ಚಿತ್ರದುರ್ಗ:
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ವಿಚಾರ ಬಂದಾಗ ಕಳೆದ ಐದು ವರ್ಷದಲ್ಲಿ ಎಲ್ಲರ ಜೊತೆಗೂಡಿ ಕೆಲಸ ಮಾಡಿದ್ದೇನೆ. ಯಾವುದೇ ರಾಜಕೀಯ, ತಾರತಮ್ಯ ಮಾಡಿಲ್ಲ. ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಹೇಳಿದರು
ಬೆಳಗಟ್ಟ – ಹಾಯ್ಕಲ್ ರಸ್ತೆಯನ್ನು 5.5 ಮೀಟರ್ ಅಗಲೀಕರಣಗೊಳಿಸುತ್ತಿದ್ದು, ಇದರ ಕಾಮಗಾರಿಗೆ ತಾಲ್ಲೂಕಿನ ಹಾಯ್ಕಲ್ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಮ್ಮ ಅನುದಾನದಲ್ಲಿ ಸಾಧ್ಯವಾದಷ್ಟು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚು ಬಳಕೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಸಮುಧಾಯ ಭವನ, ಬಸ್ ತಂಗುದಾನ ಇನ್ನಿತರೆ ಜನೋಪಯೋಗಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಪ್ರತಿಬಾರಿಯೂ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸಕಾಲದಲ್ಲಿ ಮಳೆಯಾಗದ ಕಾರಣ ರೈತರ ಬೆಳೆ ಹಾನಿಯಾಗುತ್ತಿದ್ದು, ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಹಳ್ಳಿಗಳಲ್ಲಿ ಉದ್ಯೋಗಕ್ಕಾಗಿ ಜನರು ಬೇರೆ ಬೇರೆ ಊರುಗಳಿಗೆ ಹೋಗುವುದನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಜೊತೆ ಕಾಲ ಕಾಲಕ್ಕೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು
ಜಿಲ್ಲೆಯಲ್ಲಿ ತೀವ್ರ ಬರ ಪರಸ್ಥಿತಿಯಿದ್ದು ರಾಜಕೀಯ ಪಕ್ಷಬೇಧ ಮರೆತು ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಸಂಸದ ಬಿ. ಎನ್.ಚಂದ್ರಪ್ಪ ಹೇಳಿದರು.
ರಾಜ್ಯ ಸರ್ಕಾರವು ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದಂತೆ 165 ಭರವಸೆಗಳನ್ನು ನೀಡಿ, ಬಹುತೇಕ ಭರವಸೆಗಳನ್ನು ಈಡೇರಿಸಿ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅಕ್ಕಿ ಕೊಡುವುದರಿಂದ ಮಕ್ಕಳಿಗೆ ಊಟ ಮಾಡಲು ಅನುಕೂಲವಾಗಿದೆ. ಅಷ್ಟೆ ಅಲ್ಲದೇ ಸರ್ಕಾರವು ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಲು ಹಾಲು ನೀಡುತ್ತಿದೆ ಎಂದು ಹೇಳಿದರು.
ಜಿಲ್ಲೆಯು ಬರಗಾಲಕ್ಕೆ ಪ್ರತಿ ವರ್ಷವು ತುತ್ತಾಗುತ್ತಿದ್ದು, ಬರ ನಿವಾರಣೆಗೆ ಶಾಶ್ವತ ಪರಿಹಾರವಾಗಿ ಭದ್ರ ಮೇಲ್ದಂಡೆ ಯೋಜನೆಯು ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ಹಲವಾರು ಮಹತ್ತರ ಕಾರ್ಯಗಳನ್ನು ಮಾಡುತ್ತೇವೆಂದು ಭರವಸೆಯನ್ನು ಕೊಟ್ಟು ಅದನ್ನು ಮೊಟಕುಗೊಳಿಸಿದೆ, ಆದರೆ ರಾಜ್ಯ ಸರ್ಕಾರ ಉತ್ತಮ ಜನೋಪಕಾರಿ ಕೆಲಸಗಳನ್ನು ಮಾಡಿಸುವುದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ ಬೆಳಗಟ್ಟ ದಿಂದ ಹಾಯ್ಕಲ್ ಮಾರ್ಗವಾಗಿ ರಾಮಜೋಗಿಹಳ್ಳಿ ಕಾಸವರಹಟ್ಟಿಯವರೆಗೆ 5.5 ಮೀಟರ್ ರಸ್ತೆ ಅಗಲೀಕರಣವಾಗುತ್ತಿದ್ದು ಅಭಿವೃದ್ಧಿ ಕಾರ್ಯ ನಿರಂತರವಾಗಿರುತ್ತದೆ ಎಂದು ಹೇಳಿದರು.
ತುಂಗಭದ್ರಾ ಹಿನ್ನೀರನ್ನು ಬಳಸಿಕೊಂಡು, ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಮಾಡುವ 2380 ಕೋಟಿ ರೂ. ಗಳ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಂಸದ ಚಂದ್ರಪ್ಪನವರು ಬಹಳ ಶ್ರಮಪಟ್ಟಿದ್ದಾರೆ ಎಂದು ಹೇಳಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ನೂರಾರು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಇನ್ನಿತರೆ ಮೂಲಭೂತ ಸೌಲಬ್ಯಗಳನ್ನು ದೊರೆಕಿಸಿಕೊಡಲಾಗಿದೆ ಎಂದು ನುಡಿದರು
ತಮ್ಮ ಅವಧಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಇಲ್ಲಿ ಅಭಿವೃದ್ದಿ ಕೆಲಸಗಳು ನಡೆದಿವೆ. ರಾಜಕೀಯ, ಜಾತಿಯತೆ ಬಿಟ್ಟು ಎಲ್ಲರ ವಿಶ್ವಾಸಗಳಿಸಿ ಮುನ್ನಡೆಯುತ್ತಿರುವ ಕಾರಣದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರುತಾಲ್ಲೂಕು ಪಂಚಾಯಿತ್ ಸದಸ್ಯೆ ಚೌಡಮ್ಮ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಸುನೀತ, ಸದಸ್ಯರಾದ ಮೈಲಾರಪ್ಪ, ಲೋಕೇಶ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.