ಬೆಂಗಳೂರು
ಸಕಲ ಸಿದ್ಧತೆ, ಬಿಗಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೊಸ ವರ್ಷದ ಸಂಭ್ರಮ ನಡೆಯುವಂತೆ ನೋಡಿಕೊಂಡ ನಗರ ಪೊಲೀಸರ ಕಾರ್ಯಕ್ಕೆ ನಗರದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರ ಸಂಭ್ರಮಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸರು ಎಲ್ಲಾ ರೀತಿಯ ಮುಂಜಾಗೃಕ ಕ್ರಮಗಳನ್ನು ಕೈಗೊಂಡು ಮೆಚ್ಚುಗೆಗೆ ಪಾತ್ರರಾಗಿರಾಗಿದ್ದಾರೆ.
ರಾಜ್ಯ ಮೀಸಲು ಪಡೆ,ಸಶಸ್ತ್ರ ಮೀಸಲು ಪಡೆ,ಗೃಹ ರಕ್ಷಕ ದಳ ಸೇರಿ 14 ಸಾವಿರಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಬ್ರಿಗೇಡ್ ರಸ್ತೆ ಎಂಜಿ ರಸ್ತೆ ಸೇರಿ ಜನಸಂದಣಿ ಸೇರುವ ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ತಳ್ಳಿ ಒಳನುಗ್ಗುವರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ನಗರದ ಎಲ್ಲಾ ಫ್ಲೈಓವರ್‍ಗಳು ಬಂದ್ ಆಗಿದ್ದವು,ಮೆಟ್ರೋ ಮತ್ತು ಬಿಎಂಟಿಸಿ ಸಂಚಾರ 2 ಗಂಟೆಯವರೆಗೂ ಇತ್ತು.ಬಿಎಂಟಿಸಿ ಬಸ್ಸುಗಳು ನಗರದ ಎಲ್ಲಾ ಭಾಗಗಳಿಗೂ ಲಭ್ಯವಾಗಿದ್ದವು.
ಯಾವುದೇ ರೀತಿಯ ಆತಂಕವಿಲ್ಲದೇ 2019ನೇ ವರ್ಷ ಸ್ವಾಗತಿಸಿದ್ದಾರೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ.ಯಾವುದೇ ಸಂಚಾರ ಸಮಸ್ಯೆ ಉಂಟಾಗದೇ ನೋಡಿಕೊಂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳಿಲ್ಲದೇ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ನಡೆದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ