆ ಖಂಡನೀಯ. ಒಬ್ಬ ನಾಗರಿಕನ ಮೇಲೆ ಕೈ ಮಾಡುವ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು? ಇದನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಂಭೀರ ಪ್ರಕರಣ ಎಂದು ಪರಿಗಣಿಸಿದ್ದಾರೆ. ನಗರದ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್‍ನಿಂದ ತಾವೆ ಸ್ವತಹ ಪ್ರತಿಭಟನೆ ಮಾಡಲು ಡಿ.ಕೆ.ಶಿವಕುಮಾರ್ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

     ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಯಾವುದೇ ಪಕ್ಷವಾಗಿರಲಿ, ಸ್ಥಳೀಯ ಕಾಮಗಾರಿ ನಡೆಸುವ ವೇಳೆ ಆ ಭಾಗದ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗ್ಗೆ 8 ಗಂಟೆ ಮತ್ತು ಸಂಜೆ 6 ಗಂಟೆ ು ಸಮಯದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು, ಎಂಜಿಯರ್‍ಗಳು ಸ್ಥಳೀಯ ಪ್ರತಿನಿಧಿಗಳು ಇಲ್ಲದೆ ಕಾಮಗಾರಿಗಳಿಗೆ ಪೂಜೆ ಮಾಡುವ ಉದ್ದೇಶವೇನೆಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷನಿಗೆ ಎಷ್ಟು ಸ್ಥಾನಮಾನವಿದೆಯೋ ಸಾಮಾನ್ಯ ಕಾರ್ಯಕತರ್ನಿಗೂ ಅಧಿಕಾರವಿದ್ದು ಕಾರ್ಯಕರ್ತರಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

     ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ತಾ.ಪಂ ಅಧ್ಯಕ್ಷ ಶಿವಸ್ವಾಮಿ, ತಾ.ಪಂ ಸದಸ್ಯ ನ್ಯಾಕೇನಹಳ್ಳಿ ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್ ಪ್ರಕಾಶ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಫುಲ್ಲಾ, ಹಾಲಿ ಮಾಜಿ ನಗರಸಭಾ ಸದಸ್ಯರುಗಳು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link