ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮ

ಹರಪನಹಳ್ಳಿ:

       ಪಟ್ಟಣದ ಮಿನಿ ವಿಧಾನಸೌಧಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ರಾಷ್ಟೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಆಚರಿಸಲಾಯಿತು.

       ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಿಭಾಗಾಧಿಕಾರಿ ಡಾ.ಮಂಜುನಾಥಸ್ವಾಮಿ ಮಾತನಾಡಿ, `ಸಾಮಾಜಿಕ ಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಡಾ.ಬಿ.ಆರ್.ಅಂಬೇಡ್ಕರ ಜೀವನಪೂರ್ತಿ ಹೋರಾಟ ನಡೆಸಿದರು. ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು, ಸಾಮಾಜಿಕ ಸಮಾನತೆಯ ಮೂಲಕ ದೇಶದ ಅಭಿವೃದ್ಧಿ ಸಾಧಿಸಲು ಅವರು ತೋರಿಸಿದ ದಾರಿ ಮಾದರಿಯಾಗಿದೆ ಎಂದು ಹೇಳಿದರು.

     ತಹಶೀಲ್ದಾರ್ ಪ್ರಸಾದ ಮಾತನಾಡಿ, ದೇಶದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ ಶ್ರಮಿಸಿದರು. ಮತದಾನದ ಹಕ್ಕು ದೇಶದಲ್ಲಿ ಎಲ್ಲ ಪ್ರಜೆಗಳ ಹಕ್ಕು ಎಂದು ಸಾರಿ ಮತದಾನವ ಜನರ ಅಸ್ತ್ರ ಎಂದು ಸಾಬೀತು ಪಡಿಸಿದರು. ಅಗಾದವಾದ ಜ್ಞಾನ ಹೊಂದಿದ ಡಾ.ಅಂಬೇಡ್ಕರ ಅವರು ಸಂವಿಧಾನ ರಚನೆ ಬಹುಮುಖ್ಯ ಪಾತ್ರ ವಹಿಸಿದ್ದರು. ಸಮ ಸಮಾಜದ ಕಲ್ಪನೆ ಅವರ ಪ್ರಮುಖ ಸಿದ್ಧಾಂತವಾಗಿತ್ತು ಎಂದು ಹೇಳಿದರು.

     ಉಪನ್ಯಾಸ ನೀಡಿದ ದುರುಗೇಶ್ ಪೂಜಾರ ಮಾತನಾಡಿ, ಮಹತ್ಮಾ ಗಾಂಧೀಜಿ ಅವರಂತೆ ಅನುಯಾಯಿಗಳು ಅಂಬೇಡ್ಕರ್ ಅವರಿಗೆ ಇದ್ದಿದ್ದರೆ ದೇಶದ ಸ್ಥಿತಿ ಹೀಗಿರುತ್ತಿರಲಿಲ್ಲ. ಅಂಬೇಡ್ಕರ್ ಆಚರಣೆಗೆ ಸೀಮಿತಗೊಳಿಸಿದ್ದೇ ಅವರ ತತ್ವಾದರ್ಶಗಳ ಪಾಲನೆ ಮಾಡಬೇಕಿದೆ. ಅವರು ನೀಡಿರುವ ಹಕ್ಕುಗಳನ್ನು ದುರಾಶೆಗೆ ಬಳಕೆ ಆಗುತ್ತಿರುವುದು ಬೇಸರದ ಸಂಗತಿ. ಸಮಾಜದಲ್ಲಿ ಬೇರೂರಿದ್ದ ಅನಿಷ್ಠಗಳನ್ನು ದೂರು ಮಾಡಲು ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರರು ಎಂದರು.

     ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಮತಾ ಹೊಸಗೌಡರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ ಡೊಳ್ಳಿನ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಎಇಇ ಜಯಪ್ಪ, ಪಿ.ಎಸ್‍ಐ ಶ್ರೀಧರ, ಅಧಿಕಾರಿಗಳಾದ ಸೋಮನಾಥ್, ಭೀಮನಾಯ್ಕ, ಎಸ್.ಎಸ್. ಬಂಕಾಪುರ, ಆನಂದ, ಗುರುಬಸವರಾಜ, ಎನ್.ಜಿ.ಬಸವರಾಜ, ಜುಂಜೇಶ್ ಮಾಳ್ಗಿ, ಗೌರಮ್ಮ, ಬಿ.ಮಂಜುಳ, ಮುಂಡಾಸದ, ಸುಧೀರ್, ಸುನೀತಾ, ಯಾಸ್ಮೀನ್, ಚಂದ್ರಶೇಖರ ಪುರದ್, ಸೈಯದ್, ಅಮರೇಶ್, ಬಸವರಾಜ, ದೇವೇಂದ್ರಪ್ಪ, ಇಟ್ಟಿಗಿ ಪರಶುರಾಮ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link