ಹಂದಿ ಹಾವಳಿ : ಸಚಿವರ ಆದೇಶಕ್ಕೆ ಕಿಮ್ಮತ್ ಇಲ್ಲ

ಚಿಕ್ಕನಾಯಕನಹಳ್ಳಿ

     ಪಟ್ಟಣದಲ್ಲಿ ಹಂದಿಗಳು ರಾಜಾರೋಷವಾಗಿ ಓಡಾಡುತ್ತಿವೆ, ಗಲ್ಲಿಗಳಲ್ಲಿ, ಕೊಳಚೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹಂದಿಗಳು ಈಗ ಪಟ್ಟಣದ ಹೃದಯ ಭಾಗವಾದ ನೆಹರೂ ಸರ್ಕಲ್, ಬಸ್ಟ್ಯಾಂಡ್‍ನಲ್ಲಿ ಸಂಚರಿಸುತ್ತಿವೆ.ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯೊಂದರಲ್ಲಿ ಪಟ್ಟಣದಲ್ಲಿ ಕಸ ವಿಲೇವಾರಿ ಆಗಬೇಕು, ಅದರಲ್ಲೂ ಸೀಲ್ಡ್ ನಗರ ಏರಿಯಾಗಳಲ್ಲಿ ಕಸ ವಿಲೇವಾರಿ ಮತ್ತು ಚರಂಡಿಯನ್ನು ಸ್ವಚ್ಛಗೊಳಿಸಬೇಕು . ಹಂದಿ ಮಾಲೀಕರು ಇನ್ನು ಎರಡು ದಿನದೊಳಗಾಗಿ ತಮ್ಮ ಹಂದಿಗಳನ್ನು ತಮ್ಮ ಮನೆಗಳಲ್ಲಿ ಸಾಕಬೇಕು. ಇಲ್ಲವಾದರೆ ಪಟ್ಟಣದಲ್ಲಿ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳ ಮೂಲಕ ಸಭೆಗೆ ತಿಳಿಸಿದ್ದರು.

     ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಸಚಿವರು ತಿಳಿಸಿದ್ದರು. ಆದರೆ ಸಚಿವರ ಹೇಳಿಕೆ ಕೇವಲ ಸಭೆಗೆ ಮಾತ್ರ ಸೀಮಿತವಾದಂತಿದೆ. ಮಾಲೀಕರು ಹಂದಿಗಳನ್ನು ಹೊರಗಡೆ ಸಂಚರಿಸಲು ಬಿಡುತ್ತಿದ್ದಾರೆ, ಹಂದಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ವಾಹನ ಸಂಚರಿಸುವ, ಜನಪ್ರದೇಶ ಹೆಚ್ಚಿರುವ ನೆಹರೂ ಸರ್ಕಲ್, ಬಸ್ಟ್ಯಾಂಡ್ ಬಳಿಯೆ ಹಂದಿಗಳು ಓಡಾಡುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

   ಹಂದಿಗಳ ಓಡಾಟ ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹೆಚ್ಚುತ್ತಿದೆ. ಹಲವು ಬಡಾವಣೆ, ವಾರ್ಡ್‍ಗಳಲ್ಲಿ ಹಂದಿಗಳ ಕೊಳಚೆಯಿಂದ ಅನೈರ್ಮಲ್ಯ ಹೆಚ್ಚಾಗುತ್ತಿದೆ. ಕೆಲವು ಪ್ರದೇಶಗಳನ್ನು ಹಂದಿಗಳು ವಾಸಸ್ಥಾನ ಮಾಡಿಕೊಂಡಿವೆ. ಪುರಸಭೆ ಆಡಳಿತವು ಹಂದಿಗಳಿಂದ ಉಂಟಾಗುತ್ತಿರುವ ಅನೈರ್ಮಲ್ಯ ತಪ್ಪಿಸಿ ನೈರ್ಮಲ್ಯ ಕಾಪಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link