ಬೆಂಗಳೂರು
ಈ ವರ್ಷದ ಆರಂಭದಲ್ಲಿ ಭಾರೀ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾದ ಕೊಡಗು ಜಿಲ್ಲೆಯ ಜನರ ಪುನರ್‍ವಸತಿಗಾಗಿ, ಸಾರ್ವಜನಿಕ ವಲಯದ ಬಿಇಎಂಎಲ್ 1 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿ ಅವರ ಪರಿಹಾರನಿಧಿಗೆ ದೇಣಿಗೆ ನೀಡಿದೆ ಬಿಇಎಂಎಲ್‍ನ ಉದ್ಯೋಗಿಗಳು ಮತ್ತು ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ದೇಣಿಗೆಯಾಗಿ ಸಲ್ಲಿಸಿದ್ದಾರೆ.
ಬಿಇಎಂಎಲ್‍ನ ಅಧ್ಯಕ್ಷ ಮತ್ತು ನಿರ್ವಾಹಣಾ ನಿರ್ದೇಶಕ ದೀಪಕ್ ಕುಮಾರ್ ಹೋಟಾ ಈ ಸಂಬಂಧದ ಚೆಕ್‍ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಿದರು. ಕೇರಳ ಮುಖ್ಯಮಂತ್ರಿ ಅವರ ಪರಿಹಾರನಿಧಿಗೆ ಸಹ ಬಿಇಎಂಎಲ್ ಈಚೆಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿತ್ತು. ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತರಿಗೆ 500 ಮನೆಗಳನ್ನು ಒದಗಿಸಲು ಬಿಇಎಂಎಲ್, ಐದು ಕೋಟಿ ರೂಪಾಯಿ ದೇಣಿಗೆಯನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಸಲ್ಲಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
