ಲಂಬಾಣಿಗರಿಗೆ ಬಗರ್‍ಹುಕುಂ ಸಾಗುವಳಿ ಹಕ್ಕು ಪತ್ರಕ್ಕಾಗಿ ಆಗ್ರಹ

ಚಿತ್ರದುರ್ಗ;

        ಲಂಬಾಣ, ಕೊರಚ, ಕೊರಮ ಜನಾಂಗದವರಿಗೆ ಬಗರ್‍ಹುಕುಂ, ಅರಣ್ಯ ಭೂಮಿ, ಹುಲ್ಲು ಬನ್ನಿ ಖರಾಬು, ಸಾಗುವಳಿ ಭೂಮಿಯ ಹಕ್ಕು ಪತ್ರಗಳನ್ನು ತುರ್ತಾಗಿ ನೀಡಬೇಕೆಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಹಾಗು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಂಟಿಯಾಗಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

       ಹೊಳಲ್ಕೆರೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇವರು ರಾಜ್ಯ ಸರ್ಕಾರ 2019ರ ಮಾರ್ಚ 16 ರವರೆಗೆ ನಮೂನೆ 57ರಡಿಯಲ್ಲಿ 100 ರೂ. ಶುಲ್ಕದೊಂದಿಗೆ ಹೊಸ ಅರ್ಜಿಗಳನ್ನು ಪಡೆದು ಆಯಯಾ ಸಾಗುವಳಿದಾರರ ಹೆಸರಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.

        ಈಗಾಗಲೆ ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರು 1989 ಮತ್ತು 1990ರ ಅವಧಿಯಲ್ಲಿ 50 ಮತ್ತು 53 ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಈಗಾಗಲೆ ಹಕ್ಕು ಪತ್ರಗಳನ್ನು ನೀಡಬೇಕಾಗಿತ್ತು ಆದರೆ ಅಧಿಕಾರಿ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಕ್ಕು ಪತ್ರಗಳನ್ನು ನೀಡುವಲ್ಲಿ ವಿಳಂಬವಾಗಿದೆ ಎಂದು ಕರ್ನಾಟಕ ಭೂ ಹಕ್ಕು ವೇದಿಕೆಯ ಸಂಚಾಲಕರಾದ ಕೆ.ಬಿ. ರೂಪನಾಯ್ಕ್ ಆರೋಪಿಸಿದರು.

         ರಾಜ್ಯದಲ್ಲಿ ಇದುವರೆಗೆ 12 ಸಾವಿರ ಎಕರೆ ಭೂಮಿಯ ಸಾಗುವಳಿದಾರರಿಗೆ ಮಾತ್ರ ಹಕ್ಕು ಪತ್ರಗಳನ್ನು ನೀಡಲಾಗಿದ್ದು ಸುಮಾರು 35 ಲಕ್ಷಕ್ಕೂ ಹೆಚ್ಚು ಜನ ಸಾಗುವಳಿದಾರರು ಹಕ್ಕು ಪತ್ರಗಳಿಂದ ವಂಚನೆಗೊಳಗಾಗಿದ್ದಾರೆ ಎಂದು ಆರೋಪಿಸಿರು.

         ರಾಜ್ಯ ಸರ್ಕಾರ ಆಯಾಯಾ ತಾಲ್ಲೂಕುಗಳ ಶಾಸಕರ ನೇತೃತ್ವದಲ್ಲಿ ಬಗರ್ ಹುಕು ಭೂಮಿಯ ಸಾಗುವಳಿಯ ಪತ್ರ ನೀಡಲು ಸಮಿತಿ ರಚನೆ ಮಾಡಲಾಗಿದ್ದು ಆದರೆ ಯಾರೊಬ್ಬ ಶಾಸಕನು ಸಹ ಗಂಭೀರವಾಗಿ ಪರಿಗಣಿಸಿ ಭೂಮಿ ಹಂಚಿಕೆ ಮಾಡುವ ವಿಚಾರದಲ್ಲಿ ಕಾರ್ಯ ಪ್ರೌವೃತ್ತರಾಗಿಲ್ಲ ಎಂದು ಹೇಳಿದ. ಅವರು ಕಳೆದ ವಿಧಾನ ಸಭಾ ಚುನಾವಣೆ ಮುನ್ನ ಜಿಲ್ಲೆಯಲ್ಲಿ ಸುಮಾರು 1772 ಹಕ್ಕು ಪತ್ರಗಳು ತಯಾರು ಮಾಡಲಾಗಿತ್ತು ಆದರೆ ರಾಜಕೀಯ ಕಾರಣಗಳಿಗೆ ಹಕ್ಕು ಪತ್ರ ನೀಡಲಾಗಿಲ್ಲ ಆದ್ದರಿಂದ ಜನರು ಬಗರ್ ಹುಕುಂ, ಅರಣ್ಯ, ಭೂಮಿ ಸಾಗುವಳಿ ಪಡೆದು ಕೊಳ್ಳಲು ಹೋರಾಟದ ಮಾರ್ಗದಿಂದ ಮಾತ್ರ ಸಾದ್ಯ ಎಂದು ಹೇಳಿದರು.,

       ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ರಾಷ್ಟ್ರೀಯ ಸಂಚಾಲಕರಾದ ಆರ್.ವಿಶ್ವಸಾಗರ್ ಮಾತನಾಡಿ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ 6 ಎಕರೆಯಷ್ಟು ಭೂಮಿ ಹಂಚಿಕೆ ಮಾಡುವ ಅವಕಾಶವಿದ್ದು ಆದರೆ ರಾಜಕಾರಣಿಗಳು, ಬಂಡವಬಾಳ ಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿ ಸಾವಿರಾರು ಎಕರೆ ಭೂಮಿ ಇರುವುದರಿಂದ ಸಣ್ಣ, ಅತಿಸಣ್ಣ, ಬಡ ರೈತರಿಗೆ ಭೂಮಿ ಸಿಗದೆ ಇರುವ ವಾತಾವರಣ ಉದ್ದೇಶ ಪೂರ್ವಕವಾಗಿ ನಿರ್ಮಾಣ ಮಾಡಲಾಗಿದೆ ಎಂದರು.

       ನಿಯಮ 94 ಮತ್ತು 94(ಸಿ) ಕಾನೂನಿನ ಅನ್ವಯ ನಗರ ಮತ್ತು ಗ್ರಾಮೀಣ ಪ್ರದೇಶದ ವಸತಿ ಹೀನರಿಗೆ ಕಾನೂನು ಬದ್ದ ನಿವೇಶನ ಭೂಮಿಯನ್ನು ಹಂಚಿಕೆ ಮಾಡುವ ಅವಕಾಶವಿದ್ದು ಆ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

        ಹೊಳಲ್ಕೆರೆ ತಾಲ್ಲೂಕು ಬಂಜಾರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರನಾಯ್ಕ್ ಮಾತನಾಡಿ ಈ ದೇಶದ ಭೋವಿ, ಬಂಜಾರ ಪರಿಶಿಷ್ಟ ಜಾತಿ ವರ್ಗದ ಜನರು ಮತ್ತು ಅಲ್ಪ ಸಂಖ್ಯಾತರು ಆರ್ಥಿಕವಾಗಿ ಅಭಿವರಧ್ದಿಯಾಗಬೇಕಾದರೆ ಕೇಂದ್ರ ಸರ್ಕಾರ ರೂಪಿಸಿರುವ ಕೌಶಲ್ಯ ಅಭಿವೃಧ್ದಿ ತರಬೇತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃಧ್ದಿಯಾಗಬೇಕಾಗಿದೆ ಎಂದು ಹೇಳಿದರು.

         ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಿ ಬಗರ್ ಹುಕುಂ, ಅರಣ್ಯ ಭೂಮಿ ಹಲ್ಲು ಬನ್ನಿ ಖರಾಬು ಸಾಗುವಳಿದಾರರು ಹಕ್ಕುಪತ್ರಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟಿತ ಹೋರಾಟ ಅನಿವಾರ್ಯವಿದ್ದು ಎಲ್ಲರೂ ಕೂಡ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

         ಪತ್ರಿಕಾಗೋಷ್ಟಿಯಲ್ಲಿ ಹೊಳಲ್ಕೆರೆ ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಬಸವರಾಜ ನಾಯ್ಕ್, ಉಪಾಧ್ಯಕ್ಷ ಪುಟ್ಟನಾಯ್ಕ್, ನಾಗನಾಯ್ಕ್, ಮುಖಂಡರಾದ ರವಿಕುಮ ಆರ, ಈ ಚಂದ್ರನಾಯ್ಕ್, ಈಛಘಟ್ಟದ ರಾಜಣ್ಣ, ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.ಇದೇ ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಬಗರ್ ಹುಕುಂ ಸಾಗುವಳಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap