ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ಥ್…!!!!

ಬೆಂಗಳೂರು

        ರಾಜ್ಯದ 14 ಲೋಕಸಭಾ ಚುನಾವಣೆಗೆ ಗುರುವಾರ ನಡೆಯುವ ಮತದಾನವನ್ನು ಮುಕ್ತ ಹಾಗೂ ಶಾಂತಯುತವಾಗಿ ನಡೆಸಲು ಅಭೂತಪೂರ್ವ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗಿದೆ

        ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ 30,197 ಮತಗಟ್ಟೆಗಳಿದ್ದು, ಅದರಲ್ಲಿ 6,318 ಸೂಕ್ಷ್ಮ ಹಾಗೂ 24,879 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರ ಪಡೆಯ ತುಕಡಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ

        ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕೈಗೊಳ್ಳಲು ವಲಯ ಸಂಚಾರಿ ಗಸ್ತಿನ 1,782 ಮಂದಿ ಸಿಬ್ಬಂದಿ, ವಲಯ ಮೇಲುಸ್ತುವಾರಿ ಸಂಚಾರಿ ಗಸ್ತುವಿನ 474 ಸಿಬ್ಬಂದಿ, 182 ಡಿಎಸ್‍ಪಿ ಸಂಚಾರಿ ಗಸ್ತು ಸಿಬ್ಬಂದಿ, 534 ಸಂಚಾರಿ ತಂಡಗಳು, 443 ಸ್ಥಿರ ಕಣ್ಗಾವಲು ತಂಡಗಳು, ಭದ್ರತಾ ಕೊಠಡಿಗಳಿಗೆ ಕೇಂದ್ರೀಯ ಪಡೆಗಳ 5 ಕಂಪನಿಗಳನ್ನು ನಿಯೋಜಿಸಲಾಗಿದೆ.

        ಮತದಾನ ನಡೆಯುವ 6,318 ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತೆ ಕೈಗೊಳ್ಳಲು ಕೇಂದ್ರ ಪಡೆಗಳ 880 ಮಂದಿ ಶಸ್ತ್ರಸಜ್ಜಿತ ಯೋಧರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 352 ಪ್ರಹಾರ ದಳ, 139 ಕೆಎಸ್‍ಆರ್‍ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂಥ್ ಅವರು ತಿಳಿಸಿದ್ದಾರೆ.

      ಮೊದಲ ಹಂತದ ಚುನಾವಣೆಗೆ 55 ಕೇಂದ್ರದ ಕಂಪನಿಗಳು ಬಂದಿದ್ದು, ಅವುಗಳನ್ನು ಈಗಾಗಲೇ ಸೂಕ್ಷ್ಮ ಮತಗಟ್ಟೆಗಳು ಹಾಗೂ ಗಲಾಟೆ ನಡೆಯುವ ಪ್ರದೇಶಗಳೆಂದು ಗುರುತಿಸಿರುವ ಸ್ಥಳಗಳಿಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

      ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳ ಜೊತೆ ಇಬ್ಬರು ಮುಖ್ಯಪೇದೆಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿಯ ಕೇಂದ್ರ ಪಡೆಗಳ ಲಭ್ಯತೆ ಕಡಿಮೆ ಇರುವುದರಿಂದ ಗೃಹ ರಕ್ಷಕರು, ನಾಗರಿಕ ರಕ್ಷಣಾ ಸಿಬ್ಬಂದಿ ಜೈಲ್ ವಾರ್ಡರ್‍ಗಳು, ಅರಣ್ಯ ರಕ್ಷಕರು, ವೀಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ವಿವರ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap