ಜ.19 ರಂದು ಜಾನಪದ ಕಲಾ ಉತ್ಸವ ಕಾರ್ಯಕ್ರಮ- ಜೆ.ಕೆ ಹುಸೇನ್ ಮಿಯಾ ಸಾಬ್

ಜಗಳೂರು

           ಮಹಮದ್ ಇಮಾಂ ಟ್ರಸ್ಟ್, ಬಯಲು ಸಾಹಿತ್ಯ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಾಯೋಗದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆ.ಎಂ ಇಮಾಂ ಟ್ರಸ್ಟ್ ಅಧ್ಯಕ್ಷ ಹಾಜಿ ಜೆ.ಕೆ ಹುಸೇನ್ ಮಿಯಾ ಸಾಬ್ ತಿಳಿಸಿದರು.

      ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜ.19ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್.ಪಿ ರಾಜೇಶ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಲಿದ್ದಾರೆ. ಜೆ.ಎಂ ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ ಹುಸೇನ್ಮೀಯಾ ಅಧ್ಯಕ್ಷತೆ ವಹಿಸುವರು, ಕ.ಸ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಸಾಪ ಅಧ್ಯಕ್ಷ ಹಜರತ್ ಅಲಿ, ಬಯಲು ಸಾಹಿತ್ಯ ವೇದಿಕೆ ಕಾರ್ಯದರ್ಶಿ ಎಂ.ಎಸ್ ಬಸವೇಶ್, ನೂರ್ ಫಾತೀಮಾ ಬೇಗಂ, ಈಶ್ವರಿ ವಿಶ್ವವಿದ್ಯಾಲಯ ಸಂಚಾಲಕಿ ಅಕ್ಕ ಭಾರತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

       ಕಲಾ ತಂಡಗಳ ಪ್ರದರ್ಶನ ಬೃಹತ್ ಮೆರವಣಿಗೆ ಪ್ರಾರಂಭಗೊಂಡು ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಜೆ.ಎಂ ಇಮಾಂ ಸ್ಮಾರಕ ಶಾಲಾ ಆವರಣ ದಲ್ಲಿ ಸಮಾವೇಶಗೊಳುತ್ತದೆ. 25ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಎಂ.ಕೆ ಶಿವಕುಮಾರ್, ಶಿಕ್ಷಕ ಬಿ.ಟಿ ನಾಗರಾಜ್, ಹರೀಶ್ ಸೇರಿದಂತೆ ಮತ್ತಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap