ಪ್ರೇಮಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ

ಚಿತ್ರದುರ್ಗ

    ಭಾರತೀಯ ಸಂಸ್ಕತಿಗೆ ಅಪಚಾರ ಮಾಡುವ ಪ್ರೇಮಿಗಳ ದಿನಾಚರಣೆ ವಿರೋಧಿಸಿ ಪ್ರೇಮಿಗಳ ಭಾವಚಿತ್ರ ದಹಿಸುವುದರ ಮೂಲಕ ಹಿಂದೂ ಯುವಸೇನೆ ವತಿಯಿಂದ ನಗರದ ಆನೆಬಾಗಿಲು ಬಳಿ ಪ್ರತಿಭಟನೆ ನಡೆಸಿದರು.

     ಇಂದಿನ ಯುವಕ, ಯುವತಿಯರ ಫೆಬ್ರವರಿ-14 ರಂದು ವ್ಯಾಲೆಂಟೆನ್ಸ್ ಡೇ ಆಚರಣೆ ಸಲುವಾಗಿ ಆಯೋಜಕರು ಏರ್ಪಡಿಸಿದ್ದ ಸ್ಥಳಗಳಲ್ಲಿ ಸೇರಿ ಅಸಂಬದ್ಧವಾಗಿ ವರ್ತಿಸುವ ದಿನವನ್ನು ನಾವು ವಿರೋಧಿಸುತ್ತೇವೆ. ಆದರೆ ಯುವ ಪ್ರೇಮಿಗಳನ್ನಲ್ಲ. ಆದ್ದರಿಂದ ಪ್ರೇಮಿಗಳು ಪ್ರೇಮಿಸುವವರನ್ನು ಪ್ರೇಮಿಗಳ ದಿನದಂದು ಮದುವೆಯಾಗಿ ಪ್ರೇಮಿಗಳ ಮದುವೆಯ ದಿನವನ್ನಾಗಿ ಆಚರಿಸಬಹುದು, ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳ ದಿನವನ್ನು ಬೆಂಬಲಿಸಿ ಹಲವಾರು ಸಂಘಟನೆಗಳು ರಾಜಕೀಯ ಪ್ರೇರಿತಗೊಂಡು ಹೇಳಿಕೆಗಳನ್ನು ನೀಡುತ್ತಿದ್ದು, ಅವರುಗಳು ಫೆಬ್ರವರಿ-14 ರಂದು ವಿದೇಶಗಳಲ್ಲಿ ಕಾಂಡೋಮ್‍ಗಳನ್ನು ಪ್ರೇಮಿಗಳಿಗೆ ವಿತರಿಸುವಂತೆ ಭಾರತದಲ್ಲೂ ಸಹ ವಿತರಿಸುವ ದಿನಗಳು ದೂರವೇನಿಲ್ಲ. ಇಂತಹ ಸಂಸ್ಕತಿ ನಮಗೆ ಬೇಕೇ ಎಂದು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ.

      ಪ್ರೇಮಿಸುವ ಪ್ರೇಮಿಗಳು ಪ್ರತಿನಿತ್ಯ ನಿಮ್ಮ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಬಂಧು ಬಳಗವನ್ನು ಪ್ರೀತಿಸಿ ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರನನ್ನು ಪ್ರತಿನಿತ್ಯ ಪ್ರೇಮಿಸಿ ವರ್ಷದಲ್ಲಿ ಒಂದು ದಿನ ಪ್ರೇಮ ಮಾಡುವುದು ವಿದೇಶಿ ಸಂಸ್ಕತಿ, ಪ್ರತಿನಿತ್ಯ ನಾಲ್ಕು ಗೋಡೆಗಳ ಮಧ್ಯೆ ಪ್ರೇಮಿಸುವುದು ಭಾರತೀಯ ಸಂಸ್ಕತಿ. ಈ ಕಾರಣಕ್ಕಾಗಿ ಪ್ರೇಮಿಗಳ ದಿನವನ್ನು ವಿರೋಧಿಸುತ್ತೇವೆ ಎಂದು ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ನಾಮನಿರ್ದೇಶನ ಮಾಜಿ ಸದಸ್ಯ ಎನ್.ಇ.ನಾಗರಾಜ್ ಹೇಳಿದರು ಪ್ರತಿಭಟನೆಯಲ್ಲಿ ಹಿಂದೂ ಯುವಸೇನೆ ಕಾರ್ಯಕರ್ತರಾದ ಎ.ಸೀತಾರಾಮ್, ಈ.ಬಸವರಾಜು, ಜಯಣ್ಣ, ಎನ್.ಕೀರ್ತಿ, ಬಿ.ಮಾರುತಿ, ಕೆ.ಮಂಜುನಾಥ್, ಇನ್ನು ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link