ಜಗಳೂರಿನಲ್ಲಿ ಕ್ರಿಸ್‍ಮಸ್ ಆಚರಣೆ

ಜಗಳೂರು 
ಪಟ್ಟಣದ ಪ್ರೇರಣ ಸಮಾಜ ಸೇವಾ ಸಂಸ್ಥೆಯಲ್ಲಿ ಸಂಭ್ರಮದಿಂದ ಕ್ರಿಸ್‍ಮಸ್ ಆಚರಿಸಲಾಯತು.ಆಚರಣೆಯಲ್ಲಿ ಪಾಲ್ಗೊಂಡ ಶಾಸಕ ಎಸ್ ವಿ ರಾಮಚಮದ್ರ, ಕ್ರಿಸ್‍ಮಸ್ ಹಬ್ಬ ಎಲ್ಲರಿಗೂ ಸುಖ ಸಂತೋಷ ತರಲೆಂದು ಹಾರೈಸಿ ಶುಭಕೋರಿದರು. 

         ವಿಶ್ವ ಶಾಂತಿಗೆ ಗಾಗಿ ಹಲವಾರು ದಾರ್ಶನಿಕರು ತಮ್ಮದೇ ಆದ ಕೊಡುಗೆ ನೀಡಿದ್ದು, ಯೇಸು ಕ್ರಿಸ್ತರು ಸಹ ವಿಶ್ವಕ್ಕೆ ತಮ್ಮದೇ ಆದ ಸಂದೇಶವನ್ನು ನೀಡಿದ್ದಾರೆ. ವಿಶ್ವದಲ್ಲಿ ಗಂಡು ಮತ್ತು ಹೆಣ್ಣು ಎರಡೆ ಜಾತಿಗಳು ಆದರೆ ವiನುಷ್ಯರು ನನ್ನ ಜಾತಿ ದೊಡ್ಡದು ನಿನ್ನ ಜಾತಿ ದೊಡ್ಡದು ಎಂದು ಆದ್ಯತೆ ನೀಡುತ್ತಿರುವುದು ಸರಿಯಲ್ಲ. ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಂದೇ ಎಂಬ ಭಾವನೆಯನ್ನು ನಾವೆಲ್ಲರೂ ಹೊಂದಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ಪ್ರತಿಯೋಬ್ಬರು ಎಲ್ಲಾ ಧರ್ಮವನ್ನು ಗೌರವಿಸು ಗುಣ ಹೊಂದಬೇಕು ಜೀಸಸ್ ರವರು ಸಮಾಜದಲ್ಲಿ ಅಂಕುಡೊಂಕು ಗಳನ್ನು ತಿದ್ದಲು ಹೊರಾಟ ಮಾಡುವುದರ ಮೂಲಕ ಶಾಂತಿಸಾರಲಿಕ್ಕೆ ತಮ್ಮ ಜೀವನವನ್ನೆ ಅಂತ್ಯಗೊಳಿಸಿಕೊಂಡು ಅವರು ತೋರಿಸಿದ ಆದಿಯಲ್ಲಿ ನಾವೆಲ್ಲರು ಸಾಗಬೇಕು ಎಂದು ಹೇಳಿದರು. ಶಾಸಕ ಎಸ್.ವಿ.ರಾಮಚಂದ್ರರವರನ್ನು ಸನ್ಮಾನಿಸಿ ಗೌರವಿಸಲಾಯಿತು.

       ಚರ್ಚ್ ಫಾದರ್ ವಿಲಿಯಂ ಮಿರಾಂದ್, ಜಿಲ್ಲಾ ಎಸ್ಸಿ ಎಸ್ಟಿ ಜಾಗೃತಿ ಸಮಿತಿ ಸದಸ್ಯ ಪಿ.ಎಸ್.ಅರವಿಂದ್ , ಪಟ್ಟಣ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ,ಮುಖಂಡರಾದ ರವಿ , ಮಂಜಣ್ಣ, ಸೂರ್ಯಕಿರಣ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link