ತಿಂಗಳಿಗೊಮ್ಮೆಯಾದರು ಭೇಟಿ ನೀಡಿ ಜನರಿಗೆ ಸ್ಪಂದಿಸಿ

ಕುಣಿಗಲ್ :

      ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕುಣಿಗಲ್ ತಾಲ್ಲೂಕಿಗೆ ಭೇಟಿ ನೀಡಿಯೇ ಇಲ್ಲ. ಒಂದೂ ಅರ್ಜಿಯು ಪೆಂಡಿಂಗ್ ಇಲ್ಲ ಎಂದ ಮಾತ್ರಕ್ಕೆ ಸಾಧನೆ ಮಾಡಿದ್ದೇವೆ ಎಂದಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಉದಾಸೀನತೆ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಜಿಲ್ಲಾಧಿಕಾರಿಗಳೇ ಮೂರು ತಿಂಗಳಿಗೊಮ್ಮೆಯಾದರು ಭೇಟಿ ನೀಡಿ ಜನರಿಗೆ ಸ್ಪಂದಿಸಿ ಎಂದು ಸಂಸದ ಡಿ.ಕೆ. ಸುರೇಶ್ ಜಿಲ್ಲಾಧಿಕಾರಿಗೆ ಸೂಚಿಸಿದರು.

       ಹುಲಿಯೂರುದುರ್ಗ ಹೋಬಳಿ ಕೇಂದ್ರಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಣಿಗಲ್ ಮತ್ತು ಪಾವಗಡ ತಾಲ್ಲೂಕಿನ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಹತ್ತಿರವಾಗಬೇಕು. ಜಿಲ್ಲಾಧಿಕಾರಿಗಳು ಸೇರಿದಂತೆ ಸಮಾಜಕಲ್ಯಾಣಾಧಿಕಾರಿಗಳು, ಜಂಟಿಕೃಷಿನಿರ್ದೇಶಕರು ಕುಣಿಗಲ್ ತಾಲ್ಲೂಕಿಗೆ ಭೇಟಿ ನೀಡಿಯೆ ಇಲ್ಲ. ಇನ್ನು ಅಭಿವೃದ್ಧಿ ಕೆಲಸಗಳು ಹೇಗೆ ಸಾಗುತ್ತವೆ. ಉದಾಸೀನತೆ ಮಾಡಬೇಡಿ, ಜಿಲ್ಲಾಧಿಕಾರಿಗಳೇ ಮೂರು ತಿಂಗಳಿಗೊಮ್ಮೆಯಾದರು ಭೇಟಿ ನೀಡಿ ಜನರಿಗೆ ಸ್ಪಂದಿಸಿ ಎಂದರು.

         ರೈತರು ನೀಡಿರುವ ಅರ್ಜಿಗಳನ್ನು ವಿಲೆ ಇಟ್ಟುಕೊಂಡು ಕಚೇರಿಗಳಲ್ಲಿ ಒಂದು ಅರ್ಜಿಯು ಪೆಂಡಿಂಗ್ ಇಲ್ಲ ಎಂದ ಮಾತ್ರಕ್ಕೆ ಸಾಧನೆ ಮಾಡಿದ್ದೇವೆ ಎಂದಲ್ಲ, ಮೊದಲು ರೈತರ ಅರ್ಜಿಗಳನ್ನ ವಿಲೆ ಇಡುವ ಪ್ರವೃತ್ತಿಗೆ ತಿಲಾಂಜಲಿ ನೀಡಿ, ಯಾವುದೋ ಕಾರಣ ನೀಡಿ ವಿಲೆ ಇಟ್ಟ ಮಾತ್ರಕ್ಕೆ ಸಮಸ್ಯೆ ಬಗೆ ಹರಿಯುವುದಿಲ್ಲ. ಅರ್ಜಿಗೆ ಪರಿಹಾರ ಸಿಗಬೇಕು, ರೈತರ ಸಮಸ್ಯೆಯು ಬಗೆಹರಿಯಬೇಕು. ಗ್ರಾಮೀಣ ಪ್ರದೇಶದ ರೈತರ ಮನೆ ಬಾಗಿಲಿಗೆ ತೆರಳಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಂಸದ ಡಿ.ಕೆ.ಸುರೇಶ್ ರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

       ಶಾಸಕ ಡಾ|| ರಂಗನಾಥ್ ಮಾತನಾಡಿ ಶಾಸಕನಾಗುವ ಮುನ್ನ ಸ್ಪಂದಿಸಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಇಂದು ಸ್ಪಂದಿಸುತ್ತಿಲ್ಲ, ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ. ನಮ್ಮ ಕಾರ್ಯಕರ್ತರು ಅಧಿಕಾರಿಗಳವರಲ್ಲಿ ನೀವು ಮೃದುಧೋರಣೆ ತೋರುತ್ತಿದ್ದೀರಿ. ಅದಕ್ಕಾಗಿ ಕೆಲಸ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಜನರಿಗೆ ಸ್ಪಂದಿಸಿ ಕೆಲಸ ಮಾಡದೆ ಇದೇ ಅಸಡ್ಡೆ ಮನೋಭಾವ ಮುಂದುವರೆದಲ್ಲಿ ನಿಮ್ಮಗಳ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸಬೇಕಾಗುತ್ತದೆ ಎಂದು ಪಿಡಿಓ, ಬೆಸ್ಕಾಂ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಕ್ರಮ ಮದ್ಯಮಾರಾಟ ತಡೆಗೆ ಅಬಕಾರಿ ಇಲಾಖೆ ಸ್ಪಂದಿಸುತ್ತಿಲ್ಲ, ಮಹಿಳೆಯರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಕಂದಾಯ ಇಲಾಖೆ ಸೇರಿದಂತ ಮೇಲುಸ್ತುವಾರಿ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ಸ್ಮಶಾನದ ಅಭಿವೃದ್ಧಿ ಹಾಗೂ ನಿವೇಶನಗಳಿಗಾಗಿ 1800 ಎಕರೆ ಪ್ರದೇಶವನ್ನು ಜಿಲ್ಲೆಯಲ್ಲಿ ಗುರುತಿಸಿದ್ದೇವೆ. ಆದಷ್ಟು ಬೇಗ ಪೆಡಿ ಮುಕ್ತವನ್ನಾಗಿ ಕುಣಿಗಲ್ ತಾಲ್ಲೂಕನ್ನು ಮಾಡುವ ಪ್ರಯತ್ನದಲ್ಲಿ ಇದ್ದೇವೆ ಎಂದರು.

          ಸರ್ಕಾರದ 28 ಇಲಾಖೆಗಳ ವತಿಯಿಂದ ಮಳಿಗೆ ತೆರೆದು ಅಲ್ಲಿ ಸಿಗುವ ಸವಲತ್ತು ತಿಳಿಸಿತ್ತು, ಸಾರ್ವಜನಿಕರ ದೂರುಗಳನ್ನು ಪಡೆಯಲಾಯಿತು. ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಆಲಿಸಿದರು. ಈ ಸಂದರ್ಭದಲ್ಲಿ ಜಿ.ಪ. ಸಿಇಓ ಕಣ್ಮಣಿಜಾಯ್ , ಉಪವಿಭಾಗಾಧಿಕಾರಿ ಶಿವಕುಮಾರ್, ತಹಸೀಲ್ದಾರ್ ಎಸ್.ನಾಗರಾಜ್, ಜಿ.ಪಂ ಸದಸ್ಯೆ ಅನುಸೂಯಮ್ಮ ವೈಕೆಆರ್ , ತಾ.ಪಂ ಅಧ್ಯಕ್ಷ ಹರೀಶ್‍ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು , ಪುರಸಭೆ ಅಧ್ಯಕ್ಷೆ ನಳಿನಾ ಭೈರಪ್ಪ, ಪುರಸಭಾ ಸದಸ್ಯ ಶಂಕರ್, ಮುಖಂಡರಾದ ಅನಿಲ್, ಚಂದ್ರು, ಗೋಪಿನಾಥ್, ಗ್ಯಾಸ್ ನರಸಿಂಹಮೂರ್ತಿ, ಆಲ್ಕೆರೆನಾರಾಯಣ್, ಇ.ಒ ಶಿವರಾಜಯ್ಯ, ಡಿ.ವೈ.ಎಸ್.ಪಿ ರಾಮಲಿಂಗೆಗೌಡ, ಸಿಪಿಐ ಅಶೋಕ್‍ಕುಮಾರ್ ಹಾಗೂ ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link