ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಬೇಡ

ಚಿತ್ರದುರ್ಗ:

       ನೆಹರು ಕುಟುಂಬದ ಕುಡಿ ರಾಹುಲ್‍ಗಾಂಧಿ ದೇಶದ ಚುಕ್ಕಾಣಿ ಹಿಡಿಯಬೇಕಾಗಿರುವುದರಿಂದ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗುವಂತೆ ಸಂಸದ ಬಿ.ಎನ್.ಚಂದ್ರಪ್ಪ ಕರೆ ನೀಡಿದರು.

      ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಇಂದಿರಾಗಾಂಧಿರವರ 102 ನೆ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

       ಉಕ್ಕಿನ ಮಹಿಳೆ ಎಂದೆ ಹೆಸರುವಾಸಿಯಾಗಿದ್ದ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಬಡವರ ಪರವಾಗಿದ್ದರು. ಇಪ್ಪತ್ತು ಅಂಶಗಳ ಕಾರ್ಯಕ್ರಮ ಸೇರಿದಂತೆ ಬಡವರಿಗೆ ನೆರವಾಗುವ ಅನೇಕ ಮಹಾತ್ಮಾಕಾಂಕ್ಷೆ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಬಂಡವಾಳಶಾಹಿಗಳು, ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆದರೂ ಎದೆಗುಂದದೆ ಜೀವನದ ಕೊನೆಯುಸಿರಿರುವತನಕ ದೇಶ ಸೇವೆಯಲ್ಲಿ ತೊಡಗಿಕೊಂಡು ಪ್ರಾಣತ್ಯಾಗ ಮಾಡಿದರು. ಅಂತಹ ದಿಟ್ಟ ಮಹಿಳೆಯ ತತ್ವ ಸಿದ್ದಾಂತಗಳನ್ನು ಕಾರ್ಯಕರ್ತರು ಹಾಗೂ ಮುಖಂಡರುಗಳು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

         ಇಂದಿರಾಗಾಂಧಿರವರು ದೇಶದ ಪ್ರಧಾನಿಯಾಗಿದ್ದಾಗ ಆರ್.ಎಸ್.ಎಸ್., ಭಜರಂಗದಳ, ವಿಶ್ವಹಿಂದುಪರಿಷತ್ ಇವರುಗಳ್ಯಾರು ಇರಲಿಲ್ಲ. ಈಗ ಎಲ್ಲಾ ಹುಟ್ಟಿಕೊಂಡಿದ್ದಾರೆ. ಬಡವರ ಹಾಗೂ ಸಂವಿಧಾನ ವಿರೋಧಿಗಳು ಈಗ ಕೇಂದ್ರದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಅಂತಹವರಿಂದ ಬಡವರಿಗೆ ಯಾವುದೇ ಅನುಕೂಲವಿಲ್ಲ. ಅದಕ್ಕಾಗಿ 2019 ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೋಮುವಾದಿ ಬಿಜೆಪಿ.ಯನ್ನು ತೊಲಗಿಸಬೇಕು ಎಂದು ಹೇಳಿದರು.

        ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂದಿದೆ. ಆದರೆ ಬಿಜೆಪಿ.ಯವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಯಾರು ಯಾವ ಜನಾಂಗವನ್ನು ವಿರೋಧಿಸುತ್ತಾರೋ ಅವರೇ ನಿಜವಾದ ಸಂವಿಧಾನ ವಿರೋಧಿಗಳು ಎಂದು ದೇಶಭಕ್ತಿ ಹೆಸರಿನಲ್ಲಿ ಶಾಂತಿಯನ್ನು ಕದಡುತ್ತಿರುವವರ ವಿರುದ್ದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದರು.

       ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾಗಾಂಧಿರವರು ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಬಡವರು, ಜನಸಾಮಾನ್ಯರು ಬ್ಯಾಂಕ್‍ಗಳಲ್ಲಿ ವ್ಯವಹರಿಸುವಂತಾಯಿತು. ಅಲ್ಲಿಯತನಕ ಬ್ಯಾಂಕ್ ಕೇವಲ ಬಂಡವಾಳಶಾಹಿಗಳು, ಉದ್ದಿಮೆದಾರರಿಗೆ ಮಾತ್ರ ಮೀಸಲಾಗಿತ್ತು. ಕಷ್ಟದ ಕಾಲದಲ್ಲಿ ಬಡವರಿಗೆ ಕೆಂಪುಜೋಳವನ್ನು ವಿತರಿಸಿದ ಇಂದಿರಾಗಾಂಧಿರವರನ್ನು ಈಗಲೂ ಹಳಬರು ನೆನಪಿಸಿಕೊಳ್ಳುತ್ತಾರೆ. ಅಂತಹ ದೀರ ದಿಟ್ಟ ಮಹಿಳೆ ಹಾಕಿಕೊಟ್ಟ ಮಾರ್ಗದರ್ಶನಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.

        ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಅಜ್ಜಪ್ಪ, ತಾಜ್‍ಪೀರ್, ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಜಿ.ಮನೋಹರ್, ಸೇವಾದಳದ ಅಶ್ರಫ್‍ಆಲಿ,
ಚಾಂದ್‍ಪೀರ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಕೆ.ಪಿ.ಸಿ.ಸಿ. ಎಸ್.ಸಿ.ವಿಭಾಗದ ರಾಜ್ಯ ಸಂಚಾಲಕ ರವಿಕುಮಾರ್, ನ್ಯಾಯವಾದಿ ರವಿ, ಡಿ.ದುರುಗೇಶ್, ಪ್ರೊಫೆಷೆನಲ್ ವಿಭಾಗದ ಜಿಲ್ಲಾಧ್ಯಕ್ಷ ಮಹಡಿಶಿವಮೂರ್ತಿ, ಆರತಿಮಹಡಿ ಶಿವಮೂರ್ತಿ, ಕೆ.ಪಿ.ಸಿ.ಸಿ.ಸದಸ್ಯ ಟಿ.ಮಲ್ಲೇಶ್, ಮರುಳಾರಾಧ್ಯ, ಡಿ.ಎಸ್.ಸೈಯದ್‍ವಲಿಖಾದ್ರಿ, ಖುದ್ದೂಸ್, ನಾಗರಾಜ್‍ಜಾನ್ಹವಿ, ನಾಸಿರುದ್ದೀನ್, ಮುನಿರಾಜು,ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap