ಚಿತ್ರದುರ್ಗ;
ನರೇಂದ್ರ ಮೋದಿ ಅವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿ ಅಭಿವೃದ್ದಿಯತ್ತ ಸಾಗುತ್ತಿದ್ದಾರೆ. ಕಳೆದ ಐದು ವರ್ಷಗಳ ನಮ್ಮ ಸಾಧನೆಯನ್ನು ಜನರ ಮುಂದೆ ಮಂಡಿಸುವ ಮೂಲಕ ಮತ್ತೆ ಸರ್ಕಾರವನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆಇಲ್ಲಿನ ಮುರುಘಾಮಠದಲ್ಲಿ ಆಯೋಜಿಸಲಾಗಿದ್ದ ಚಿತ್ರದುರ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಶಕ್ತಿಕೇಂದ್ರ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಲೋಕಸಭಾ ಚುನಾವಣೆ ಇನ್ನೂ ಕೇವಲ 7 ವಾರ ಮಾತ್ರ ಇದೆ.
ಶಕ್ತಿಕೇಂದ್ರದ ಪ್ರಮುಖರ ಮೇಲೆ ಎರಡು ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಈ ಕಾರಣಕ್ಕಾಗಿ ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಅವರ ವಿಶ್ವಾಸಗಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯ ಎಲ್ಲಾ ಘಟಕಗಳನ್ನು ಬಲಪಡಿಸಿ ಅವರನ್ನು ಜೊತೆಗೆ ಇಟ್ಟುಕೊಂಡೇ ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರು ಬೇರೆ ಪಕ್ಷಗಳಲ್ಲಿ ಗುರ್ತಿಸಿಕೊಂಡಿವವರನ್ನೂ ಸಂಪರ್ಕಿಸಿ ಪಕ್ಷದತ್ತ ಕರೆತರುವ ಕೆಲಸವನ್ನೂ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಹೇಳಿದರು
ಮುಖ್ಯ ಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಾ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದ್ದಾರೆ. ಕೇಂದ್ರ 950 ಕೋಟಿ ಅನುದಾನವನ್ನು ಇದವರೆಗೂ ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ಕೆಂದ್ರ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಾರೆ ಇವರಿಗೆ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಕರ್ಮಚಾರಿಗಳ ಪಾದವ ತೊಳೆದು. ನಾವು ಎಲ್ಲಾರ ಸೇವಕ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಇಂತಹ ಪ್ರಧಾನಿ ಪಡೆದ ನಾವುಗಳೇ ಪುಣ್ಯವಂತರು. 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಸೂರ್ಯ ಚಂದ್ರರು ಇರುವಂತೆ ಸತ್ಯ ಎಂದರು.
ಭಾರತದ ಸೈನಿಕರಿಗೆ ಕೋಟಿ ಕೋಟಿ ನಮನ. ಮೋದಿಯವರ ತಂತ್ರಗಾರಿಕೆಯಿಂದ ಪಾಕಿಸ್ಥಾನ ನಲುಗಿ ಹೋಗಿದೆ. ಇದನ್ನು ಪ್ರಪಂಚದ ಎಲ್ಲಾ ರಾಷ್ಠಗಳು ಹೊಗಳಿದ್ದು, ಪಾಕಿಸ್ಥಾನಕ್ಕೆ ಯಾರ ನೆರವು ಸಿಗದಂತಾಗಿದೆ. ಇಂತಹ ಪ್ರಧಾನಿಯನ್ನು ನಾವುಗಳು ಎಲ್ಲೂ ಸಹ ನೋಡಿಲ್ಲಾ. ಯುವಕರು ಪ್ರಧಾನಿಯವರ ಸಾಧನೆಯನ್ನು ಕೊಂಡಾಡಿದ್ದಾರೆಂದು ಹೇಳಿದರು
ನಾವು ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆದ್ದು ಕೊಡಬೇಕಾಗಿದೆ ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಮುಂದಿನ ಚುನಾವಣೆಯಲ್ಲಿ ಗೆಲ್ಲುವು ನಿಶ್ಚಿತ. 22 ಸ್ಥಾನಗಳನ್ನು ಗೆಲ್ಲುತ್ತೇವೆ. ನಂತರ ಈ ಜೋಡಿ ಯಾವ ಹಳ್ಳಕ್ಕೆ ಬಿಳುತ್ತೋ ನೋಡೋಣ ಎಂದು ಸವಾಲ್ ಹಾಕಿದ ಯಡಿಯೂರಪ್ಪ ಪಾಕಿಸ್ತಾನದಿಂದ ನುಸುಳಿ ಬಂದ ಯುದ್ಧ ವಿಮಾನ ಹೊಡೆದುರುಳಿಸಿ ನಮ್ಮ ಸೈನಿಕರು ಪಾಠ ಕಲಿಸಿದ್ದಾರೆ. ಕಾಡು ನಾಶ ಅದರೆ ಅಲ್ಲಿಗೆ ಸಿಎಂ ಹೋಗೊಲ್ಲ. ಒಬ್ಬ ಉಸ್ತುವಾರಿ ಸಚಿವನೂ ಹೋಗೊಲ್ಲ.
ನಾಚಿಕೆ ಅಗಬೇಕು ಸರ್ಕಾರಕ್ಕೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ ರಾಜ್ಯದ ಖಜಾನೆ ಲೂಟಿ ಹಿಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಕುಮಾರಸ್ವಾಮಿ ಕಳೆದ 7 ತಿಂಗಳಿನಿಂದ ರೈತರ ಸಾಲ ಮನ್ನಾ ಮಾಡುತ್ತೆವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಮಾಡಿಲ್ಲ. ಕೇಂದ್ರದಿಂದ 900 ಕೋಟಿ ಹಣ ಬಂದಿದೆ ಅದನ್ನು ಖರ್ಚು ಮಾಡಿಲ್ಲ ಎಂದು ಆರೋಪಿಸಿದರು. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಂ.ಚಂದ್ರಪ್ಪ, ಜಿ.ಹೆಚ್.ತಿಪ್ಪಾರೆಡ್ಡಿ, ಮುಖಂಡರಾದ ಜಿ.ಟಿ.ನರೇಂದ್ರನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್, ಶಿವಯೋಗಿಸ್ವಾಮಿ, ದಗ್ಗೆ ಶಿವಪ್ರಕಾಶ್, ಮಾಜಿ ಸಚಿವ ಮಾನಪ್ಪ ವಜ್ಜಲ್ ಇನ್ನಿತರರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ