ತಿಪಟೂರು :
ಕೊರೊನಾ ಮಹಾಮಾರಿ ಹೆಚ್ಚಾಗುತ್ತಿರುವಾಗ ನಮಗೆ ರಜೆಎಂದು ಸುಮ್ಮನೇ ಕುಳಿತುಕೊಳ್ಳದೇ ಸರ್ಕಾರಿ ಅಧಿಕಾರಿಗಳು ಸರ್ಕಾರದಋಣತೀರಿಸುವ ಕೆಲಸವನ್ನು ಮಾಡಿ ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸವನ್ನು ಮಾಡಿಎಂದು ಶಾಸಕ ಬಿ.ಸಿ.ನಾಗೇಶ್ ಸರ್ಕಾರಿ ಅಧಿಕಾರಿಗಳಿಗೆ ಕರೆನೀಡಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ 2020-21ನೇ ಸಾಲಿನ ಜೂನ್‍ಅಂತ್ಯದ ತ್ರೈಮಾಸಿಕ ಪ್ರಗತಿ ವರದಿ ಪರಿಶೀಲನೆ ಸಭೆಯಲ್ಲಿಸರ್ಕಾರಿ ಅಧಿಕಾರಿಗಳು ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿಕಣ್ಮುಚಿ ಸಂಬಳವನ್ನು ತೆಗೆದುಕೊಂಡರೇ ವಿನಹ ನಾನು ಕೊರೊನಾ ಸೇವಕನಾಗಿ ಬಂದು ಕೆಲಸವನ್ನು ಮಾಡುತ್ತೇನೆಂದು ಮುಂದೆ ಬಂದವರಿಲ್ಲಆದರೆ ನನಗೆ ವಯಸ್ಸಾಗಿದೆಇಲ್ಲ ನನ್ನಆರೋಗ್ಯ ಸರಿಇಲ್ಲವೆಂದು ನನ್ನನ್ನುಕೊರೊನಾ ಸಂದರ್ಭದಲ್ಲಿ ಸೇವೆಗೆ ಬರಲು ಆಗುವುದಿಲ್ಲವೆಂದು ತಿಳಿಸಲು ಬಂದರೇ ವಿನಃ ಯಾರೂ ಸಹ ಸ್ವಯಂ ನಾನು ಕೆಲಸಮಾಡುತ್ತೇನೆಂದು ಬಾರದೇಇರುವುದುತುಂಬಾ ವಿಷಾದನೀಯ ಸಂತತಿ.
ಮುಂದಿನ ದಿನಗಳಲ್ಲಿ ನೀವು ಕೊರೊನಾ ವಾರಿಯರ್ಸ್ ಆಗಿ ಸೇವೆಮಾಬೇಕಾಗುತ್ತದೆಜೊತೆಗೆ ನೀವು ಸಾರ್ವಜನಿಕರಿಗೆ ಸಾಮಾಜಿಕಅಂತರ, ಮಾಸ್ಕ್‍ದರಿಸುವುದುಕೋವಿಡ್ ಬಗ್ಗೆ ಜಾಗೃತಿಯನ್ನು ಮೂಡಿಸಿ ಎಂದು ಸರ್ಕಾರಿ ಅಧಿಕಾರಿಗಳಿಗೆ ಎಲ್ಲದಕ್ಕೂ ಸಿದ್ದರಾಗಿರಿ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇ.ಓಗೆ ತಲುಪದಆಯುಷ್‍ಕಿಟ್:
ತಾಲ್ಲೂಕಿನಆಯುಷ್‍ಇಲಾಖೆಯಿಂದತಾಲ್ಲೂಕಿನಾದ್ಯಂತಕೊರೊನಾ ಬಾರದಂತೆತಡೆಯುವಆರೋಗ್ಯವರ್ಧಕಕಿಟ್ ವಿತರಿಸಲಾಗುತ್ತಿದೆಆದರೆ ನನೆಗೆ ಕಿಟ್ ಸಿಕ್ಕಿಲ್ಲ ಎಂದುತಾ.ಪಂ ಇ.ಓ ಸಭೆಯಲ್ಲಿ ತಿಳಿಸಿದರು.ಈ ಬಗ್ಗೆ ಉತ್ತರಿಸಿದ ಆಯುಷ್‍ಅಧಿಕಾರಿ ಹೆಗ್ಗಡೆ ನಾವು ನಗರದ ಸರ್ಕಾರಿಆಯುರ್ವೇದಆಸ್ಪತ್ರೆಯಲ್ಲಿ ವಿತರಿಸಲಾಗುತ್ತಿದೆ ಮತ್ತು ಮತ್ತಿಹಳ್ಳಿ, ಮಸವನಘಟ್ಟಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸುತ್ತಿದ್ದೇವೆಎಂದರು.
ನೀವು ಔಷಧಿಯನ್ನು ವಿತರಿಸುತ್ತಿರುವುದು ಸರಿಆದರೆಇದರ ಪ್ರಚಾರಕ್ಕೆ ಏನು ಮಾಡುತ್ತಿದ್ದೀರಎಂದು ಪ್ರಶ್ನಿಸಿದ್ದಲ್ಲದೇ ಸಾಮಾಜಿಕಜಾಲತಾಣದಲ್ಲಿ ಪ್ರಚಾರಮಾಡಿಎಂದು ಸಲಹೆ ನೀಡಿಔಷಧಿಯನ್ನು ಹೆಚ್ಚುಜನರಿಗೆ ತಲುಪಿಸಿ ಎಂದು ತಿಳಿಸಿದರು.
ರೈತರಿಗೆ ಸಿಗದ ಹನಿನೀರಾವರಿಯೋಜನೆ :
ಸಭೆಯಲ್ಲಿತೋಟಗಾರಿಕಾಇಲಾಖೆಯ ವಿಷಯ ಬಂದಾಗ 2018-19, 2019-20ನೇ ಸಾಲಿನ 756 ಕಡತಗಳು ಬಾಕಿ ಇದ್ದು ಅವುಗಳಿಗೆ ಬೇಕಾದ 2.14 ಕೋಟಿಅನುದಾನ ಬಂದತಕ್ಷಣ ವಿಲೇವಾರಿ ಮಾಡುವುದಾಗಿಎಂದುಪ್ರಭಾರ ಸಹಾಯಕತೋಟಗಾರಿಕಾಅಧಿಕಾರಿನವೀನ್ ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಲ್ಪ ಸಿಟ್ಟಾದ ಶಾಸಕರುಕೇಂದ್ರ ಸರ್ಕಾರದ ನೀರನ ಸದ್ಭಳಕೆಯಾಗಿ ರೈತರಜೊತೆಗೆ ಜಲಸಂಪನ್ಮೂಲವು ಉಳಿಯಲೆಂದು ಪ್ರಯತ್ನಿಸುತ್ತಿರಬೇಕಾದರೆ ನಿಮ್ಮ ಬೇಜವಾಬ್ದಾರಿಯಿಂದ ಹಳ್ಳ ಹಿಡಿಯುತ್ತಿದೆ.ಈಗ ಉಳಿದಿರುವ 756 ಕಡತಗಳು ಏಕೆ ಉಳಿದಿವೆ ಅದರಲ್ಲಿದೋಷವೇನಾದರುಇದೆಯೇ.ಇದು ಶೀಗ್ರವಾಗಿ ವಿಲೇವಾರಿಯಾಗಬೇಕು ಮತ್ತು ನಿಮ್ಮ ಅಧಿಕಾರಿಗಳು ಸ್ಥಳ ವೀಕ್ಷಣೆಯನ್ನು ಸೂಕ್ತವಾಗಿ ಮಾಡುತ್ತಿಲ್ಲ. ಎಲ್ಲ ಕುಳಿತಲ್ಲಿಯೇ ಮಾಡುತ್ತಿದ್ದಾರೆ ಮತ್ತು ನಿಮ್ಮ ಕೆಲಕೇವಲ ಪೈಪು, ಗೊಬ್ಬರ ಬೀಜ ವಿತರಿಸುವುದಲ್ಲ ರೈತರ ಅಭ್ಯದಯಕ್ಕಾಗಿ ಸೂಕ್ತವಾದ ಯೋಜನೆಗಳನ್ನು ರೈತ ಮನೆಬಾಗಿಲಿಗೆ ತಲುಪಿಸುವ ಜವಾಬ್ದಾರಿಯಾಗಬೇಕು ಎಂದ ಅವರು ಆಗಸ್ಟ್ 15ರ ಒಳಗಾಗಿ ಎಲ್ಲಾ ಕಡತಗಳು ಯಾವುದೇದೋಷವಿದ್ದರು ಸರಿಪಡಿಸಿ ಸಿದ್ದಪಡಿಸಿರಬೇಕು ಎಂದುತಾಕೀತು ಮಾಡಿದರು.
ಕೃಷಿಕ ಸಮಾಜದಅಧ್ಯಕ್ಷದೇವರಾಜು ಮಾತನಾಡಿತೋಟಗಾರಿಕೆಇಲಾಖೆಯಲ್ಲಿ ಕೇವಲ ಡೀಲರ್‍ಗಳ ರಾಜ್ಯಭಾರವಾಗಿದ್ದುರೈತರಿಗೆ ನೇರವಾಗಿ ಏನು ಸಿಗುತ್ತಿಲ್ಲ ರೈತರು ಕೇವಲ ಅರ್ಜಿಯನ್ನು ಸಹ ಅಧಿಕೃತ ಡೀಲರ್‍ಗಳೇ ಭರ್ತಿಮಾಡುತ್ತಿದ್ದಾರೆಂದು ಆರೋಪಿಸಿದರು.
ಕ್ಷೀರಭಾಗ್ಯದ5852 ಕೆ.ಜಿ ಹಾಲಿನ ಪುಡಿಅವಧಿ ಮೀರುತ್ತಿದೆ:
ಸಭೆಯಲ್ಲಿ ಅಕ್ಷರ ದಾಸೋಹದ ವತಿಯಿಂದ ರಜೆ ಅವಧಿಯಲ್ಲಿ ಮಕ್ಕಳಿಗೆ ಬೇಕಾದ ಅಕ್ಕಿ ಬೇಳೆಯನ್ನು ನೀಡಲಾಗಿದ್ದು ಇದೇ ಅವಧಿಯಲ್ಲಿ ಕಳೆದ ಸಾಲಿನ ಉಳಿದಿರುವ 5852ಕೆ.ಜೆ ಹಾಲಿ ಪುಡಿಯು ಅವಧಿ ಮೀರುತ್ತಿದೆಎಂದು ತಿಳಿಸಿದರು.ಈ ಬಗ್ಗೆ ಶಾಸಕರು ಪ್ರಶ್ನಿಸಿದಾಗ ಶಾಲೆಗೆ ಬರುವಎಲ್ಲಾ ಮಕ್ಕಳು ಹಾಲನ್ನು ಸೇವಿಸುವುದಿಲ್ಲ ಆದ್ದರಿಂದಇದು ಹಾಗೆಯೇ ಉಳಿದಿದೆ ಎಂದುಅಕ್ಷರದಾಸೋಹದಅಧಿಕಾರಿ ಸರಸ್ವತಿ ತಿಳಿಸಿದರು.
ಕಂಡ ಕಂಡಲ್ಲಿ ಚೆಲ್ಲಾಡುತ್ತಿರುವ ಮದ್ಯದ ಬಾಟಲಿಗಳು :
ಮದ್ಯದಂಗಡಿಗಳ ಬಳಿಯಲ್ಲಿ ಬಾಟಲ್, ಪ್ಯಾಕೆಟ್‍ಗಳು ರಸ್ತೆಯಲ್ಲಿ ಬಿದ್ದಿದ್ದ ಸಾರ್ವಜನಿಕರುಓಡಾಡಲುತೊಂದರೆಆಗುತ್ತಿದೆ.ಅಂತಹ ಮದ್ಯದಂಗಡಿಗಳ ಲೈಸೆನ್ಸ್‍ರದ್ದು ಮಾಡಿಶಾಸಕರುಅಬಕಾರಿ ಅಧಿಕಾರಿಗಳಿಗೆ ಆದೇಶಿಸಿದರು.ಸಭೆಯಲ್ಲಿತಾ.ಪಂ.ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ತಹಸೀಲ್ದಾರ್ ಚಂದ್ರಶೇಖರ್.ಆರ್.ಜೆ., ಡಿ.ವೈ.ಎಸ್ಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
