ಬೆಂಗಳೂರು
ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪುಂಡನೊಬ್ಬನನ್ನು ಹಿಡಿದು ಮಹಿಳೆಯರೇ ಧರ್ಮದೇಟು ಕೊಟ್ಟು ನಗರದ ಕೆ.ಆರ್. ಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯರು ಹಿಡಿದು ಕೊಟ್ಟ ಕಾಮುಕ ಫಯಾಜ್ ಪಾಷಾನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಕೆ.ಆರ್. ಪುರಂನ ಗಾಯತ್ರಿನಗರದ ಮಹಿಳೆಯೊಬ್ಬರಿಗೆ ಆರೋಪಿ ಫಯಾಜ್ ಪಾಷಾ ಪರಿಚಿತನಾಗಿದ್ದನು. ಈ ಸಲುಗೆಯಲ್ಲಿ ಆರೋಪಿ ಆಗಾಗ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದನು.
ಇತ್ತೀಚಿಗೆ ಫಯಾಜ್ ಪಾಷಾ ಮಹಿಳೆಯ ಮಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಈ ಬಗ್ಗೆ ಮಗಳು ತಾಯಿಯ ಬಳಿ ಆತನ ವರ್ತನೆ ಬಗ್ಗೆ ಹೇಳಿದ್ದಾಳೆ.
ಇದರಿಂದ ಕೋಪಗೊಂಡ ಮಹಿಳೆ ಎರಡು ಮೂರು ಬಾರಿ ಆರೋಪಿ ಫಯಾಜ್ ಪಾಷಾಗೆ ಖಡಕ್ ವಾರ್ನಿಂಗ್ ನೀಡಿದ್ದರು. ಆದರೂ ಆರೋಪಿ ಪಾಷಾ ಮನೆಗೆ ಬಂದು ಯುವತಿಯ ಜೊತೆ ಮತ್ತೆ ಅಸಭ್ಯವಾಗಿ ವರ್ತಿಸುತ್ತಿದ್ದನು.ಕೊನೆಗೆ ಮಹಿಳೆ ಈತನಿಗೆ ತಕ್ಕ ಪಾಠ ಕಲಿಸಬೇಕೆಂದು ಇಂದು ಸುತ್ತಮತ್ತಲಿನ ಮನೆಯ ಮಹಿಳೆಯರೆಲ್ಲ ಸೇರಿಕೊಂಡು ಫಯಾಜ್ ಪಾಷಾನಿಗೆ ಧರ್ಮದೇಟು ನೀಡಿದ್ದಾರೆ. ಆರೋಪಿಗೆ ಹಿಗ್ಗಮುಗ್ಗಾ ಥಳಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮಹಿಳೆಯರು ಒಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ