ಬೆಂಗಳೂರು
ಫಾಸ್ಟ್ರ್ಯಾಕ್ ಕಂಪನಿಯ ನಕಲಿ ಲಗೇಜ್ ಬ್ಯಾಗ್‍ಗಳು, ಟ್ರಾಲಿ ಬ್ಯಾಗ್‍ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿ 231 ಬ್ಯಾಗ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಕಲಾಸಿಪಾಳ್ಯದ ಅಬ್ದುಲ್ ಗಫಾರ್ ಕಯುಂ (50) ಹಾಗೂ ಅಮೀರ್ ಇಸ್ಮಾಯಿಲ್ (40)ನಿಂದ 229 ನಕಲಿ ಟ್ರಾಲಿ ಬ್ಯಾಗ್‍ಗಳು ಹಾಗೂ 2 ಲಗೇಜ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳು ಕಲಾಸಿ ಪಾಳ್ಯದ ಮಾರ್ವ ಟ್ರೇಡಿಂಗ್ ಕಾರ್ಪೋರೇಷನ್ ಅಂಗಡಿಗಳಲ್ಲಿ ನಕಲಿ ಬ್ಯಾಗ್‍ಗಳನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಕಂಪನಿಯ ಹರೀಶ್ ಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಹಲವು ದಿನಗಳಿಂದ ನಕಲಿ ಫಾಸ್ಟ್ ಟ್ರ್ಯಾಕ್‍ನ ಬ್ಯಾಗ್‍ಗಳು ಹಾಗೂ ಟ್ರಾಲಿಗಳನ್ನು ತಂದು ಶೇಖರಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
