ಬೆಂಗಳೂರು
ರಾಜ್ಯದ 26 ಜಿಲ್ಲೆಗಳ 100 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಮದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆಉಂಟಾಗದಂತೆ ಮುಂದಿನ ಮೇ ಅಂತ್ಯದವರೆಗೆ ಹೊರ ರಾಜ್ಯಗಳಿಗೆ ಮೇವು ಮಾರಾಟ ನಿಬಂಧಿಸಲಾಗಿದೆ.
ಈ ಸಂಬಂಧಅಗತ್ಯಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆಎಂದುಕಂದಾಯ ಸಚಿವಆರ್.ವಿ. ದೇಶಪಾಂಡೆ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನಿಡಿದಎಲ್ಲಾಚೆಕ್ ಪೋಸ್ಟ್‍ಗಳಿಂದ ಮೇವು ಹೊರರಾಜ್ಯಕ್ಕೆ ಹೋಗದಂತೆ ಹಾಗೂ ಒಣ ಮೇವನ್ನುಯಾವುದೇರೂದಲ್ಲಿ ಸಂಸ್ಕರಿಸಿ ಸಗಣೆ ಮಾಡುವುದನ್ನು ನಿಷೇಧಿಸಿದೆ.
ಮೇವು ನಿಬರ್ಂಧಿಸುವಲ್ಲಿಜಿಲ್ಲಾ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆಎಂದುಅವರು ಃಏಳಿದರು.
ರಾಜ್ಯ ಸರ್ಕಾರದಆದೇಶವನ್ನುಉಲ್ಲಂಘಿಸುವವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಮೇವಿನ ಕೊರತೆಉಂಟಾದಂತೆ ಪಶುಸಂಗೊಪನಾ ಇಲಾಖೆಗೆ ಮೇವು ಕಿಟ್‍ಖರೀದಿ ಮಾಡಿ, ಮೇವು ಬೆಳೆಸಿ ರೈತರಿಗೆಕಡಿಮೆದರದಲ್ಲಿ ಮಾರಾಟ ಮಾಡುವಕುರಿತಂತೆಅಭಿವೃದ್ಧಿಆಯುಕ್ತರ ನೇತೃತ್ವದಲ್ಲಿ ಸಮಿತಿರಚಿಸಲಾಗಿದೆಎಂದರು.
ಬರ ಪೀಡಿತ ಪ್ರದೇಶಗಳ ಬಗ್ಗೆ ಅಧ್ಯಯನ, ಮೇಲ್ವಿಚಾರಣೆ ಮಾಡಲು ವಿಭಾಗ ಮಟ್ಟದಲ್ಲಿ ನಾಲ್ಕು ಸಂಪುಟಉಪಸಮಿತಿರಚಿಸುವ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಳೆದ ಸರ್ಕಾರದಲ್ಲಿ ವಿಭಾಗ ಮಟ್ಟದಲ್ಲಿ ಸಂಪುಟಉಪಸಮಿತಿರಚನೆ ಮಾಡಿದ ನಂತರ ಬರ ನಿರ್ವಹಣೆ ಸಮರ್ಪಕವಾದ ಹಿನ್ನೆಲೆಯಲ್ಲಿಕಂದಾಯ ಇಲಾಖೆ ಈ ಶಿಫಾರಸು ಮಾಡಿದ್ದು, ಸರ್ಕಾರ ಸೂಕ್ತ ನಿರ್ಧಾರ ಪ್ರಕಟಿಸಲಿದೆಎಂದರು.
ರಾಜ್ಯದಲ್ಲಿಅತಿವೃಷ್ಠಿ ಹಾಗೂ ಅನಾವೇಷ್ಠಿ ನಿರ್ವಹಣೆಗಾಗಿಅಗತ್ಯಕ್ರಮಕೈಗೊಂಡಿದ್ದು, ಕೇಮದ್ರ ಸರ್ಕಾರ ಸಹಾ ಸೂಕ್ತವಾಗಿ ಸ್ಪಂದಿಸಿದ್ದು, ಅತಿವೃಷ್ಠಿ ಪರಿಹಾರವಾಗಿಕೇಂದ್ರದಿಂದ546 ಕೋಟಿರೂ. ಮಂಜೂರಾಗಿದ್ದು ಈ ಹಣದಲ್ಲಿಇನ್‍ಪುಟ್ ಸಬ್ಸಿಡಿ 323.87 ಕೋಟಿರೂ., ಮನೆ ಹಾನಿ 74.79 ಕೊಟಿರೂ., ಮೂಲಸೌಕರ್ಯ ಹಾನಿಗೆ 139.26 ಕೋಟುಇರೂ. ಹಾಗೂ ಇತರ ಹಾನಿಗೆ 8 ಕೋಟಿರೂ. ಹನವನ್ನು ಮಂಜೂರು ಮಾಡಿದೆ.
ಕೇಂದ್ರದಿಂದ ನೆರವು ಬಂದ ಬಳಿಕ ನಿಯಮದಡಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಲಾಗುವುದುಎಂದರು. ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಉಂಟಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಬಿತ್ತನೆ ಪ್ರಮಾಣ 8 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಕಡಿಮೆಯಾಗಿದೆ.
ಖಸೆಂಬರ್‍ಅಂತ್ಯದವರೆಗೆಕಾದು ನೊಡಿ ವಸ್ತು ಸ್ಥಿತಿ ವರಿದಿಯನ್ನುಕೇಂದ್ರಕ್ಕೆ ಕಳುಹಿಸಿ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದುಎಂದರು.
ರಾಜ್ಯದಲ್ಲಿ ಭೂಕಂದಾಯಕಾಯಿದೆ 1964 ಕಲಂ 94ಎ(4)ಗೆ ತಿದ್ದುಪಡಿಅನ್ವಯಜಮೀನನ್ನು ಸಕ್ರಮಕ್ಕಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಮುಂದಿನ ಮಾರ್ಚ್ 16ರವರೆಗೆ ಕಾಲಾವಕಾಶ ನೀಡಲಾಗಿದೆ. ಸಕ್ರಮಕ್ಕಾಗಿ 100 ರೂ ಶುಲ್ಕದೊಂದಿಗೆ ಅರ್ಜಿ ಸಲ್ಲಿಸುವವರು ನಮೂನೆ 58ರಲ್ಲಿ ಗಣಕೀಕೃತ ನೋಂದಣಿ ಮಾಡಿಕೊಳ್ಳಬೇಕು.
ಇದನ್ನು ಸಮಿತಿ ಪರಾಮರ್ಶಿಸಿ ಸಕ್ರಮ ಮಾಡಿಕೊಳ್ಳಲು ಸಹಕಾರಿಯಾಗಲಿದೆಎಂದರು. ರಾಜ್ಯದಲ್ಲಿ 108 ತಹಸೀಲ್‍ದಾರ್‍ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯ ಲೋಕಸೇವಾ ಆಯೋಗಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ನಂತರ ನೇಮಕ ಮಾಡಿಲಿದೆಎಂದರು.
ಎರಡನೇದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಇನ್ನು ಮುಂದೆ ಕೆಪಿಎಸ್‍ಸಿ ಬದಲುಆಯಾ ಜಿಲ್ಲಾಧಿಕಾರಿಗಳ ಮೂಲಕವೇ ನೇಮಕ ಮಾಡಿಕೊಳ್ಳುವ ನೂತನಕಾನೂನನ್ನು ಶೀಘ್ರದಲ್ಲಿ ಜಾರಿಗೆತರಲು ಉದ್ದೇಶಿಸಿದೆ ಎಂದರು.ಕಂದಾಯಇಲಾಕೆಯಲ್ಲಿ ಕಳೆದ ವಾರ ನಡೆಸಿದ ಕಡತ ವಿಲೇವಾರಿ ಸಪ್ತಾಹದ ಅಂಗವಾಗಿ 2.56 ಲಕ್ಷ ಕಡತಗಳನ್ನು ವಿಲೇವಾರಿ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡತಗಳನ್ನು ವಿಲೇವಾರಿ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ.
ಇನ್ನೂಇಲಾಖೆಯಲ್ಲಿ 8 ಲಕ್ಷ ಕಡತಗಳಿದ್ದು ಕೆಲವು ನ್ಯಾಯಾಲಯದ ಮಟ್ಟಿಲುಏರಿರುವುದರಿಂದ ವಿಲೇವಾರಿ ವಿಳಂಬವಾಗಿದೆ.
ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಡತಗಳನ್ನು ನ್ಯಾಯಸಮ್ಮತವಾಗಿ ವಿಲೇವಾರಿ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ