ಬೆಂಗಳೂರು
ನೀಲಗಿರಿ ತೋಪಿನಲ್ಲಿ ಶೆಡ್ ಹಾಕಿಕೊಂಡು ಗೃಹಬಳಕೆಯ ಸಿಲಿಂಡರ್‍ಗಳಿಂದ ಅಕ್ರಮವಾಗಿ ಸಣ್ಣ ಸಿಲಿಂಡರ್‍ಗಳಿಗೆ ರೀಫಿಲ್ಲಿಂಗ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಹೆಬ್ಬಾಳದ ಕನಕನಗರದ ವಿನೋದ್ (21)ನನ್ನು ಬಂಧಿಸಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ಪೈಪ್, 14 ಕೆಜಿ ತೂಕದ 12 ಸಿಲಿಂಡರ್‍ಗಳು, 5 ಕೆಜಿ ತೂಕದ 70 ಸಿಲಿಂಡರ್‍ಗಳು, 2 ಕೆಜಿ ತೂಕದ 9 ಸಿಲಿಂಡರ್‍ಗಳನ್ನು ವಶಪಡಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ
ಆರೋಪಿಯು ಚಿಕ್ಕಜಾಲದ ಕೋಡಗಲಹಟ್ಟಿಯ ನೀಲಗಿರಿ ತೋಪಿನ ಶೆಡ್‍ನಲ್ಲಿ ಗೃಹಬಳಕೆಯ ಸಿಲಿಂಡರ್‍ಗಳಿಂದ ಸಣ್ಣ ಸಿಲಿಂಡರ್‍ಗಳಿಗೆ ಗ್ಯಾಸ್ ಫಿಲ್ಲಿಂಗ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
