ಒಣಗಿದ ಬೆಳೆಯನ್ನು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಾಕಿ ಪ್ರತಿಭಟನೆ

ಚಳ್ಳಕೆರೆ

           ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಬಳಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಸ್ಟಾಂಜ್ ಐರನ್ ಲಿಮಿಟೆಡ್ ಕಂಪನಿಯಿಂದ ಹೊರ ಬರುವ ಕೊಳಚೆ ನೀರು ಅ ಭಾಗದ ಬಹುತೇಕ ಎಲ್ಲಾ ಜಮೀನುಗಳ ಬೆಳೆಯನ್ನು ನಾಶಪಡಿಸುತ್ತಿದ್ದು, ನೂರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

           ಈ ಹಿನ್ನೆಲೆಯಲ್ಲಿ ಗ್ರಾಮದ ಹಲವಾರು ರೈತರು ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್‍ಗೆ ಮನವಿ ನೀಡಿ ಐರನ್ ಲಿಮಿಟೆಡ್ ಕಂಪನಿಯಿಂದ ಬರುವ ಕಲುಷಿತ ನೀರು, ಗಾಳಿ, ಧೂಳಿಗೆ ಕೆಲವು ಜಮೀನುಗಳ ಬೆಳೆಯಾಗದೇ ಬೆಳೆಯೂ ಅಲ್ಲಲ್ಲೇ ಒಣಗುತ್ತಿದೆ. ಕಾಳುಗಳಲ್ಲಿ ವಿಷ ಮಿಶ್ರಿತ ಅಂಶ ವ್ಯಕ್ತವಾಗುತ್ತಿದ್ದು, ಇವುಗಳನ್ನು ಸೇವಿಸಿದರೆ ಅನಾರೋಗ್ಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಚಿಂತಾಕ್ರಾಂತರಾಗಿದ್ದು, ಕೂಡಲೇ ಕಲುಷಿತ ನೀರನ್ನು ಬಿಡದಂತೆ ಕಂಪನಿ ವ್ಯವಸ್ಥಾಪಕರಿಗೆ ತಾಲ್ಲೂಕು ಆಡಳಿತ ಸೂಚನೆ ನೀಡಬೇಕಿದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೂ, ಬಬ್ಬೂರು ಕೃಷಿ ಫಾರಂನ ಅಧಿಕಾರಿಗಳಿಗೂ, ಜಂಟಿ ಕೃಷಿ ನಿರ್ದೇಶಕರಿಗೂ, ತಹಶೀಲ್ದಾರ್‍ರವರು ಮನವಿ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ಧಾರೆ.

           ಇದೇ ಸಂದರ್ಭದಲ್ಲಿ ರೈತರಾದ ಎಚ್.ಈಶ್ವರಪ್ಪ, ಆರ್.ಹನುಮಂತರಾಯ, ಎಚ್.ಆನಂದಪ್ಪ, ರಂಗನಾಥ, ಗೌರಮ್ಮ, ಎಚ್.ಎಸ್.ನಿಜಲಿಂಗಪ್ಪ, ಎಂ.ಆರ್.ರಂಗಸ್ವಾಮಿ ಮುಂತಾದವರು ಮಾತನಾಡಿ, ಸದರಿ ಕಲುಷಿತ ನೀರಿನಿಂದ ಒಣಗಿರುವ ಕಡ್ಲೆಗಿಡ, ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳನ್ನು ತಂದು ತಾಲ್ಲೂಕು ಕಚೇರಿ ಎದುರೇ ಹಾಕಿ ಸಾರ್ವಜನಿಕರ ಗಮನ ಸೆಳೆದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಪ್ರಸ್ತುತ ರೈತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸ್ಥಳಕ್ಕೆ ಕಂದಾಯಾಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link