ಹರಪನಹಳ್ಳಿ
ಸಾರ್ವತಿಕ ಲೋಕಸಭಾ ಚುನಾವಣೆ ನಿಮಿತ್ತ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹರಪನಹಳ್ಳಿ ಪಟ್ಟಣದ ಮಾರುಕಟ್ಟೆ ಮತ್ತು ಬಸ್ ನಿಲ್ದಾಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಪುರಸಭೆಯಿಂದ ಆರಂಭಗೊಂಡ ಜಾಗೃತಿ ಜಾಥಾ ಪಟ್ಟಣದ ಹಳೇ ಬಸ್ ನಿಲ್ದಾಣ, ಐಬಿ ವೃತ್ತ, ಸಿರಿಸಪ್ಪ ಇಜಾರಿ ವೃತ್ತ ಸೇರಿದಂತೆ ವಿವಿಧಡೆ ಸಂಚರಿಸಿತು. 18 ವರ್ಷ ಮೇಲ್ಪಟ್ಟವರು ಕಡ್ಡಾಯ ಮತದಾನ ಮಾಡುವುದು, ಮತದಾನದ ಮಹತ್ವ ಕುರಿತಂತೆ ನಾಗರಿಕರು, ಯುವಕರಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಬಿ.ಮಂಜುನಾಥ ಮತ್ತು ಸಿ.ಇ.ಒ ಲೋಕನಾಯ್ಕ ಹಾಗೂ ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








