ಕೊಟ್ಟೂರು 
ಬರಗಾಲದಿಂದಾಗಿ ಮೇವಿನ ಬರದಿಂದಾಗಿ ಜಾನುವಾರುಗಳು ತತ್ತರಿಸುತ್ತಿದ್ದು, ಒಂದು ಕೆ.ಜಿ ಮೇವಿಗೆ 6 ರು. ಕೊಡುತ್ತೇವೆಂದರೂ ರೈತರು ಮೇವು ಕೊಡಲು ಮುಂದಾಗಿಲ್ಲದಿರುವುದು ತಾಲೂಕು ಆಡಳಿತಕ್ಕೆ ತಲೆ ಬಿಸಿ ಮಾಡಿದೆ.
ಕೊಟ್ಟೂರು ಸುತ್ತಮುತ್ತಲ ಗ್ರಾಮಗಳಿಂದ ಮಧ್ಯವರ್ತಿಗಳು ದಿನವೂ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಟ್ಯಾಕ್ಟರ್, ಲಾರಿಗಳಲ್ಲಿ ಸದ್ದಿಲ್ಲದೆ ಬೇರೆ ತಾಲೂಕುಗಳಿಗೆ ಸಾಗಾಣಿಕೆಯಾಗುತ್ತಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಜಿಲ್ಲಾಧಿಕಾರಿ, ಕೊಟ್ಟೂರು ತಾಲೂಕು ಆಡಳಿತಕ್ಕೆ ರೈತರಿಂದ ಕೆ.ಜಿ.ಗೆ 6ರಂತೆ ಖರೀದಿಸಲು ಆದೇಶನೀಡಿದ್ದಾರೆ. ಆದರೆ ಇಲ್ಲಿಯ ತನಕ ಯಾವೊಬ್ಬÀ ರೈತನು ತಾಲೂಕು ಆಡಳಿತಕ್ಕೆ ಮೇವು ಕೊಡಲು ಮುಂದಾಗಿಲ್ಲ.
ಖಾಸಗಿಯವರಿಗಿಂತ ಹೆಚ್ಚಿನ ಬೆಲೆಗೆ ತಾಲೂಕು ಆಡಳಿತ ಮೇವನ್ನು ಖರೀದಿಸಲು ಮುಂದಾಗಿದ್ದರೂ. ಕಡಿಮೆ ಬೆಲೆಗೆ ರೈತರು ಖಾಸಗಿಯವರಿಗೆ ಮೇವನ್ನು ಮಾರಾಟಮಾಡುತ್ತಿರುವುದರ ಮರ್ಮ ಅರ್ಥವಾಗದಂತ್ತಾಗಿದೆ.
ಕೊಟ್ಟೂರು ಭಾಗದ ರೈತರು ತಮ್ಮಲ್ಲಿನ ಹೆಚ್ಚಿನ ಮೇವು ಇದ್ದು ತಾಲೂಕು ಆಡಳಿತಕ್ಕೆ ಕೊಡಲು ಮುಂದಾರೆ, ಒಂದು ಕೆ.ಜಿ. ಮೇವಿಗೆ 6ರು. ನಂತೆ ಖರೀದಿಸುವುದಲ್ಲದೆ. ಒಂದು ಟನ್ ಮೇವು ಸಾಗಾಣಿಕೆಗೆ ಒಂದು ಕಿ.ಮಿ.ಗೆ 15 ರು. ನಂತೆ ಸಾಗಾಣಿಕೆ ವೆಚ್ಚ ನೀಡಲಾಗುವುದು ಎಂದು ತಹಶೀಲ್ದಾರ ಕೆ. ಮಂಜುನಾಥ್ ಬುಧವಾರ ಪತ್ರಿಕೆಗೆ ಮಾಹಿತಿ ನೀಡಿದರು.
ರೈತರ ಕಷ್ಟ, ಜಾನುವಾರ ಬವಣೆಗೆ ಸ್ಪಂದಿಸಿರುವ ಉಜ್ಜಿನಿ ಸದ್ದರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಸ್ವಾಮಿಗಳು, ತಾಲೂಕು ಆಡಳಿತಕ್ಕೆ ತಮ್ಮ ಪೀಠದಲ್ಲಿರುವ ಸುಮಾರು 40 ಟನ್ ಮೇವನ್ನು ಉಚಿತವಾಗಿ ಕೊಡುವುದಾಗಿ ಹೇಳಿರುವುದಾಗಿ ಎಂದು ತಹಶೀಲ್ದಾರ ತಿಳಿಸಿದರು.
ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಈ ಮೊದಲು ಗೋಶಾಲೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಚಿಂತನೆ ನಡೆಸಿದ್ದರು, ಆದರೆ ತಾಂತ್ರಿಕೆ ಬದಲಾವಣೆಯಿಂದಾಗಿ ಉಜ್ಜಿನಿಯಲ್ಲಿ ಮೇವು ಬ್ಯಾಂಕ್‍ನ್ನು ಸ್ಥಾಪಿಸುವುದಾಗಿ ತಹಶೀಲ್ದಾರ ಕೆ. ಮಂಜುನಾಥ್ ಹೇಳಿದರು.
ಕೊಟ್ಟೂರು ತಾಲೂಕಿನ ರೈತರು ತಮ್ಮಲ್ಲಿ ಹೆಚ್ಚಿದ್ದ ಮೇವನ್ನು ತಾಲೂಕು ಆಡಳಿತಕ್ಕೆ ಕೊಡಬೇಕು. ಆದರೆ ಬೇರೆ ತಾಲೂಕಿನ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ತಾಲೂಕು ಆಡಳಿತಕ್ಕೆ ಮೇವು ಕೊಡುವ ರೈತರು ಬ್ಯಾಂಕ್ ಪಾಸ್ ಬುಕ್, ಅಧಾರ ಕಾರ್ಡ ಜೆರಾಕ್ಸನ್ನು ತಹಶೀಲ್ದಾರ್ ಕಚೇರಿಗೆ ಕೊಡಬೇಕು ಎಂದು ಅವರು, ಮೇವು ಬ್ಯಾಂಕಿಗೆ ಶಿರುಗುಪ್ಪ, ಬಳ್ಳಾರಿಯಿಂದ ಮೇವು ಬರಲಿದೆ ಎಂದರು.








