ದೇವನಹಳ್ಳಿ ಬಳಿ ಬೋಯಿಂಗ್ ಇಂದ ಯುದ್ಧ ವಿಮಾನಗಳ ತಯಾರಿಕಾ ಘಟಕ ಆರಂಭ

ಬೆಂಗಳೂರು 

      ಬೋಯಿಂಗ್ ಇಂಡಿಯಾ ಲಿ. ಕಂಪನಿಯು ದೇವನಹಳ್ಳಿ ವಿಮಾನನಿಲ್ದಾಣದ ಬಳಿಯ ಏರೋಸ್ಪೇಸ್ ಪಾರ್ಕ್ ವ್ಯಾಪ್ತಿಯಲ್ಲಿ ಯುದ್ಧ ವಿಮಾನಗಳ ಬಿಡಿ ಭಾಗದ ತಯಾರಿಕಾ ಘಟಕ ಹಾಗೂ ಜಾಲಹಳ್ಳಿ ಐಎಎಫ್ ಸ್ಟೇಷನ್ ನಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

        ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಎರಡನೇ ದಿನವಾದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಅಧ್ಯಕ್ಷ ಸುನೀಲ್ ಪಿಳ್ಳೈ, ಈ ವರ್ಷದಲ್ಲಿ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ನಲ್ಲಿ ಘಟಕ ಆರಂಭಿಸಲಾಗುವುದು. ಇದರಿಂದ ಸಂಸ್ಥೆ ತಯಾರಿಸುವ ನಾನಾ ಮಾದರಿಯ ವಿಮಾನಗಳಿಗೆ ಬಿಡಿ ಭಾಗಗಳನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

       ಜಾಲಹಳ್ಳಿ ಕೇಂದ್ರದಲ್ಲಿ 60 ಸಾವಿರ ಚದರಡಿ ವಿಸ್ತೀರ್ಣದ ತರಬೇತಿ ಕೇಂದ್ರದಲ್ಲಿ ಯುದ್ಧ ವಿಮಾನಗಳ ಇಂಜಿನಿಯರಿಂಗ್, ವಿನ್ಯಾಸ ಹಾಗೂ ದುರಸ್ತಿ ಇತ್ಯಾದಿ ಚಟುವಟಿಕೆಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಇದರಿಂದ ಹೊಸ ಪೀಳಿಗೆಯ ವಿಮಾನಗಳಿಗೆ ಬೇಕಾದ ನುರಿತ ಪೈಲಟ್ ಹಾಗೂ ತಂತ್ರಜ್ಞರನ್ನು ಹೊಂದುವ ಐಎಎಫ್ ಆಶಯ ಈಡೇರಲಿದೆ ಎಂದರು.

       ಬೋಯಿಂಗ್ ಕಂಪನಿಯ ಉಪಾಧ್ಯಕ್ಷ ತೋಂ ಬ್ರೆಕನ್ ರಿಡ್ಜ್ ಮಾತನಾಡಿ, ಎಚ್ ಎ ಎಲ್ ಹಾಗೂ ಮಹೀಂದ್ರ ಸಂಸ್ಥೆಗಳ ಜೊತೆಗೂಡಿ ಐದನೇ ಪೀಳಿಗೆಯ ಯುದ್ಧ ವಿಮಾನ ಎಫ್/ಎ-18 ಮಾದರಿಯ ವಿಮಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಈ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸುವ ಗುರಿಯನ್ನು ಹೊಂದಲಾಗಿದೆ ಎಂದರು. 

        ಬೋಯಿಂಗ್ ಕಂಪನಿಯು ಅಮೆರಿಕದ ನೌಕಾದಳ ಹಾಗೂ ವಾಯುಸೇನೆಗೆ ಅತ್ಯಂತ ಸುಧಾರಿತ ವಿಮಾನಗಳು, ಕ್ಷಿಪಣಿ ಹಾಗೂ ಮಿಲಿಟರಿ ಉಪಕರಣಗಳನ್ನು ತಯಾರಿಕೊಡುವಲ್ಲಿ ನಿರತವಾಗಿದೆ. ಭಾರತ ಸೇರಿದಂತೆ ವಿಶ್ವದ 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಂಪನಿಯ ಉತ್ಪನ್ನಗಳು ಮಾರಾಟ ಮಾಡಲಾಗುತ್ತಿದೆ. ಭಾರತದಿಂದ ಕಂಪನಿಯ ಹಲವು ವಿಧದ ಮಿಲಿಟರಿ ಉಪಕರಣಗಳ ಖರೀದಿ ಹಾಗೂ ತಯಾರಿಕೆಗೆ ಬೇಡಿಕೆಯಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap