ಪಾವಗಡ:
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಅಂಗವಾಗಿ ಅರೋಗ್ಯ ಇಲಾಕೆ ನೀಡಿದ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಿ 70 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡಿದ್ದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದ ಘಟನೆ ಶುಕ್ರವಾರ ಜರುಗಿದೆ.
ಜಂತು ಹುಳುವಿನ ನಾಶಕ್ಕಾಗಿ ಮಾತ್ರೆಯನ್ನು ತಾಲ್ಲೂಕಿನ ಪ್ರತಿಶಾಲೆಯ 1ವರ್ಷದಿಂದ 19ನೇ ವಯಸ್ಸಿನ ಮಕ್ಕಳಿಗೆ ಈ ಮಾತ್ರೆ ನುಂಗಿಸಿದ್ದು ತಾಲ್ಲೂಕಿನ ಹಲವು ಮಕ್ಕಳು ವಾಂತಿ ಹಾಗೂ ಬೇದಿಯಾಗುವ ಪ್ಯಾನಿಕ್ ನಿಂದ ಬಳಲುತ್ತಿದ್ದವರನ್ನು ನಿಡಗಲ್ ಹೋಬಳಿಯ ಮದ್ದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಲೆಯಲ್ಲಿ 50 ಮಕ್ಕಳು, ಉಪ್ಪಾರಹಳ್ಳಿ ಸರ್ಕಾರಿ ಶಾಲೆಯಲ್ಲಿ 10 ಮತ್ತು ತೂಮಕುಂಟೆ ಶಾಲೆಯಲ್ಲಿ 15 ಮಕ್ಕಳು ವಾಂತಿ ಮಾಡಿಕೊಂಡಿದ್ದು, ತಕ್ಷಣ ಎಲ್ಲಾ ಮಕ್ಕಳನ್ನು ಪಾವಗಡ ಸಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸುದ್ದಿ ತಿಳಿದು ತಕ್ಷಣ ಪಾವಗಡ ಸಕಾರಿ ಆಸ್ಪತ್ರೆಗೆ ಸಾರ್ವಜನಿಕರು ಬೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು, ಆದರೇ ಯಾವೊಬ್ಬ ಜನಪ್ರತಿನಿದಿಯು ಮಕ್ಕಳ ಆರೋಗ್ಯ ವಿಚಾರಿಸಲು ಪಾವಗಡ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದೆ ಇರುವುದರಿಂದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮದ್ದೆ ಗ್ರಾಮದಲ್ಲಿ ಘಟನೆ ಜರಿಗದ ತಕ್ಷಣ ಬಿ.ಇ.ಓ. ಕುಮಾರಸ್ವಾಮಿ ತಕ್ಷಣ ಮದ್ದೆ ಗ್ರಾಮಕ್ಕೆ ತೆರಳಿ ತಮ್ಮ ವಾಹನದಲ್ಲಿ ಮಕ್ಕಳನ್ನು ಮಂಗಳವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಉಳಿದ ಮಕ್ಕಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಖಾಸಗಿ ಆಂಬುಲೆನ್ಸ್ ನಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ತಹಶೀಲ್ದಾರ್ ವರದರಾಜು, ಬಿ. ಆರ್.ಸಿ. ಪವನ್ ಕುಮಾರ್ ರೆಡ್ಡಿ, ಅಕ್ಷರದಾಸೋಹ ನಿರ್ದೇಶಕ ಹನುಮಂತರಾಯಪ್ಪ , ಬಿ. ಆರ್.ಪಿ. ವೀರನಾಗಪ್ಪ ಮತ್ತು ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಬಳಿ ಈ ಘಟನೆಗೆಯ ಬಗ್ಗೆ ಚರ್ಚಿಸಿದರು.
ಮಕ್ಕಳ ವೈದ್ಯ ಡಾ. ಕಿರಣ್ ಮಾತನಾಡಿ, ಜಂತು ಹುಳು ನಾಶಕ ಮಾತ್ರೆ ನುಂಗಿದ ಕೆಲ ಶಾಲೆಯ ಮಕ್ಕಳು ಹೊಟ್ಟೆ ನೋವು ಕಂಡು ಬಂದಿದ್ದು, ತಲೆ ನೋವಿ, ವಾಂತಿ ಮಾಡಿಕೊಂಡಿದ್ದು ಕೆಲ ಮಕ್ಕಳು ಹೆದರಿಕೊಂಡಿದ್ದಾರೆ ಒಟ್ಟು 70 ಮಕ್ಕಳ ಪೈಕಿ ಹತ್ತಿಪ್ಪತ್ತು ಮಕ್ಕಳಿಗೆ ಮಾತ್ರೆ ವಾಂತಿ ಕಾಣಿಸಿಕೊಂಡಿದೆ, ಯಾವುದೆ ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ್, ಡಾ. ರಾಜೇಶ್, ಇತರೆ ವೈದ್ಯರುಗಳು ಮಕ್ಕಳಿಗೆ ಚಿಕಿತ್ಸೆ ನೀಡಲು ನೆರವಾದರು. ಮದ್ದೆ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಸುಬ್ಬರಾಯಪ್ಪ ಮಾತನಾಡಿ, ಮದ್ಯಾನ್ಹ ಊಟ ಮಾಡಿದ ನಂತರ ಆಶಾ ಕಾರ್ಯಕರ್ತೆ ಮಕ್ಕಳಿಗೆ ಮಾತ್ರ ನುಂಗಿಸಿದ ಅರ್ಧ ಘಂಟೆಯಲ್ಲಿ ಕೆಲ ಮಕ್ಕಳಿಗೆ ಆಸ್ವಸ್ತರಾದರು ತಕ್ಷಣ ಬಿ.ಇ.ಓ. ರವರಿಗೆ ಮಾಹಿತಿ ನೀಡಿ, ಖಾಸಗಿ ಅಂಬುಲೆನ್ಸ್ ನಲ್ಲಿ ಮಕ್ಕಳನ್ನು ಸಾಗಿಸಲಾಯಿತು ಎಂದು ತಿಳಿಸಿದ್ದಾರೆ.
ಸಂಜೆ ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರ್ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಪರೀಶಿಲಿಸಿದರು ಘಟನೆಯ ಬಗ್ಗೆ ವೈದ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು, ಈ ವೇಳೆ ಅರಸೀಕೆರೆ ತಾ.ಪಂ. ಸದಸ್ಯ ಪುಟ್ಟಣ್ಣ ಮಂಗಳವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲಾ, ತಕ್ಷಣ ಈ ಆಸ್ಪತ್ರೆಗೆ ಸಿಬ್ಬಂದಿಯನ್ನು ನೇಮಿಸಬೇಕೇಂದು ಮತ್ತು ಸರ್ಕಾರಿ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಬೆಕೇಂದು ಎ.ಸಿ. ರವರಲ್ಲಿ ಒತ್ತಾಯ ಮಾಡಿದರು. ಚಿಕತ್ಸೆ ನಂತರ ಎಲ್ಲಾ ಮಕ್ಕಳನ್ನು ಪುನಃ ಅಂಬುಲೆನ್ಸ್ ನಲ್ಲಿ ಮದ್ದೆ ಗ್ರಾಮಕ್ಕೆ ರವಾನಿಸಲಾಯಿತು.