ಹಾಸನ ಜಿಲ್ಲೆಯಲ್ಲಿ ವಕೀಲರ ಕೊಲೆ ಖಂಡಿಸಿ ವಕೀಲರಿಂದ ಪ್ರತಿಭಟನೆ

ಹಿರಿಯೂರು :

        ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾರ್ಚ್ 25ರಂದು ವಕೀಲರ ಸಂಘದ ಸದಸ್ಯ ಸತೀಶ್ ಎಂಬುವವರನ್ನು ದುಷ್ಕರ್ಮಿಗಳು ಹತ್ಯಮಾಡಿರುವುದನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಅನಂತರ ನಗರದ ತಾಲ್ಲೂಕು ಕಛೇರಿಗೆ ತೆರಳಿ ಶಿರಸ್ತೇದಾರ್ ಮಹಂತೇಶ್‍ರವರಿಗೆ ವಕೀಲರ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

          ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಈಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ,ಕೊಲೆ, ದೌರ್ಜನ್ಯ ಕೃತ್ಯಗಳು ಹೆಚ್ಚುತ್ತಿವೆ. ಇಂತಹ ಕೃತ್ಯಗಳು ನಡೆಯದಂತೆ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿದರಲ್ಲದೆ ವಕೀಲ ಸತೀಶ್ ಅವರನ್ನು ಹತ್ಯೆ ಮಾಡಿರುವುದು ನಿಜಕ್ಕೂ ಅಮಾನವೀಯ ಕೃತ್ಯ ಎಂಬುದಾಗಿ ಖಂಡಿಸಿದರು.

       ಈ ಪ್ರತಿಭಟನೆಯಲ್ಲಿ ಸಂಘದ ಜಂಟಿಕಾರ್ಯದರ್ಶಿ ಕೆ.ರಾಜಪ್ಪ, ಎ.ಮಹಲಿಂಗಪ್ಪ, ಕೆ.ವಿ.ದಯಾನಂದ್ , ಎಸ್.ಈರಣ್ಣ, ಮಹಮದ್‍ಷಾ ನವಾಜ್, ಮಹಮದ್ ರಫಿ, ಆರ್. ಸುರೇಶ್, ಮಂಜುನಾಥಗೌಡ ,ಸಿದ್ದೇಶ್, ಜಬೀವುಲ್ಲಾ, ತಿಪ್ಪೇಸ್ವಾಮಿ, ವಿಶ್ವನಾಥ್, ಕಾಂತರಾಜು, ಪಾಂಡುರಂಗಯ್ಯ ಸೇರಿದಂತೆ ಅನೇಕ ವಕೀಲರುಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link