ಚಿತ್ರದುರ್ಗ;
ನಗರದಲ್ಲಿ ಮಂಜೂರಾತಿ ದೊರೆತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಭಾನುವಾರ ಚಾಲನೆ ನೀಡಿದರು ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದ್ದ ಕಾರಣ ಭಾನುವಾರದಂದು ಸಂಸದರು ತಮ್ಮ ಅನುದಾನದಲ್ಲಿ ಮಂಜೂರಾತಿ ಪಡೆದಿರುವ ಕುಡಿಯುವ ನೀರಿನ ಘಟಕ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು
ದವಳಗಿರಿ ಬಡಾವಣೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದ್ದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ಮುಖಂಡರಾದ ಮರುಳಾರಾಧ್ಯ, ಶ್ರೀನಿವಾಸ್‍ಇನ್ನಿತರರು ಹಾಜರಿದ್ದರು ಬಳಿಕ ಐಯುಡಿಪಿ ಬಡಾವಣೆ ,ಕೆಳಗೋಟೆ ಇನ್ನಿತರೆ ಕಡೆ ಸುಮಾರು 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಯಿತು ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇನ್ನಿತರೆ ಮುಖಂಡರು, ನಗರಭೆ ಸದಸ್ಯರುಗಳು ಹಾಜರಿದ್ದರು ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ್ಕೂ ಭಾನುವಾರದಂದು ಚಾಲನೆ ನೀಡಲಾಯಿತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
