ಬೆಂಗಳೂರು
ರಾಜ್ಯದ ಬೆಂಗಳೂರು, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ದಾವಣಗೆರೆ ನಗರಗಳಲ್ಲಿ ವಾಯು ಮಾಲೀನ್ಯ ತೀವ್ರಗೊಂಡಿದ್ದು, ವಾಹನಗಳ ಬಳಕೆಯಿಂದ ಶೇ 40 ರಷ್ಟು ಮಾಲೀನ್ಯ ಉಂಟಾಗುತ್ತಿದೆ ಎಂದು ಗ್ರೀನ್‍ಪೀಸ್ ವರದಿ ತಿಳಿಸಿದೆ.
ಈ ನಗರಗಳಲ್ಲಿ ವಾಯುಮಾಲೀನ್ಯ ಪ್ರಮಾಣ ಅಧಿಕವಾಗಿದ್ದು, ಅನಗತ್ಯವಾಗಿ ವಾಹನ ಬಳಕೆ ಮೇಲೆ ಕಡಿವಾಣ ಹಾಕುವಂತೆ ಸಲಹೆ ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ಸಮೂಹ ಸಾರಿಗೆ ಬಳಕೆ ಮಾಡಿದರೆ ಸಮಸ್ಯೆ ತಗ್ಗಲಿದೆ ಎಂದು ಹೇಳಿದೆ.
ಮಾಲೀನ್ಯ ನಿಯಂತ್ರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗಿಡ ನೆಡುವುದು ಸಹ ಅಗತ್ಯವಾಗಿದ್ದು, ನಗರಾಡಳಿತ ಈ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು. ಪರಿಸರ ಸಂರಕ್ಷಣೆ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ