ತುಮಕೂರು: ಸಿದ್ದಿವಿನಾಯಕ ಸೇವಾ ಮಂಡಳಿ : 27ರಂದು ಮೂರ್ತಿ ವಿಸರ್ಜನೆ

ತುಮಕೂರು

    ಸಿದ್ಧಗಂಗಾ ಮಠಾಧ್ಯಕ್ಷರಾಗಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದ ನಗರದ ಸಿದ್ಧಿವಿನಾಯಕ ಸೇವಾ ಮಂಡಳಿಗೆ ಈಗ 44 ವರ್ಷ ತುಂಬಿದೆ. ಅದ್ದೂರಿ ಗಣೇಶೋತ್ಸವ ಆಚರಿಸುವ ಮೂಲಕ ಪ್ರಸಿದ್ಧವಾಗಿದ್ದ ಮಂಡಳಿ ನಗರದ ಇತರೆ ಗಣೇಶೋತ್ಸವ ಸಮಿತಿಗಳಿಗಿಂತಾ ಹೆಚ್ಚು ದಿನ ಗಣಪತಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ, ಸಾಂಸ್ಕøತಿಕ ಕಾರ್ಯಗಳನ್ನು ಆಯೋಜಿಸುತ್ತಾ ಜನಮನ ಸೆಳೆದಿತ್ತು.

    ಕೊರೊನಾ ಸೋಂಕಿನ ಕಾರಣದಿಂದ ಸಿದ್ಧಿವಿನಾಯಕ ಸೇವಾ ಮಂಡಳಿ ಈ ಬಾರಿ ಸರಳವಾಗಿ ಗಣೇಶೋತ್ಸವ ಆಚರಿಸುತ್ತಿದೆ. ಹಿಂದಿನಂತೆ ಗಣೇಶ ಮೂರ್ತಿಯ ವೈಭವದ ಮೆರವಣಿಗೆ ಈ ಬಾರಿ ಇಲ್ಲ. ಕೇವಲ ಆರು ದಿನಗಳಿಗೆ ತನ್ನ ಕಾರ್ಯಕ್ರಮಗಳನ್ನು ಸೀಮಿತಗೊಳಿಸಿದೆ. ನಿತ್ಯ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ, ಆದರೆ, ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಲ್ಲ.

   ಗಣೇಶ ಚರ್ತುರ್ಥಿಯಂದು ಸಿದ್ಧಗಂಗಾ ಮಠಾಧ್ಯರಾದ ಸಿದ್ಧಲಿಂಗಸ್ವಾಮೀಜಿ ಮಂಡಳಿಯ ಈ ವರ್ಷದ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ ನೀಡಿದರು.ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಕಾಯಿಲೆ ನಿವಾರಣೆಯಾಗಲಿ, ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ಸ್ವಾಮೀಜಿ, ಗಣಪತಿಯನ್ನು ಪ್ರಾರ್ಥಿಸಿದರು.

   ಗಣೇಶೋತ್ಸವ ಸಡಗರಕ್ಕೆ ಕೊರೊನಾ ಕಂಟಕವಾಗಿದೆ. ಗಣೇಶ ಮಂಡಳಿಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಸಿದ್ಧಿವಿನಾಯಕ ಸೇವಾ ಮಂಡಳಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿತ್ತು, ಕೊರೊನಾ ಇರುವ ಕಾರಣದಿಂದ ಈ ಬಾರಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸರಳವಾಗಿ ಆಚರಿಸಲಾಗುತ್ತದೆ. ಈ ಬಾರಿ ಆರು ದಿನ ಕಾಲ ಗಣೇಶ ಪ್ರತಿಷ್ಠಾನೆ ಮಾಡಿ ಈ ತಿಂಗಳ 27ರಂದು ಮಂಡಳಿ ಆವರಣದಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ಹೇಳಿದರು.

    ಪ್ರತಿಷ್ಠಾಪನಾ ಸಮಾರಂಭದಲ್ಲಿ ನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ಸದಸ್ಯ ಮಹೇಶ್, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಮಂಡಳಿ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ, ಕಾರ್ಯದರ್ಶಿ ರಾಘವೇಂದ್ರರಾವ್, ಸಹಕಾರ್ಯದರ್ಶಿ ಜಗಜ್ಯೋತಿ ಸಿದ್ಧರಾಮಯ್ಯ, ಖಜಾಂಚಿ ಪ್ರಭು ಬಾಳಯ್ಯ ಮೊದಲಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link