ಬೆಂಗಳೂರು
ಮಲ್ಲೇಶ್ವರಂನಲ್ಲಿನ ಸಂಬಂಧಿಕರ ಮದುವೆಗೆ ನೆರೆಯ ಆಂಧ್ರಪ್ರದೇಶದಿಂದ ಬಂದು ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 3 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಬುಧವಾರ ಬೆಳಿಗ್ಗೆ ಕಸಿದು ಪರಾರಿಯಾಗಿದ್ದಾರೆ.
ಮಲ್ಲೇಶ್ವರಂನ 8ನೇ ಮುಖ್ಯರಸ್ತೆಯ ಜಿಎಂ ರಿಜಾಯ್ಸ್ ಹೋಟೆಲ್‍ನಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ಆಂಧ್ರದಿಂದ ನಿರ್ಮಲಾ ಎಂಬ ಮಹಿಳೆ ಬಂದಿದ್ದಾರೆ. ಜತೆಯಲ್ಲಿದ್ದ ಇಬ್ಬರೊಂದಿಗೆ 6.30ರ ವೇಳೆ ನಡೆದುಕೊಂಡು 8ನೇ ಮುಖ್ಯರಸ್ತೆಯ ಹೊಟೇಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 120 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ನಿರ್ಮಲಾ ಜತೆಯಲ್ಲಿದ್ದ ಇಬ್ಬರು ಸ್ವಲ್ಪ ದೂರ ಮುಂದೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು,ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಮಲ್ಲೇಶ್ವರಂ ಪೆÇಲೀಸ್ ಇನ್ಸ್‍ಪೆಕ್ಟರ್ ಪ್ರಸಾದ್ ಅವರು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
ಮತ್ತೊಂದು ಸರಕಳವು
ಇಟ್ಟಮಡುವಿನ ಗೀತಾಲಕ್ಷ್ಮಿ ಅವರು ಗಿರಿನಗರದ ವಿದ್ಯಾನಗರದಲ್ಲಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಮಂಗಳವಾರ ಬೆಳಿಗ್ಗೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಗೀತಾಲಕ್ಷ್ಮಿ ಅವರು ಬೆಳಿಗ್ಗೆ 10.30ರ ವೇಳೆ ವಿದ್ಯಾನಗರದ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿರುವ ಗಿರಿನಗರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
