ಕೃಷಿ ಯೋಜನೆ : ಏಜೆನ್ಸಿಗಳಿಗೆ ಹಬ್ಬ-ರೈತರಿಗೆ ನಾಮ

ಪಾವಗಡ 

      ಕೃಷಿಯಲ್ಲಿ ನೀರಾವರಿ ಯೋಜನೆ ಅನುಸರಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಂದ ರೈತರಿಗೆ ಶೇಕಡಾವಾರು ರಿಯಾಯಿತಿ ದÀರದಲ್ಲಿ ಸ್ಪಿಂಕ್ಲರ್, ಹನಿ ನೀರಾವರಿ ಪದ್ದತಿ ಅನುಷ್ಠಾನಕ್ಕೆ ತಂದಿದೆ. ಏಜೆನ್ಸಿಗಳು ಮತ್ತು ದಲ್ಲಾಳಿಗಳು ಸೇರಿ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಕೃಷಿ ಉಪಕರಣಗಳನ್ನು ವಿತರಿಸದೆ ಯೋಜನೆಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

        ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬಂತೆ, ಸರ್ಕಾರದಿಂದ ಬರುವ ಸೌಲಭ್ಯಕ್ಕೆ ರೈತರಿಂದ ಡಿ.ಡಿ ತೆಗೆಸಿ ಅಧಿಕಾರಿಗಳು ಏಜೆನ್ಸಿಗಳಿಗೆ ಮಾಹಿತಿ ನೀಡಿದರೂ ಸಹ ತಲೆಕೆಡಿಸಿಕೊಳ್ಳದೆ, ಇಷ್ಟ ಬಂದಂತೆ ವರ್ತನೆ ಮಾಡಿ ರೈತರು ವಿತರಣೆ ಕೇಂದ್ರದ ಸುತ್ತು ಸುತ್ತುವಂತಾಗಿದೆ.

        ರೈತರು ನೊಂದು ಕೃಷಿ ಇಲಾಖೆಯ ಸೌಲಭ್ಯ ಪಡೆಯಲು ತಿರುಗಿ ತಿರುಗಿ ಚಪ್ಪಲಿ ಸವೆದಿವೆ. ಸೌಲಭ್ಯ ಮಾತ್ರ ಸಿಗುತ್ತಿಲ್ಲ, ರೈತರು ಬೇಕಾದ ಸೌಲಭ್ಯ ಪಡೆಯಲು ಸಾಧ್ಯವಾಗದೇ ಬೆಳಗ್ಗೆಯಿಂದ ಸಂಜೆ ತನಕ ಕಾದು, ಬಂದ ದಾರಿಗೆ ಸುಂಕವಿಲ್ಲ ಎಂಬತೆ ಏಜೆನ್ಸಿಯ ದಲ್ಲಾಳಿಗಳಿಗೆ ಹಿಡಿ ಶಾಪ ಹಾಕಿ ಕಾಲಿಗೆ ಬುದ್ದಿ ಹೇಳುತ್ತಿದ್ದಾರೆ.

       ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದು ಸಣ್ಣ, ಅತಿ ಸಣ್ಣ ಮತ್ತು ಹಿಂದುಳಿದ ವರ್ಗಗಳ ರೈತರಿಗೆ ಕೃಷಿ ಹೊಂಡ ಯೋಜನೆಯಲ್ಲಿ ಹೊಂಡ ನಿರ್ಮಿಸಿಕೊಳ್ಳಲು ಧನಸಹಾಯ ಮಾಡಿದೆ. ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ನೀರು ಹಿಂಗಿಸಿ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದೆ. ರೈತರಿಗೆ ಟಾರ್‍ಪಾಲಿನ್ ಮತ್ತು ಡೀಸೆಲ್ ಪಂಪ್ ಸೆಟ್ ನೀಡಿ, ಸ್ಪಿಂಕ್ಲರ್‍ಗಳ ಪೈಪು ನೀಡಿ ರೈತನ ಜೀವನ ಮಟ್ಟ ಸುಧಾರಿಸಲು ಸರ್ಕಾರ ಜಾರಿ ಮಾಡಿದೆ. ಆದರೆ ಯೋಜನೆಯ ಪ್ರತಿಫಲವು ಏಜೆನ್ಸಿಯ ದಲ್ಲಾಳಿಗಳ ಪಾಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

      ತಾಲ್ಲೂಕು ಮಟ್ಟದ ಇರಿಗೇಷನ್ ಏಜೆನ್ಸಿಗಳಿಗೆ ಕಂಪನಿಗಳು ಯಂತ್ರೋಪಕರಣಗಳು ಹಾಗೂ ಡ್ರಿಪ್ ಇರಿಗೇಷನ್‍ಗೆ ಸಂಬಂಧÀ ಪಟ್ಟ ಸಾಮಗ್ರ್ರಿಗಳನ್ನು ವಿತರಣೆ ಮಾಡಿವೆ. ಆದರೆ ಏಜೆನ್ಸಿಗಳು ಅವುಗಳನ್ನು 3-4 ತಿಂಗಳಾದರೂ ರೈತರಿಗೆ ವಿತರಣೆ ಮಾಡದ ಕಾರಣ ರೈತರು ಬೇಸತ್ತಿದ್ದಾರೆ.

ಏಜೆನ್ಸಿಗಳ ನಿರ್ಲಕ್ಷ್ಯಕ್ಕೆ ಕಾರಣವೇನು?

       ಸರ್ಕಾರ ಇತ್ತೀಚೆಗೆ ಕಟ್ಟು ನಿಟ್ಟಾಗಿ ಕೃಷಿ ಇಲಾಖೆಯ ಸೌಲಭ್ಯಗಳು ರೈತರಿಗೆ ಸಿಗಬೇಕು ಎಂಬ ಕಾರಣದಿಂದ, ಇಲಾಖೆ ಎದುರುಗಡೆ ಅಧಿಕಾರಿ ಜೊತೆಯಲ್ಲಿ ಫೋಟೊ ತೆಗೆಸಿಕೊಂಡು ಫಲಾನುಭವಿ ಸೌಲಭ್ಯ ಪಡೆಯಬೇಕೆಂದು ಆದೇಶ ಹೊರಡಿಸಿದೆ. ಏಜೆಂಟರು ಅವ್ಯವಹಾರ ಮಾಡಲು ಸಾಧ್ಯವಾಗದ ಕಾರಣ ರೈತರಿಗೆ ಕಂಪನಿಗಳಿಂದ ಬರುವ ಸೌಲಭ್ಯ ನೀಡಲು ಸತಾಯಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

        ಸ್ಥಳೀಯ ಏಜೆನ್ಸಿಯ ಮಾಲೀಕರು ರೈತರ ಹೆಸರಿನಲ್ಲಿ ಸಾಮಗ್ರಿಗಳ ಬಿಲ್ ಮಾಡಿಕೊಂಡು ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆ. ರೈತರಿಂದ ಹನಿ ನೀರಾವರಿಗೆ, ಸ್ಪಿಂಕ್ಲರ್, ಡೀಸೆಲ್ ಎಂಜಿನ್, ಕೃಷಿ ಹೊಂಡ, ಟಾರ್‍ಪಾಲಿನ್ ಯೋಜನೆಯ ಸಹಾಯ ಧನಕ್ಕೆ ಅರ್ಜಿ ಹಾಕಿಸಿಕೊಂಡಿವೆ. ಆದರೆ ಸರ್ಕಾರದಿಂದ ಹಣ ಬಿಡುಗಡೆಯಾದರೂ ಇದುವರೆಗೂ ಸಾಮಗ್ರಿಗಳನ್ನು ನೀಡದೆ ಬಿಲ್ ಮಾಡಿಕೊಂಡು ತೇಗಿದ್ದಾರೆ. ಕೃಷಿ ಇಲಾಖೆಯಲ್ಲಿನ ಏಜೆನ್ಸಿಗಳ ಅವ್ಯವಹಾರ ಬಯಲಾಗಲು, 2016-17 ರಿಂದ 2018 ರ ಏಪ್ರಿಲ್ ತಿಂಗಳಿನಲ್ಲಿ ರೈತರಿಗೆ ವಿತರಿಸಿದ ಸೌಲಭ್ಯಗಳನ್ನು ಸಮೀಕ್ಷೆ ಮಾಡಿದರೆ ಸಾಕು, ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಹೊರಬೀಳುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.

          ಸ್ಥಳೀಯ ಶ್ರೀಮಾರುತಿ ಇರಿಗೇಷನ್ ಸಿಸ್ಟಂ ಏಜೆಂಟ್ ಕೃಷಿ ಸೌಲಭ್ಯಕ್ಕೆ ಅನುಗುಣವಾಗಿರುವ ಯಂತ್ರೋಪಕರಣಗಳಿಗೆ ಕಂಪನಿ ಹೆಸರಿಗೆ ರೈತರು ಡಿ.ಡಿ. ತೆಗೆದು ತಿಂಗಳು ಕಳೆದರೂ, ಫಲಾನುಭವಿಗಳು ಸ್ಪಿಂಕ್ಲರ್, ಇರಿಗೇಷನ್ ಸಾಮಗ್ರಿಗಳನ್ನು ಪಡೆಯಲು ದಿನವೆಲ್ಲ ಕಾದು ಕುಳಿತರೂ ಕಚೇರಿಗೆ ಬೀಗ ಜಡಿದು ಇಷ್ಟ ಬಂದ ಸಮಯದಲ್ಲಿ ತೆರೆದು ಸೌಲಭ್ಯ ನೀಡದೆ ಸಬೂಬು ಹೇಳುತ್ತಿರುವ ಉದ್ದೇಶ ಏನು ಎಂದು ರೈತರು ಪ್ರಶ್ನಿಸಿದ್ದಾರೆ.

           ಈಗಲಾದರೂ ಜಿಲ್ಲಾಧಿಕಾರಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಸಂಬಂಧÀ ಪಟ್ಟ ಆಯುಕ್ತರು ಗÀಮನ ಹರಿಸಿ ಏಜೆನ್ಸಿ ಬದಲಾವಣೆ ಮಾಡಿ, ತನಿಖೆÉ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದಿಂದ ಎಷ್ಟೆ ಯೋಜನೆಗಳು ಬಂದರೂ ದಲ್ಲಾಳಿಗಳ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಾಲ್ಲೂಕಿನ ರೈತ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link