ಚಿತ್ರದುರ್ಗ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಹಾಗೂ ಜಿಲ್ಲಾ ಕುರುಬರ ಸಂಘದವತಿಯಿಂದ ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿರುವ ಸಾಧಕರು ಹಾಗೂ ಪ್ರತಿಭಾವಂತರಿಗೆ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ತ.ರಾ.ಸು.ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೂ ಮೊದಲು ಕನಕ ವೃತ್ತದಿಂದ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದರು
ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡಿ ಸಾಧನೆಯನ್ನು ಮಾಡಿರುವ ಬಬ್ಬೂರು ಫಾರಂನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಶರಣಪ್ಪ ಜಾಗಡಿ, ಪತ್ರಕರ್ತರಾದ ರವಿಕುಮಾರ್, ನ್ಯಾಯವಾದಿ ಉದಯಶಂಕರ್, ಉದ್ಯಮಿ ಸಂಕ್ರಪ್ಪ ಹಾಗೂ ಸಮಾಜದ ಹಿರಿಯರಾದ ಈಶಣ್ಣರವರು ಸನ್ಮಾನಕ್ಕೆ ಪಾತ್ರರಾದವರಾಗಿದ್ದಾರೆ ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ನಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕಾರ ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿ ಹಾಜರಿದ್ದ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ, ಕುರುಬ ಸಮಾಜದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟಂತೆ ಇದ್ದ ಗೊಂದಲವನ್ನು ಶ್ರೀಗಳು ನಿವಾರಣೆ ಮಾಡುವುದರ ಮೂಲಕ ಶ್ರೀರಾಮ್ರವರನ್ನು ಸಮಾಜದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅದರಂತೆ ಸಮಾಜದ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು
ಸಭಾ ಕಾರ್ಯಕ್ರಮ
ಕಾರ್ಮಿಕ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪಉದ್ಘಾಟನೆ ನೆರವೇರಿಸುವರು. ಹೊಸದುರ್ಗ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದಈಶ್ವರಾನಂದಪುರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಅಧ್ಯಕ್ಷತೆ ವಹಿಸುವರು. ಸಂಸದ ಬಿ.ಎನ್.ಚಂದ್ರಪ್ಪಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷೆ ಸೌಭಾಗ್ಯಬಸವರಾಜ್, ಜಿಲ್ಲೆಯಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರುಗಳು, ಚಿತ್ರದುರ್ಗತಾ.ಪಂ.ಅಧ್ಯಕ್ಷರು, ಜಿಲ್ಲಾಕುರುಬರ ಸಂಘದಅಧ್ಯಕ್ಷ ಎಸ್.ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಡಿ.ವಿ.ಟಿ.ಕರಿಯಪ್ಪ, ನಗರಸಭೆ ಸದಸ್ಯೆ ಹಾಗೂ ಜಿಲ್ಲಾಕುರುಬರ ಸಂಘದ ಮಹಿಳಾ ಘಟಕದಅಧ್ಯಕ್ಷೆ ಮೀನಾಕ್ಷಿಆಗಮಿಸುವರು. ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಜೆ.ಕರಿಯಪ್ಪ ಮಾಳಿಗೆ ಇವರಿಂದ ಉಪನ್ಯಾಸ ಇದೆ . ಆಯಿತೋಳಿನ ಜಿ.ಎನ್.ವಿರೂಪಾಕ್ಷಪ್ಪ ಮತ್ತು ಸಂಗಡಿಗರಿಂದಗೀತಗಾಯನ ಏರ್ಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ, ಕಾರ್ಯದರ್ಶಿ ಲತಾ, ಉಪಾಧ್ಯಕ್ಷೆ ವನಜಾಕ್ಷಿ ಇತರರು ಉಪಸ್ಥಿತರಿದ್ದರು