ತಿಪಟೂರು
ತಾಲ್ಲೂಕಿನ ಎಲ್ಲಾ ಕೆರೆಗಳಲ್ಲೂ ಅಕ್ರಮವಾಗಿ ಮಣ್ಣನ್ನು ತೆಗೆಯುತ್ತಿದ್ದು ಇನ್ನುಮುಂದೆ ಯಾರೂ ಮಣ್ಣನು ತೆಗೆಯುವಂತಿಲ್ಲವೆಂದು ತಹಸೀಲ್ದಾರ್ ಆರತಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ಕೆರೆಗಳಲ್ಲೂ ಅಕ್ರಮವಾಗಿ ಮತ್ತು ಬೇಕಾಬಿಟ್ಟಿಯಾಗಿ ಮಣ್ಣನ್ನು ತೆಗೆಯುತ್ತಿದ್ದಾರೆ. ಕೆಲವು ರೈತರು ತಮ್ಮ ಜಮೀನಿಗೆ ಮನ್ಣನ್ನು ತೆಗೆಯುತ್ತಿದ್ದರೆ, ಇನ್ನೂ ಕೆಲವರು ವಾಣಿಜ್ಯ ಉದ್ದೇಶಕ್ಕೆ ಅಂದರೆ ಇಟ್ಟಿಗೆ ಕಾರ್ಖಾನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ. ಹೀಗೆ ಮಣ್ಣು ತೆಗೆಯುವುದರಿಂದ ಪರಿಸರ ವ್ಯವಸ್ಥೆಯೂ ಹಾಳಾಗಿ ಭೂಮಿಯ ಅಂತರ್ಜಲವು ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಮುಂದೆ ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಏಕ ಗವಾಕ್ಷಿ ಮೂಲಕ ಅರ್ಜಿಸಲ್ಲಿಸಿ ಅನುಮತಿ ಪಡೆದು ಮಣ್ಣನ್ನು ಮೇಲ್ಪದರದ ಕೇವಲ 3 ಅಡಿಗಳಷ್ಟು ಮಾತ್ರ ತೆಗೆಯಬೇಕು, ಅನಧಿಕೃತವಾಗಿ ಮಣ್ಣನ್ನು ಹೇಗೆ ಬೇಕೋ ಹಾಗೆ ತೆಗೆದು ಪರಿಸರವನ್ನು ಹಾಳುಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.