ಧೂಮಪಾನಿಗೆಳಿಗೆ ಆಶ್ರಯ ನೀಡುತ್ತಿರುವ ಪೆಟ್ಟಿಗೆ ಅಂಗಡಿಗಳು…!!

ತಿಪಟೂರು :

     ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಎನ್.ಹೆಚ್ 206ರ ಅಕ್ಕಪಕ್ಕದಲ್ಲಿ ಪ್ರತಿಷ್ಠಿತ ಶಾಲಾ
ಕಾಲೇಜುಗಳು, ಸರ್ಕಾರಿ ಕಛೇರಿಗಳು, ಸಾರ್ವಜನಿಕ ಆಸ್ಪತ್ರೆ ಇದ್ದು ನಗರಕ್ಕೆ ಒಂದು ಭೂಷಣದಂತಿದ್ದು ಇದಕ್ಕೆ ಗುಲಗಂಜಿಯ ಕಪ್ಪುಚುಕ್ಕೆಯಂತೆ ಕಟ್ಟಡದ ಅಕ್ಕ-ಪಕ್ಕದಲ್ಲಿ ತಲೆಯೆತ್ತಿರುವ ಪೆಟ್ಟಿಗೆ ಅಂಗಡಿಗಳು ನಗರದ ಸೌಂದರ್ಯವನ್ನು ಹಾಳುಮಾಡುತ್ತಿವೆ.

     ಕಲ್ಪತರು ನಗರವು ಜಿಲ್ಲಾ ಕೇಂದ್ರವಾಗುವತ್ತ ಮುನ್ನುಗುತ್ತಿದ್ದು ಸಕಲ ರೀತಿಯಲ್ಲೂ ತಯಾರಿದ್ದು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ. ಇಲ್ಲಿಗೆ ಶಿಕ್ಷಣವನ್ನರಸಿ ಸಾವಿರಾರು ಜನರು ದಿನನಿತ್ಯ ತಮ್ಮ ನಿತ್ಯದ ಕೆಲಸಗಳಿಗಾಗಿ ನಗರಕ್ಕೆ ಆಗಮಿಸುತ್ತಿರುತ್ತಾರೆ ಇವೆಲ್ಲರೂ ಅವಸರದಲ್ಲಿದ್ದು ಎಲ್ಲಿ ಊಟ ತಿಂಡಿ ಸಿಗುತ್ತದೋ ಅದನ್ನು ಗಮನಿಸದೆ ಸಿಕ್ಕಸಿಕ್ಕಲ್ಲಿ ಇರುವ ಪೆಟ್ಟಿಗೆ ಅಂಗಡಿಗಳಲ್ಲಿ ತಿಂದು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.

       ನಗರಸಭೆಯ ದಿವ್ಯ ನಿರ್ಲಕ್ಷವೋ ಏನೋ ಎಂಬಂತೆ ನಗರಸಭೆಗೆ ಆದಾಯ ತರುತ್ತಿರುವ ವ್ಯಾಪಾರವು ಇಂದು ಸೋತು ಸೊರಗುವ ಹಂತವನ್ನು ತಲುಪಿದ್ದು ನಗರದಲ್ಲಿ ಅವ್ಯಾಹತವಾಗಿ ಯಾವುದೇ ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದು ಕೆಲವರಿಗೆ ಜೀವನಾಧಾರವಾಗಿದೆ. ಆದರೆ ಇದನ್ನೇ ಗುರಿಯಾಗಿಟ್ಟುಕೊಂಡು ಟೀಸ್ಟಾಲ್‍ಗಳನ್ನು ಮಾಡಿಕೊಂಡು ಪಕ್ಕದಲ್ಲೇ ಶೆಡ್ ನಿರ್ಮಿಸಿಕೊಂಡು ದೂಮಪಾನಿಗಳಿಗೆ ಆಶ್ರಯವನ್ನು ನೀಡುತ್ತಿದ್ದಾರೆ.

        ಸರ್ಕಾರದ ಆದೇಶದಂತೆ ಶಾಲಾ ಕಾಲೇಜಿನ ನೂರು ಮೀಟರ್ ಅಂತರದಲ್ಲಿ ಯಾವುದೇ ತರಹದ ಗುಟ್ಕಾ, ಬಿ.ಡಿ.ಸಿಗರೇಟ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಇತ್ತೀಚೆಗೆ ಬಾರ್‍ಗಳಲ್ಲೂ ದೂಮಪಾನ ನಿಷೇದದ ಮಾತು ಕೇಳಿಬರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಈ ಪೆಟ್ಟಿಗೆ ಅಂಗಡಿಯವರು ಮೇಲ್ನೋಟಕ್ಕೆ ಮಾತ್ರ ಕಾಫಿ/ಟೀ ಅಂಗಡಿಎಂದು ಮಾಡಿಕೊಂಡು ಪಕ್ಕದಲ್ಲೇ ಟಾರ್‍ಪಾಲ್‍ನಿಂದ ಮರೆಮಾಡಿ ಕುಳಿತುಕೊಳ್ಳುವ ವ್ಯವಸ್ಥೆಯನ್ನುಮಾಡಿ ದೂಮಪಾನಿಗಳಿಗೆ ಆಶ್ರಯತಾಣವಾಗಿ ಮಾಡಿಕೊಟ್ಟಿದ್ದಾರೆ.

       ಈ ಆಶ್ರಯಮಾಡಿಕೊಂಡ ಅಪ್ರಾಪ್ತವಯಸ್ಕರು ಮಾದಕವಸ್ತುಗಳಿಗೆ ದಾಸರಾಗುವುದಕ್ಕೆ ದಾರಿಮಾಡಿಕೊಟ್ಟು ಯುವಜನತೆಯನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಇನ್ನು ಬೆಳಗ್ಗೆ-ಸಂಜೆ ನಗರದ ಐ.ಬಿ.ಸರ್ಕಲ್‍ನಲ್ಲಿ ಜನದಂದಣಿ ಹೆಚ್ಚಾಗಿದ್ದು ಇಲ್ಲಿಗೆ ಬರುವ ಪ್ರಯಾಣಿಕರು ನಿಲ್ಲಲ್ಲು ಸ್ಥಳ ವಿಲ್ಲದಂತೆ ಪರದಾಡುವಂತಾಗಿದೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಬಿ.ಆರ್.ಸಿ ಕಛೇರಿಯ ಕಾಂಪೌಂಡ್ ಗೋಡೆಯನ್ನು ಪೆಟ್ಟಿಗೆ ಅಂಗಡಿಗಳು ಆಶ್ರಯಿಸಿಕೊಂಡಿದ್ದು ಇವುಗಳ ಮುಂದೆ ನಿಲ್ಲಿಸುವ ವಾಹನಗಳು ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು ಅಪಘಾತಗಳು ಹೆಚ್ಚಾಗುತ್ತಿವೆ.

     ಇದೇ ರೀತಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಬಾಗ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕಿರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಆರ್.ಟಿ.ಓ ಕಛೇರಿ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಕೋಡಿ ಸರ್ಕಲ್, ಹಾಸನಸರ್ಕಲ್, ರೈಲ್ವೇಗೇಟ್ ಹತ್ತಿರ, ಇಲ್ಲಿ ಸುಮಾರು 600 ರಿಂದ 700 ಪೆಟ್ಟಿಗೆ ಅಂಗಡಿಗಳು ಹೋಟೆಲ್‍ಗಳಿದ್ದು ಇವುಗಳು ನಗರಸಭೆಯ ಪರಿಸರ ಮತ್ತು ಆರೋಗ್ಯ ಪ್ರಮಾಣ ಮತ್ತು ಅನುಮತಿ ಪಡೆಯದೇ ಶುಚಿತ್ವ ಇಲ್ಲದ ಆಹಾರಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದರೆ. ಕಲುಷಿತ ನೀರನ್ನು ನೀಡುವುದಲ್ಲದೇ ಅಲ್ಲೆ ಪಕ್ಕಕ್ಕೆ ಬಿಸಾಡುವ ತ್ಯಾಜ್ಯದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಲವಾರು ಆಹಾರವನ್ನು ನೀಡುತ್ತಿವೆ ಮುಂದೆ ಅನಾಹುತಗಳಾಗುವ ಮೊದಲೇ ಇವುಗಳನ್ನು ಸರಿಪಡಿಸುವ ಹೊಣೆ ನಗರಸಭೆ ಮತ್ತು ಆರೋಗ್ಯ ಇಲಾಖೆಯ ಮೇಲೆ ಇದೆ.

      ಕೆಲವರು ಎರಡು ಮೂರು ಅಂಗಡಿಗಳನ್ನು ಮಾಡಿಕೊಂಡು ಅವುಗಳನ್ನು ಬಾಡಿಗೆ ಕೊಟ್ಟಿರುತ್ತಾರೆಂಬ ವದಂತಿಇದೆ. ಇನ್ನೂ ಕೆಲವು ಪ್ರಭಾವಿ ವ್ಯಕ್ತಿಗಳ ಕೃಪಾಕಟಾಕ್ಷದಿಂದ ಅಂಗಡಿಗಳನ್ನು ನಿರ್ಮಿಸಿಕೊಮಡು ಅದಕ್ಕೆ ವಿದ್ಯುತ್ ಸೌಕರ್ಯವನ್ನು ಪಡೆದುಕೊಡಿರುತ್ತಾರೆ.

       ಜಿಲ್ಲಾ ಆಹಾರ ಇಲಾಖೆಯ ಪರೀಕ್ಷಕರು ಇದುವರೆಗೂ ನಗರದ ಒಂದೇ ಒಂದು ಹೋಟೆಲ್, ಬೇಕರಿಗಳನ್ನಾಗಲಿ, ಬೀದಿಬದಿ ವ್ಯಾಪಾರಿಗಳ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿಲ್ಲ.

ಶಶಿಕುಮಾರ್ ಉಪನ್ಯಾಸಕರು :

        ಈ ರೀತಿಯ ಪರಿಸರವು ಸೃಷ್ಠಿಯಗಾಗಿರುವುದು ವಿಪರ್ಯಾಸ ಇದನ್ನು ಶೀಘ್ರವಾಗಿ ಸಂಬಂದಪಟ್ಟ ಇಲಾಖೆಯವರು ಸರಿಪಡಿಸಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳು ಮಾದಕವ್ಯಸನಿಗುತ್ತಾರೆ ಮತ್ತೆ ಇವುಗಳು ಅನೈತಿಕ ಚಟುವಟಿಕೆಗೆ ದಾರಿಮಾಡಿಕೊಡುತ್ತಿವೆ.

       ಪೋಲೀಸರು ಮತ್ತು ಮಾದಕದಳ ನಿಗ್ರಹದವರು ಯಾವಗಲೋ ಒಂದುಬಾರಿ ದಾಳಿಗೆಬರುತ್ತಾರೆ ಆದಾದ ನಂತರ ಬರುವುದಿಲ್ಲ ಇವರು ಮತ್ತೆ ಯತಾವತ್ಥಾಗಿ ಮಾರಾಟಮಾಡುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link