ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಪವಾಡ ಬಯಲು ಕಾರ್ಯಕ್ರಮ

ಹೊಳಲ್ಕೆರೆ:

         ದೃಷ್ಯ ಮಾಧ್ಯಮಗಳಲ್ಲಿ ಪವಾಡ, ಕಟ್ಟುಕತೆಗಳನ್ನು ವೈಭವೀಕರಿಸಿ ನೋಡುಗರನ್ನು ಮರಳು ಮಾಡುತ್ತಾ, ವ್ಯವಹಾರ ಜ್ಞಾನವನ್ನು ಅಭಿವೃಧ್ದಿಗೊಳಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ಶ್ರೀಶ್ರೀ ಡಾ.ಪಂ.ಡಿತಾರಾಧ್ಯ ಸ್ವಾಮಿಗಳು ಆಶಿರ್ವಚನ ನೀಡಿದರು.

        ಪಟ್ಟಣದ ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಸುನಂದಮ್ಮ ಶಂಭುಲಿಂಗಪ್ಪ ಮತ್ತು ಮಕ್ಕಳು, ರೋಟರಿಕ್ಲಬ್ ಮತ್ತು ಇನ್ನರ್‍ವ್ಹೀಲ್  ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಂಭುಲಿಂಗಪ್ಪ ಪುಣ್ಯ ಸ್ಮರಣೆ ಹಾಗೂ ಪವಾಡ ಬಯಲು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

      ಎಲ್ಲವು ಕೂಡ ವಿಜ್ಞಾನ ಪೂರಕವಾಗಿಯೇ ಇರುವುದರಿಂದ ವಶೀಕರಣ ಸೇರಿದಂತೆ ಇತರೆ ಮೌಢ್ಯ ಕಾರ್ಯಕ್ರಮಗಳು ಸತ್ಯಕ್ಕೆ ದೂರವಾಗಿವೆ. ತಮ್ಮ ಮನೆಗಳ ಬಳಿ ಶಾಸ್ತ್ರ ಹೇಳುವ ನೆಪದಲ್ಲಿ ಬರುವ ವ್ಯಕ್ತಿಗಳ ಜತೆ ಅತ್ಯಂತ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದರು.

        ವಿದ್ಯಾವಂತರ ಸಂಖ್ಯೆ ಅಧಿಕಗೊಳ್ಳುತ್ತಿದ್ದರೂ ಕೂಡ ಪ್ರಜ್ಞಾವಂತಿಕೆ ಕುಂಠಿತಗೊಳ್ಳುತ್ತಿದೆ. ಇದರಿಂದ ಮುಗ್ಧ ಜನರಲ್ಲಿ ಮೌಢ್ಯತೆಯ ಬೀಜವನ್ನು ಬಿತ್ತಿ ಹಣ ಗಳಿಕೆಯ ತಂತ್ರಗಾರಿಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಮಕ್ಕಳಿಂದ ಮಾತ್ರ ಸಾಧ್ಯ ಎಂದರು.

        12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ್ದು, ಯಾವುದು ಮೌಢ್ಯ, ಶಾಸ್ತ್ರ ಇಲ್ಲ. ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೆ. ತಂತ್ರಜ್ಞಾನದ ಯುಗದಲ್ಲಿ ಇಂದಿನ ಮಕ್ಕಳು ಮೂಢ ನಂಬಿಕೆ ಹಾಗೂ ಟಿವಿ ಮೊಬೈಲ್‍ಗಳ ಹಿಂದೆ ಬಿದ್ದು ಅವರ ಹೆತ್ತವರನ್ನು ಮರೆಯುತ್ತಾರೆ.

          ಹುಲಿಕಲ್ ನಟರಾಜ್ ಮಗಳು ತೇಜಸ್ವಿನಿ ಪವಾಡ ಬಯಲು ಬಗ್ಗೆ ಮಾತನಾಡಿ ದೇವರ ಹೆಸರಿನಲ್ಲಿ ಭ್ರಷ್ಟಚಾರ, ಮೋಸ ವಂಚನೆ ನಡೆದಿದ್ದು ಬಡವರು ಬಡವರಾಗಿ ಬದುಕುತ್ತಿದ್ದಾರೆ. ಅವುಗಳಿಂದ ಪ್ರತಿಯೊಬ್ಬರು ಹೊರಬರಬೇಕಿದೆ ಎಂದು ತಿಳಿಸಿ ಪ್ರಾಯೋಗಿಕವಾಗಿ ಕೆಲವು ಪವಾಡಗಳನ್ನು ತೋರಿಸಿದರು.

        ಸಂಸದ ಬಿ,ಎನ್.ಚಂದ್ರಪ್ಪ, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ .ಕಾಟೇಹಳ್ಳಿ ಶಿವಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಹನುಮಲಿ ಶಣ್ಮುಖಪ್ಪ, ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ನಿವೃತ್ತನೌಕರರ ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ ಬಿಇಓ ಜಗದೀಶ್ವರ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link