ಹಿರಿಯೂರು :
ರಾಜ್ಯದ ಟೀಂಮೋದಿ ತಂಡದಿಂದ ನಡೆಯುತ್ತಿರುವ ಮೋದಿ ರಥಯಾತ್ರೆಯು ಹಿರಿಯೂರಿಗೆ ಮಂಗಳವಾರ ಆಗಮಿಸಿತು.
ತಾಲ್ಲೂಕಿನ ಲಕ್ಕವ್ವನಹಳ್ಳಿ, ಕೂನಿಕೆರೆ, ದೊಡ್ಡಘಟ್ಟದಲ್ಲಿ ಸಂಚರಿಸಿ ಬೆಳಿಗ್ಗೆ 10ಗಂಟೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ ಯುವಕರು ಬರಮಾಡಿಕೊಂಡರು.
ನರೇಂದ್ರಮೋದಿ ಸಾಧನೆಗಳ ವೀಡಿಯೋ ಚಿತ್ರಪ್ರದರ್ಶವನ್ನು ನಗರದ ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್, ನೆಹರೂವೃತ್ತ, ಮತ್ತು ಗಾಂಧಿವೃತ್ತದಲ್ಲಿ ಪ್ರದರ್ಶಿಸಲಾಯಿತು.
ರಾಜ್ಯಾದ್ಯಂತ ಎರಡುತಂಡಗಳಲ್ಲಿ ಟೀಂಮೋದಿ ರಥಾಯಾತ್ರೆ ಸಂಚರಿಸುತ್ತಿದ್ದು, ದಿನಾಂಕ : 5-2-19 ಮತ್ತು 6-2-19ರಂದು ಜಿಲ್ಲೆಯಲ್ಲಿ ಸಂಚರಿಸಲಾಗುತ್ತದೆ. ಮೋದಿ ಸಾಧನೆಗಳ ಕರಪತ್ರ, ಭಿತ್ತಿಪತ್ರ, ಸ್ಟಿಕ್ಕರ್ಸ್ ಮತ್ತು ವೀಡಿಯೋ ಪ್ರದರ್ಶನ ನಡೆಸಲಾಗುವುದು. ನರೇಂದ್ರಮೋದಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಉದ್ದೇಶದಿಂದ ನಡೆಯುವ ಈ ರಥಯಾತ್ರೆಗೆ ಎಲ್ಲಾಕಡೆ ಅಪೂರ್ವ ಸ್ವಾಗತ ದೊರಕಿದೆ ಎಂಬುದಾಗಿ ಸಂಘಟಕರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಭಿಲಾಷ್, ಕೇಶವಮೂರ್ತಿ, ಎ.ರಾಘವೇಂದ್ರ, ಮಂಜುಮದಕರಿ, ರಘುರಾಮ್, ನಿರಂಜನ್, ಕಾಂತರಾಜ್, ಹರೀಶ್, ಚಿತ್ತಯ್ಯ, ನಾಗೇಶ್, ಹೆಚ್.ಎಸ್.ಸುಂದರ್‍ರಾಜ್, ಜನಾರ್ಧನ್‍ಗುಪ್ತಾ, ಎಲ್.ನಾರಾಯಣಾಚಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
