ಹರಪನಹಳ್ಳಿ:
ವಾಲ್ಮಿಕಿ ಸಮುದಾಯಕ್ಕೆ ಕೇಂದ್ರದ ಒಳಮೀಸಲಾತಿ 7% ಇದ್ದರೂ ರಾಜ್ಯದಲ್ಲಿ 3 % ಕ್ಕೆ ಮಾತ್ರ ಸೀಮಿತಗೊಳಿಸಿರುವುದು ವಿಷಾಧನೀಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಹೇಳಿದರು.
ಪಟ್ಟಣದ ಅರಸಿಕೆರೆ ರಸ್ತೆಯ ವಾಲ್ಮಿಕಿ ಭವನದಲ್ಲಿ ವಾಲ್ಮಿಕಿ ನಾಯಕರ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಅತ್ಯಂತ ಕೆಳ ಸಮುದಾಯ ಗುಡ್ಡಗಾಡಿನಲ್ಲಿ ಜೀವನ ಕಳೆದು ಹೋರಾಟದ ಮುಖಾಂತರ ಸಮಾಜದ ಬದುಕನ್ನು ಕಟ್ಟಿಕೊಂಡು ಹಂತ ಹಂತವಾಗಿ ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿರುವ ನಾಯಕ ಸಮುದಾಯವನ್ನು ಮೀಸಲಾತಿಯಲ್ಲೂ ತಾರತಮ್ಯ ನೀತಿ ಅನುಸರಿಸಿ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.
ಸಮಾಜದ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ. ರಾಮಾಯಣದಂತಹ ಮಹಾನ್ ಕಾವ್ಯವನ್ನು ನೀಡಿದ ವಾಲ್ಮೀಕಿ ಯನ್ನು ತೆಗಳಿ ರಾಮಾಯಣದ ಪ್ರಮುಖ ಪಾತ್ರವಾಗಿರುವ ರಾಮನನ್ನು ಪೂಜಿಸುವುದು ಸಂಸ್ಕøತಿಯ ಲಕ್ಷಣವಲ್ಲ. ಮಹಾನ್ ಶರಣೆ ಶಬರಿ ಕೇರಳದಲ್ಲೇ ನೆಲೆಸಿದ್ದು ಅಯ್ಯಪ್ಪ ಸ್ವಾಮಿಗೆ ಪ್ರೀತಿ ಪಾತ್ರಳೆನಿಸಿದ್ದವರು. ಆದರೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಸೂಕ್ತವೇ ?. ಎಂದರು.
ಸಂಸ್ಕಾರದ ರಾಜನೀತಿ ರಾಜರ ಕಾಲದಲ್ಲಿತ್ತು ಇಂದಿನ ರಾಜಕಾರಣದಲ್ಲಿ ಸಂಸ್ಕಾರ ಮರೆತು ಗೌರವನೀಡದೆ ಗುರುಹಿರಿಯರನ್ನು ನೆಡೆಸಿಕೊಳ್ಳುವಂತ ಪರಿಸ್ಥಿತಿಯಿದೆ. ವಿಶ್ವಕ್ಕೆ ಗುರುವಾಗ ಹೊರಟಿರುವ ಹಿಂದೂ ಸಂಸ್ಕøತಿಯಲ್ಲಿ ರಾಜನೀತಿ ಬದಲಾಗಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ ರಾಜಪ್ಪ ಮಾತನಾಡಿ. ಪ್ರತಿಭಾ ಪುರಸ್ಕಾರಗಳು ಮಕ್ಕಳ ಉನ್ನತೀಕರಣಕ್ಕೆ ದಾರಿದೀಪವಾಗಲಿದೆ. ಪ್ರತಿ ಸಮುದಾಯಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡಿದರೆ ಸಾಧನೆಗೆ ಪ್ರೋತ್ಸಾಹ ನೀಡಿದಂತೆ ಎಂದರು.
ವಾಲ್ಮೀಕಿ ನೌಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ. ಪ್ರತೀ ವರ್ಷ ಸಮಾಜದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮಕ್ಕಳಿಗೆ ಪ್ರತಿಭಾ ಪುರಸ್ಕಾರದಂತಾ ವಿಶೇಷ ಕಾರ್ಯಕ್ರಮಗಳು ನಿರಂತರವಾಗಿ ನೆಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸಮಾಜದ ಕೃಷಿ ಹಾಗೂ ವಿವಿಧ ರಂಗದ ಸಾಧಕರಿಗೆ ಸನ್ಮಾನಿಸುವ ಯೋಜನೆಯನ್ನು ಸಮಾಜ ಹಾಕಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ್, ಸದಸ್ಯ ವೈ.ಬಸಪ್ಪ, ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಸಮಾಜದ ಅಧ್ಯಕ್ಷ ಪರಶುರಾಮಪ್ಪ, ಹಾಲದಳ್ಳಿ ಷಣ್ಮುಖಪ್ಪ, ಅರಸಿಕೆರೆ ವೈ.ಅಣ್ಣಪ್ಪ, ಮಾಜಿ ಸೈನಿಕ ರಾಜುಪೂಜಾರ್, ಪುರಸಭೆ ಸದಸ್ಯರಾದ ಅರುಣ್ ಪೂಜಾರ್, ಮ್ಯಾಕಿ ದುರುಗಪ್ಪ, ನೌಕರ ಸಂಘದ ಅದ್ಯಕ್ಷರುಗಳಾದ ಅಂಜೀನಪ್ಪ, ರಾಮಪ್ಪ, ಸಿದ್ದಲಿಂಗನಗೌಡ, ದಾದಾ ಖಲಂದರ್, ಮಂಜುನಾಥ್.ಬಿ., ರಾಜಶೇಖರ್, ರಾಮಮೂರ್ತಿ, ಕಾಟಿ ಹನುಮಂತಪ್ಪ, ಹೆಚ್. ಚಂದ್ರಪ್ಪ, ಹೂವಣ್ಣ, ಗುರುಪ್ರಸಾದ್, ಪದ್ಮರಾಜ್, ಜಯಶ್ರೀ, ಜಯರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.