ಗುಂಡಿ ಮತ್ತು ಧೂಳಿನಿಂದ ತುಂಬಿದ ರಾಜ್ಯ ಹೆದ್ದಾರಿ 45ರ ಗೋವಿನಪುರ ರಸ್ತೆ

ತಿಪಟೂರು:

     ನಗರದ ಪ್ರತಿಷ್ಠಿತ ಬಡಾವಣೆಗಳಲ್ಲ್ಲೊಂದಾದ ಗೋವಿನಪುರ ಶಾಂತಿಯಿಂದ ಕೂಡಿದ ಪ್ರದೇಶವಾಗಿದೆ. ಆದರೆ ಇಲ್ಲಿ ಹಾದೂ ಹೋಗಿರುವ ರಾಜ್ಯಹೆದ್ದಾರಿ 45ಯು ಸಾಕಷ್ಟು ಗುಂಡಿಗಳಿಂದ ಕೂಡಿದ್ದು ಹೆಚ್ಚಿನ ದೂಳಿನಿಂದ ವಾಹನಸವಾರರು ಗುಂಡಿತಪ್ಪಿಸಲು ಹೋಗಿ ಗುಂಡಿಗೆಬೀಳುತ್ತಿದ್ದಾರೆ. 

         ಈ ಹೆದ್ದಾರಿಯು ಹೊಸದುರ್ಗ, ಚಿತ್ರದುರ್ಗ, ಹಿರಿಯೂರಿ, ಬಳ್ಳಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಮತ್ತು ಶಾಲಾವಹಾನಗಳು ಸಂಚರಿಸುತ್ತಿದ್ದು ಕೆಲವು ವಾಹನಗಳು ಅತೀಯಾದ ವೇಗದಿಂದ ಬರುತ್ತಿದ್ದು ಅವುಗಳನ್ನು ಈ ಗುಂಡಿಗಳಿಂದ ರಕ್ಷಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ.

      ವಾಹನಗಳ ರಸಭಸಕ್ಕೆ ಧೂಳಿನಕಣಗಳು ಹೆಚ್ಚಾಗಿ ಹಾರಾಡುವುದರಿಂದ ರಸ್ತೆಯೇ ಕಾಣದಂತಾಗುತ್ತದೆ ಮತ್ತು ಸ್ಥಳೀಯರಿಗೆ ಅನೇಕ ಖಾಯಿಲೆಗಳು ಹರಡುವ ಸಂಭವವಿದೆ. ಇದರ ಬಗ್ಗೆ ನಾವು ಸಂಬಂಧಪಟ್ಟ ಇಲಾಖೆಯವರಿಗೆ, ಜನಪ್ರತಿನಿಧಿಗಳಿಗೆ ಈಗಾಗಲೇ ಸಾಕಷ್ಟುಬಾರಿ ದೂರು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಈಗಲಾದರೂ ಸೂಕ್ತಕ್ರಮವಹಿಸಿ ರಸ್ತೆಯನ್ನು ಕೂಡಲೇ ದುರಸ್ತಿಗೊಳಿದಿದ್ದರೆ ರಸ್ತೆತಡೆಯುವುದಾಗಿ ಸ್ಥಳೀಯರಾದ ಕುಮಾರ್, ಮಣಿಕೆಗೌಡರು, ಯೋಗೀಶ್, ಪವನ್, ರವಿ, ವಿಶ್ವನಾಥ್, ಉಮೇಶ್ ಇನ್ನುಮುಂತಾದವರು ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link