ಕುಣಿಗಲ್
ಪಲ್ಸ್ ಪೋಲಿಯೊ ಲಸಿಕೆಯನ್ನ ತಪ್ಪದೆ ಐದು ವರ್ಷದ ಒಳಗಿನ ಮಕ್ಕಳಿಗೆ ಹಾಕಿಸುವ ಮೂಲಕ ದೇಶದಲ್ಲಿ ಪಲ್ಸ್ ಪೋಲಿಯೊ ಮುಕ್ತ ಮಾಡಬೇಕಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನ ಮಕ್ಕಳಿಗೆ ಲಸಿಕೆ ಹನಿಯನ್ನು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ತಾಲ್ಲೂಕಿನಾದ್ಯಂತ 104 ಲಸಿಕಾ ಕೇಂದ್ರಗಳನ್ನ ಆರಂಭಿಸಿದ್ದು, 24 ವೈದ್ಯರು ಸೇರಿದಂತೆ 455 ಲಸಿಕಾ ಸಿಬ್ಬಂದಿಯೂ 59,278 ಮಕ್ಕಳಿಗೆ ಲಸಿಕಾ ಹಾಕುವ ಗುರಿ ಹೊಂದಿದ್ದು, ಇದರ ಮೇಲ್ವಿಚಾರಣೆಯನ್ನ 25 ಅಧಿಕಾರಿಗಳು ನೋಡುತ್ತಿದ್ದು, 1995ರಲ್ಲಿ ಆರಂಭಗೊಂಡ ಪಲ್ಸ್ ಪೋಲಿಯೊ ಮುಕ್ತ ದೇಶವನ್ನಾಗಿಸಲು ಹೊರಟಂತಹ ನಾವುಗಳು 2015ರಲ್ಲಿ ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಘೋಷಿಸಿದ್ದೇವೆ.
ಪೋಷಕರು , ತಂದೆ-ತಾಯಂದಿರು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕಾ ಹನಿಯನ್ನ ತಪ್ಪದೆ ಹಾಕಿಸುವ ಮೂಲಕ ಮಕ್ಕಳನ್ನ ಪೋಲಿಯೊ ಮುಕ್ತ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕರಿಸಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ನಳಿನಾ ಭೈರಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಗದೀಶ್,ಪುರಸಭಾ ಸದಸ್ಯ ರಂಗಸ್ವಾಮಿ, ನೋಡಲ್ ಅಧಿಕಾರಿ ವೆಂಕಟಲಕ್ಷ್ಮಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
