
ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್ ತಿನ್ನಲು ಮುಂದಾದಾಗ ಅದರಲ್ಲಿ ಮೊಳೆ ಕಂಡುಬಂದಿದೆ. ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡ ಜಿಲ್ಲಾಧಿಕಾರಿ ಗಾಬರಿಯಾದ ಅವರು, ಇದನ್ನು ಗಂಭೀರವಾಗಿ ಪರಿಗಣಿಸಿ ಬಿಸ್ಕೆಟ್ ತಂದ ಬೇಕರಿಯ ಬಗ್ಗೆ ಸಿಬ್ಬಂದಿ ಬಳಿ ವಿಚಾರಿಸಿದಾಗ, ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕರಿಯಲ್ಲಿ ತಂದಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿಯವರು ಬೇಕರಿಯನ್ನು ಮುಚ್ಚುವಂತೆ ಆದೇಶ ಹೊರಡಿಸಿ, ಬೇಕರಿಗೆ ಬೀಗ ಹಾಕಿಸಿದ್ದಾರೆ.
